ಮೋದಿ ಫೋಟೋ ಬಿಟ್ಟು ಯಡಿಯೂರಪ್ಪ ಚುನಾವಣೆ ಎದುರಿಸಲಿ -ಕೆ.ಎಸ್.ಈಶ್ವರಪ್ಪ ಛಾಲೆಂಜ್‌

 ಶಿವಮೊಗ್ಗ: ಬಿ.ಎಸ್.ಯಡಿಯೂರಪ್ಪ ವಿರುದ್ಧ ಸೆಡ್ಡು ಹೊಡೆದಿರುವ ಕೆ.ಎಸ್.ಈಶ್ವರಪ್ಪ, ಯಾವುದೇ ಕಾರಣಕ್ಕೂ ಮೋದಿ ಫೋಟೋವನ್ನು ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸುವುದನ್ನು ನಿಲ್ಲಿಸುವುದಿಲ್ಲ ಎಂದು ಮರುಸೆಡ್ಡು ಹೊಡೆದಿದ್ದಾರೆ. ಅಷ್ಟೇ ಅಲ್ಲ, ಯಡಿಯೂರಪ್ಪಗೆ ತಾಕತ್ತಿದ್ದರೆ ಮೋದಿ ಫೋಟೋ ಬಿಟ್ಟು ಚುನಾವಣೆ ಎದುರಿಸಲಿ ಎಂದು ಛಾಲೆಂಜ್‌ ಹಾಕಿದ್ದಾರೆ.

ನಾಳೆ ಏಪ್ರಿಲ್‌ 12 ರಂದು ಸ್ವತಂತ್ರ ಅಭ್ಯರ್ಥಿಯಾಗಿ ಈಶ್ವರಪ್ಪ ನಾಮಪತ್ರ ಸಲ್ಲಿಸಲಿದ್ದು, ಈ ಹಿನ್ನಲೆಯಲ್ಲಿಂದು ಸುದ್ದಿಗೋಷ್ಠಿ ನಡೆಸಿ, ತಮ್ಮ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿಯವರು ನೀಡಿದ ದೂರಿಗೆ ಮತ್ತೆ ಮರಸೆಡ್ಡು ಹೊಡೆದರು.ಬಿಜೆಪಿ ಪಕ್ಷ ನನ್ನನ್ನು ಉಚ್ಛಾಟನೆ ಇನ್ನೂ ಮಾಡಿಲ್ಲ. ಏಕೆ ಮಾಡಿಲ್ಲ ಎನ್ನುವುದು ಗೊತ್ತಾಗುತ್ತಿಲ್ಲ. ಪಕ್ಷ ನನ್ನನ್ನು ಉಚ್ಛಾಟಿಸಲೀ ಎಂದು ಕಾಯುತ್ತಿದ್ದೇನೆ. ಉಚ್ಛಾಟಿಸಿದರೆ, ನಾನು ಅಪ್ಪ,ಮಕ್ಕಳ ವಿರುದ್ಧ ಯಡಿಯೂರಪ್ಪ ವಿರುದ್ಧ ಇನ್ನಷ್ಟು ಭಾಷೆಗಳನ್ನು ಬಳಸಬಹುದು ಎಂದು ಈಶ್ವರಪ್ಪ ಸೂಚ್ಯವಾಗಿ ಹೇಳಿದರು.

ಕೆ.ಎಸ್.ಈಶ್ವರಪ್ಪ ಯಾವುದೇ ಬೆದರಿಕೆ ಹೆದರಿಕೆಗೆ ಬಗ್ಗದೇ ತಮ್ಮತನ ಅಂದರೆ ಯಡಿಯೂರಪ್ಪ ವಿರುದ್ಧದ ಸ್ವತಂತ್ರ ಅಭ್ಯರ್ಥಿಯ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿದ ಈಶ್ವರಪ್ಪ, ಶೇ. 60 ರಷ್ಟು ಜನ ಬಿಜೆಪಿ ಕಾರ್ಯಕರ್ತರು ನಮ್ಮ ಪರವಾಗಿದ್ದೆವೆಂದು ಹೇಳುತ್ತಿದ್ದಾರೆ.ಹಿಂದೂತ್ವವನ್ನು ಮೆಚ್ಚಿ ನನ್ನನ್ನು ಪ್ರೋತ್ಸಾಹಿಸುತ್ತಿದ್ದಾರೆ. ಎಲ್ಲೆಡೆ ಬಿಜೆಪಿ ಕಾರ್ಯಕರ್ತರು ನನ್ನ ಪರ ಒಲವು ವ್ಯಕ್ತಪಡಿಸುತ್ತಿದ್ದಾರೆ.ಯಡಿಯೂರಪ್ಪ ಮತ್ತು ಅವರ ಕಡೆಯವರು ಏಕೆ ಹೀಗೆ ಮಾಡುತ್ತಿದ್ದಾರೆ ಎಂದು ಅವರನ್ನೇ ಬಿಜೆಪಿ ನಾಯಕರು ಯಡಿಯೂರಪ್ಪ ಹೀಗೆ ಏಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಸಚಿವ ಕೆ.ಎಸ್ ಈಶ್ವರಪ್ಪ ಅವರು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

ಈಶ್ವರಪ್ಪರನ್ನು ಈ ಬಾರಿ ನಮಗಾಗಿ ಬಿಟ್ಟುಬಿಡಿ ಎನ್ನುತ್ತಿದ್ದಾರೆ. ಇನ್ನು ಕಾಂಗ್ರೆಸ್ ಹಾಗೂ ಜೆಡಿಎಸ್‌ ಕಾರ್ಯಕರ್ತರು, ಮುಖಂಡರು ಕೂಡ ನಮ್ಮ ಪರವಾಗಿದ್ದಾರೆ. ಕಾಂಗ್ರೆಸ್ ನ ಅಭ್ಯರ್ಥಿ ವೀಕ್ ಇದ್ದಾರೆಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ನನಗೆ ಫೋನ್ ಮಾಡಿ ನನಗೆ ಹೇಳುತ್ತಿದ್ದಾರೆ.ಹೀಗಾಗಿ ನನ್ನನ್ನು ಬೆಂಬಲಿಸುವುದಾಗಿ ಹೇಳುತ್ತಿದ್ದಾರೆ ಎಂದರು.

ನನ್ನ ಪರವಾಗಿ ಇರುವ ಅದೆಷ್ಟೋ ಮುಖಗಳನ್ನು ನಾನು ನೋಡಿಯೇ ಇಲ್ಲ. ಆದರೂ ಅವರೆಲ್ಲ ಬಹಳ ವ್ಯವಸ್ಥಿತವಾಗಿ ನನ್ನ ಪರ ಒಲವು ತೋರಿಸುತ್ತಿದ್ದಾರೆ. ಬಹಳ ವ್ಯವಸ್ಥಿತವಾಗಿ ನಮ್ಮ ಪರವಾಗಿ ಕೆಲಸ ಮಾಡುತ್ತಿದ್ದಾರೆ.ಇನ್ನು ಕೆಲವರು ನನ್ನ ವಿರುದ್ಧ ನಾನು ನಾಮಪತ್ರ ಹಿಂಪಡೆಯುತ್ತೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.ಇಂತಹ ಅಪಪ್ರಚಾರಕ್ಕೆ ಕಿವಿಕೊಡಬೇಡಿ. ನಾನು ಚುನಾವಣೆಯಲ್ಲಿ ಸ್ಪರ್ಧಿಸಿಯೇ ಸ್ಪರ್ಧಿಸುತ್ತೇನೆ. ನಾಮಪತ್ರ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದರು.

ಬಿಜೆಪಿ ಶುದ್ಧಿಕರಣವಾಗಬೇಕೆಂಬ ಉದ್ದೇಶದಿಂದ ಧೈರ್ಯ ಮಾಡಿ ನಾನು ಹೋರಾಡುತ್ತಿದ್ದೆನೆ.ಸಿ.ಟಿ ರವಿ, ಒಳಗಿದ್ದು ಹೋರಾಡುತ್ತಿದ್ದಾರೆ.ಸಿ.ಟಿ. ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ನಾನು ಹೇಳಿಲ್ಲ.ಅವರಿಗೆ ಅವಕಾಶ ಕೊಟ್ಟಿಲ್ಲ ಎಂದು ನಾನು ಹೇಳಿದ್ದೆನೆ.ಸಿ.ಟಿ. ರವಿ ಪ್ರತಾಪ್ ಸಿಂಹ ಹಾಗೂ ಸದಾನಂದಗೌಡ, ಕಟೀಲಿಗೆ ಅವಕಾಶ ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದೇನೆ ಎಂದು ಈಶ್ವರಪ್ಪ ಹೇಳಿದರು.

ನಾಳೆ ಬೆಳಿಗ್ಗೆ ಕೆ.ಎಸ್.ಈಶ್ವರಪ್ಪ ನಾಮಪತ್ರ ಸಲ್ಲಿಸುತ್ತಿರುವುದರಿಂದ ಈಶ್ವರಪ್ಪಗೆ ಮಾಜಿ ಮೇಯರ್ ಸುವರ್ಣ ಶಂಕರ್ ನೇತೃತ್ವದಲ್ಲಿ ಕೆಲವು ಮಹಿಳೆಯರು 24 ಸಾವಿರ ರೂಪಾಯಿ ಹಣವನ್ನು ದೇಣಿಗೆ ನೀಡಿದ್ದು ಕಂಡುಬಂದಿತು.

Donate Janashakthi Media

Leave a Reply

Your email address will not be published. Required fields are marked *