ಹಾಸನ : ಕೆಲ ದಿನಗಳ ಹಿಂದೆ ನಡೆದ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು,ಈ ಬಗ್ಗೆ ಎಲ್ಲಾ ರಿತಿಯ ತನಿಖೆ ನಡೆಸಬೇಕು ಹಾಗೂ ಮರು ಚುನಾವಣೆ ನಡೆಸುವಂತೆ ಕಾಂಗ್ರೆಸ್ ಯುವ ಮುಖಂಡ ಸಮೀರ್ ಪಾಷಾ ಆಗ್ರಹಿಸಿದರು. ಮೋಸ
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ, ಜಿಲ್ಲೆಯಲ್ಲಿ ಸುಮಾರು 24,245 ಮತದಾರರಿದ್ದು, ಇದರಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಮತಗಳು ನಮ್ಮ ತಂಡಕ್ಕೆ ಬರಬೇಕಾಗಿತ್ತು. ಆದರೆ ಚುನಾವಣೆ ಫಲಿತಾಂಶದಲ್ಲಿ ಅಕ್ರಮ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಿ ನಿಷ್ಠಾವಂತ ಕಾರ್ಯಕರ್ತರಿಗೆ ನ್ಯಾಯ ಒದಗಿಸಬೇಕು ಎಂದು ಹೈಕಮಾಂಡ್ ಗೆ ಪತ್ರ ಬರೆಯಲಾಗಿದೆ. ಮೋಸ
ಇದನ್ನೂ ಓದಿ: ಬಜೆಟ್‌ನಲ್ಲಿ ಕೃಷಿಯನ್ನು ನಿರ್ಲಕ್ಷಿಸಲಾಗಿದೆ
ಜಿಲ್ಲೆಯ ಪ್ರಮುಖ ಕಾಂಗ್ರೆಸ್ ಮುಖಂಡರೊಬ್ಬರು ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಯಾರು ಗೆಲ್ಲಬೇಕು ಹಾಗೂ ಪದಾಧಿಕಾರಿಗಳಾಗಬೇಕು ಎಂಬ ಬಗ್ಗೆ ಪಟ್ಟಿ ತಯಾರಿಸಿ ಆ ಪಟ್ಟಿಯಂತೆ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಈ ಬಗ್ಗೆಯೂ ಹೈಕಮಾಂಡ್ ಗೆ ದೂರು ನೀಡಲಾಗಿದೆ. ತನಿಖೆ ನಂತರ ಅಕ್ರಮ ನಡೆಸಿದವರು ಯಾರು ಎಂದು ಬಹಿರಂಗವಾಗಲಿದ್ದು, ಮತ್ತೊಮ್ಮೆ ಪಾರದರ್ಶಕ ಚುನಾವಣೆ ನಡೆಸಬೇಕು ಎಂದು ಆಗ್ರಹಿಸುತ್ತೇವೆ ಎಂದರು.
ಹಲವಾರು ತಿಂಗಳಿನಿಂದ ಕಾಂಗ್ರೆಸ್ ಪಕ್ಷಕ್ಕೆ ಯುವ ಸದಸ್ಯರನ್ನು ಸೇರಿಸಲಾಗಿದೆ ಹಾಗೂ ಮತದಾನದ ವೇಳೆ ನಮ್ಮ ಬೆಂಬಲಿಗರು ಶ್ರಮಿಸಿ ನಮ್ಮ ತಂಡಕ್ಕೆ ಮತ ಹಾಕಿಸಿದ್ದಾರೆ ಆದರೂ ಸಹ ಚುನಾವಣೆಯಲ್ಲಿ ನಮಗೆ ಸೋಲುಂಟಾಗಿದ್ದು ಇದರಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಅನುಮಾನವಿದೆ ಆದ್ದರಿಂದ ನ್ಯಾಯಾಲಯದಲ್ಲಿ ತಡೆಯಾಜ್ಙೆ ಕೋರಿದ್ದೇವೆ ಮತ್ತು ಮರು ಚುನಾವಣೆಗೆ ಆಗ್ರಹಿಸಿದ್ದೇವೆ ಎಂದು ಹೇಳಿದರು.
ಈ ರೀತಿ ಚುನಾವಣೆಯಲ್ಲಿ ಆಕ್ರಮ ನಡೆದರೆ ನಿಷ್ಠಾವಂತ ಕಾರ್ಯಕರ್ತರಿಗೆ ನೋವುಂಟಾಗಲಿದೆ ಹಾಗೂ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಮುಖಂಡರು ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕು ಹಾಗೂ ಪಾರದರ್ಶಕ ಚುನಾವಣೆ ನಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಪ್ಸರ್ ,ಮನ್ಸೂರ್, ಮೊಹಮ್ಮದ್ ಇತರರು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಬೆಂಗಳೂರು ಏರ್ ಶೋ : ಉಕ್ಕಿನ ಹಕ್ಕಿಗಳ ಮ್ಯಾಜಿಕ್ #AeroShow2025 #AeroShowBengaluru Janashakthi Media