ಸಚಿವ ಯೋಗೇಶ್ವರ್ ಮೇಲೆ ಸುಮೊಟೊ ಕೇಸ್ ದಾಖಲಸಿ : ಉಗ್ರಪ್ಪ ಆಗ್ರಹ

ಬೆಂಗಳೂರು ಜ 16 : ಸಚಿವ ರಮೇಶ್ ಜಾರಕಿಹೊಳಿಗೆ ಮೊದಲ ಬಾರಿಗೆ ಸತ್ಯ ನುಡಿದಿದ್ದಾರೆ ಅವರಿಗೆ ಅಭಿನಂದನೆ ಎಂದು ಮಾಜಿ ಸಂಸದ ವಿ.ಎಸ್​​ ಉಗ್ರಪ್ಪ ಹೇಳಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಮಾರು 9 ಕೋಟಿ ಹಣ ಯೋಗೇಶ್ವರ್ ವ್ಯಯ‌ ಮಾಡಿದ್ದಾರೆ. ಮನೆ‌ಮೇಲೆ ಸಾಲ ಮಾಡಿ ಸರ್ಕಾರ ಬರುವುದಕ್ಕೆ ಹಣ ಖರ್ಚು ಮಾಡಿದ್ದಾರೆ. ಹೀಗಂತ ಸ್ವತಃ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ.

ಇದು ಕಾನೂನು ಬಾಹಿರ ಚಟುವಟಿಕೆಯಾಗಿದೆ. ಇಂತಹ ಅಪರಾಧ ಎಸಗುವಾಗ ಜಾರಕಿಹೊಳಿ ಏನು ಮಾಡುತ್ತಿದ್ದರು? ಅದನ್ನು ಪೊಲೀಸರ ಗಮನಕ್ಕೆ ತರಬೇಕು ಎಂದರು. ಸುಮಾರು 9 ಕೋಟಿ ಹಣವನ್ನು ರಾಜ್ಯ ಸರ್ಕಾರ ಬೀಳಿಸಲು ಯೋಗೇಶ್ವರ್ ವ್ಯಯ ಮಾಡಿದ್ದಾರೆ ಅಂತಾ ಹೇಳಿದ್ದಾರೆ. ಇದು ಕ್ರಿಮಿನಲ್ ಸಂಚು ಆಗಿದ್ದು. ಸೆಕ್ಷನ್ 120 ಎ ಬಿ ಐಪಿಸಿಯಲ್ಲಿ ಇದು ಅಪರಾಧವಾಗಿದೆ.6 ತಿಂಗಳ ಶಿಕ್ಷೆ ಕೂಡ ಇದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕೂಡ ಅಪರಾಧ ಎಂದರು.

ಮಿಸ್ಟರ್ ರಮೇಶ್ ಜಾರಕಿಹೊಳಿ ಅವರೇ, ನೀವು ಈ ದೇಶದ ಸಂವಿಧಾನದ ರೀತಿ ನಡೆದುಕೊಳ್ಳುತ್ತೇನೆ ಅಂತ ಪ್ರಮಾಣ ಮಾಡಿದ್ದೀರ. ಅಪರಾಧದ ಬಗ್ಗೆ ಮಾಹಿತಿ ಗೊತ್ತಿದ್ದರೆ ಅದನ್ನು ಪೊಲೀಸರಿಗೆ ತಿಳಿಸಬೇಕು. ಪೊಲೀಸರಿಗೆ ದೂರು ನೀಡಬೇಕಿರುವುದು ನಿಮ್ಮ ಜವಾಬ್ದಾರಿ ಅಲ್ವಾ ಎಂದು ಪ್ರಶ್ನಿಸಿದರು. ಯೋಗೇಶ್ವರ್ ವಿರುದ್ಧ 30ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ ಇತ್ತು. ಅವರ ಆಸ್ತಿ ಮೌಲ್ಯ 2008ರಲ್ಲಿ 8 ಕೋಟಿ ಇತ್ತು.

2018ರಲ್ಲಿ 40 ಕೋಟಿ ಅಂತಾ ಡಿಕ್ಲೇರ್ ಮಾಡಿದ್ದಾರೆ. 9 ಕೋಟಿ ಆಪರೇಷನ್ ಕಮಲ‌ ಮಾಡಲು, ಭ್ರಷ್ಟ ಹಣವನ್ನು ಸರ್ಕಾರ ಬೀಳಿಸಲು ಬಳಸಿದ್ದಾರೆ. ಬಿಜೆಪಿಯ ನಾಯಕತ್ವ ಇದರಲ್ಲಿ ಭಾಗಿಯಾಗಿದೆ. ಸ್ವತಃ ಸಚಿವರೇ ಇದನ್ನು ಹೇಳಿದ್ದಾರೆ. ಮಂತ್ರಿಗಿರಿ ವ್ಯಾಪಾರಕ್ಕಿದೆಯಾ? ಯತ್ನಾಳ್ ಬ್ಲಾಕ್ ಮೇಲ್ ಮಾಡುವವರಿಗೆ ಮಂತ್ರಿಗಿರಿ ಕೊಡ್ತಾರೆ ಅಂತಾ ಹೇಳಿದ್ದಾರೆ. ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದ್ರೆ ಸೂಮೋಟೋ ಕೇಸ್ ದಾಖಲಿಸಲಿ ಎಂದು ಉಗ್ರಪ್ಪ ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *