ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷನೆ ಮಾಡಿದ ಹವಮಾನ ಇಲಾಕೆ

ಬೆಂಗಳೂರು: ತಮಿಳುನಾಡಿನಲ್ಲಿ ‘ಫೆಂಗಲ್’ ಚಂಡಮಾರುತ ಕರಾವಳಿ ಜಿಲ್ಲೆಗಳನ್ನು ತಲ್ಲಣಿಸಿದೆ. ಚಳಿಯಿಂದ ನಡುಗುತ್ತಿದ್ದ ರಾಜ್ಯದ ಜನರಿಗೆ ಮಳೆಯ ಕಿರಿಕಿರಿ ಹೆಚ್ಚಾಗಿದೆ. ಮಳೆ, ಶೀತದ ವಾತಾವರಣ ಹಾಗೂ ಚಳಿ ಇರಲಿದೆ ಎಂದು ಹವಮಾನ ಇಲಾಕೆ ಮಾಹಿತಿ ನೀಡಿದ್ದು, ಈ ಚಂಡಮಾರುತ ಇನ್ನೂ ಎಷ್ಟು ದಿನ ಇರಲಿದೆ ಎಂಬ ಮಾಹಿತಿಯನ್ನು ತಿಳಿಯಲು ಮುಂದೆ ಓದಿ. ಯೆಲ್ಲೋ

ಶನಿವಾರ, ನವೆಂಬರ್‌ 30 ರಂದು ‘ಫೆಂಗಲ್’ ಚಂಡಮಾರುತ ಕರಾವಳಿ ಭಾಗಕ್ಕೆ ಅಪ್ಪಳಿಸಿತ್ತು, ಒಂದೆರೆಡು ದಿನಗಳಲ್ಲಿ ಇದು ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ದಿನೇ ದಿನೇ ಚಂಡಮಾರುತ ಹೆಚ್ಚಾಗುವ ಮೂಲಕ ರಾಜ್ಯದ ಜನತೆಗೆ ಶಾಕ್ ಕೊಟ್ಟಿದೆ. ನಿನ್ನೆ (ಡಿ.02) ರಂದು ಸೈಕ್ಲೋನ್ ಅಬ್ಬರ ಮುಂದುವರೆದಿದೆ.

ಇದನ್ನೂ ಓದಿ: ಫೆಂಗಲ್ ಚಂಡಮಾರುತ ಅನಾಹುತ :‌ ಪ್ರವಾಹದಿಂದ ಕೊಚ್ಚಿ ಹೋದ ಕಾರು – ಬಸ್

ಡಿ. 03 ರಂದು ಆಕ್ಷೇಯ ದಿಕ್ಕಿನತ್ತ ಹೆಚ್ಚಾಗಿ ಬೀಸುವ ಸಾಧ್ಯತೆ ಇದ್ದು, ಉತ್ತರ ಕೇರಳ-ಕರ್ನಾಟಕ ಹಾಗೂ ಕರಾವಳಿಯ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮಾರ್ಗದ ಕಡೆಗೆ ಸಾಗುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷನೆ ಮಾಡಲಾಗಿದ್ದು, ರಾಜ್ಯದ 10 ಜೈಲಲ್ಲಿಗಳಲ್ಲಿ ಬಾರಿ ಮಳೆಯ ಮುನ್ಸೂಚನೆಯ ಕಾರಣ ರಜೆ ಘೋಷಣೆ ಮಾಡಲಾಗಿದೆ.

ಕರಾವಳಿ ಮಲೆನಾಡು ಭಾಗದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದಾರೆ. ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆಯಿದೆ.

ರಾಜ್ಯದ ಹಲವು ಜಾಗಗಳಲ್ಲಿ ಚಂಡಮಾರುತ ವಿಸ್ತರಣೆ ಆಗುವ ಕಾರಣ, ಮುಂದಿನ 20 ಗಂಟೆಯಲ್ಲಿ 200ಮಿ.ಮಿ ಮಳೆ ನಿರೀಕ್ಷೆ ಇದೆ ಎಂದು ಹವಮಾನ ಇಲಾಕೆ ಹೇಳಿದ್ದು, ರಾಜ್ಯದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಮೈಸೂರು ಸೇರಿ 10 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಇದನ್ನೂ ನೋಡಿ: ಕಷ್ಟದಲ್ಲಿರುವ ಕನ್ನಡವನ್ನು ಸಂರಕ್ಷಿಸೋಣ Janashakthi Media

Donate Janashakthi Media

Leave a Reply

Your email address will not be published. Required fields are marked *