ಡಬ್ಲ್ಯುಎಚ್‌ಒ ಜಾಗತಿಕ ಹೆಪಟೈಟಿಸ್ ವರದಿ ಬಿಡುಗಡೆ; ಅತಿಹೆಚ್ಚು ಹೆಪಟೈಟಿಸ್‌ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ

ನವದೆಹಲಿ : ಜಾಗತಿಕವಾಗಿ ಸಾವಿಗೆವೈರಲ್ ಹೆಪಟೈಟಿಸ್  ಎರಡನೇ ಪ್ರಮುಖ ಸಾಂಕ್ರಾಮಿಕ ಕಾರಣವಾಗಿದೆ. ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) 2024 ರ ಜಾಗತಿಕ ಹೆಪಟೈಟಿಸ್ ವರದಿಯ ಪ್ರಕಾರ, 2022 ರಲ್ಲಿ 1.3 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ. ವೈರಲ್ ಹೆಪಟೈಟಿಸ್ನಿಂದ ಅಂದಾಜು ಸಾವುಗಳ ಸಂಖ್ಯೆ 2019 ರಲ್ಲಿ 1.1 ಮಿಲಿಯನ್ನಿಂದ 2022 ರಲ್ಲಿ 1.3 ಮಿಲಿಯನ್ಗೆ ಏರಿದೆ ಎಂದು WHO ಡೇಟಾ ಬಹಿರಂಗಪಡಿಸುತ್ತದೆ. ಡಬ್ಲ್ಯುಎಚ್‌ಒ

ಅತಿಹೆಚ್ಚು ವೈರಲ್ ಹೆಪಟೈಟಿಸ್‌ನ ಪ್ರಕರಣಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಈ ಸೊಂಕಕಿನಿಂದ ಯಕೃತ್ತಿನ ಉರಿಯೂತ, ಹಾನಿ ಮತ್ತು ಯಕೃತ್ತಿನ ಕ್ಯಾನ್ಸರ್ ಸಂಭವಿಸುವ ಲಕ್ಷನಗಳು ಹೆಚ್ಚಿವೆ.ಹೆಪಟೈಟಿಸ್‌ನಲ್ಲಿ ಎರಡು ರೀತಿಯ ಸೋಕಿದ್ದು,  2.9 ಕೋಟಿ ಜನರು ಹೆಪಟೈಟಿಸ್ ಬಿ ಸೋಂಕಿನೊಂದಿಗೆ ಮತ್ತು 0.55 ಕೋಟಿ ಜನರು ಹೆಪಟೈಟಿಸ್ ಸಿ ಸೋಂಕಿನೊಂದಿಗೆ ವಾಸಿಸುತ್ತಿದ್ದಾರೆ. ಮಂಗಳವಾರ ವಿಶ್ವ ಆರೋಗ್ಯ ಸಂಸ್ಥೆ (WHO) ಜಾಗತಿಕ ಹೆಪಟೈಟಿಸ್ ವರದಿ 2024 ಅನ್ನು  ಬಿಡುಗಡೆ ಮಾಡಿದೆ. ಡಬ್ಲ್ಯುಎಚ್‌ಒ

ಇದನ್ನು ಓದಿ : ಕಂದಕಕ್ಕೆ ಉರುಳಿದ ಬಸ್;‌ ಛತ್ತೀಸ್​ಗಢದಲ್ಲಿ ದುರಂತ

ವರದಿಯ ಪ್ರಕಾರ,  2022 ರಲ್ಲಿ ಭಾರತದಲ್ಲಿ ಈ ಸೋಂಕುನಿಂದಾಗಿ 1.23 ಲಕ್ಷ ಜನರನ್ನು ಸಾವನ್ನಿಪಿದ್ದು, ಹೆಪಟೈಟಿಸ್ ಸಿ ಪ್ರಕರಣಗಳೇ ಹೆಚ್ಚಿವೆ ಎಂದು ವರದಿಯಾಗಿವೆ.  ಈ ಸೋಂಕುಗಳು ಹೆರಿಗೆಯ ಸಮಯದಲ್ಲಿ ತಾಯಿಯಿಂದ ಮಗುವಿಗೆ ಹರಡುತ್ತದೆ. ಸರಿಯಾಗಿ ಪರೀಕ್ಷಿಸದ ರಕ್ತ ವರ್ಗಾವಣೆಯ ಸಮಯದಲ್ಲಿ, ಸೋಂಕಿತ ವ್ಯಕ್ತಿಯ ರಕ್ತದ ಸಂಪರ್ಕದ ಸಮಯದಲ್ಲಿ ಅಥವಾ ಮಾದಕವಸ್ತು ಬಳಕೆದಾರರಿಂದ ಸೂಜಿಗಳನ್ನು ಹಂಚಿಕೊಳ್ಳುವಾಗ ಹೆಪಟೈಟಿಸ್ ಹರಡುತ್ತದೆ. ವ್ಯಾಕ್ಸಿನೇಷನ್ ಮೂಲಕ ಹೆಪಟೈಟಿಸ್ ಬಿ ಅನ್ನು ತಡೆಗಟ್ಟಬಹುದು ಮತ್ತು ಗುನಪಡಿಸಬಹುದು ಎಂದು ವರದಿ ಹೇಳುತ್ತದೆ.

“ಭಾರತದಲ್ಲಿ ಹೆಪಟೈಟಿಸ್ ಬಿ ಯ ಪ್ರಕರಣಗಳನ್ನು ಕಡಿಮೆ ಮಾಡಲು, ಎಲ್ಲಾ ನವಜಾತ ಶಿಶುಗಳಿಗೆ ಸಂಪೂರ್ಣ ಲಸಿಕೆ ನೀಡುವ ಅವಶ್ಯಕತೆಯಿದೆ.  ಲಸಿಕೆಯನ್ನು ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಸೇರಿಸುವ ಮೊದಲು ವಯಸ್ಕರಿಗೆ ಸಹ ಇದನ್ನು ನೀಡಬೇಕು ”ಎಂದು ದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಲಿವರ್ ಮತ್ತು ಪಿಲಿಯರಿ ಸೈನ್ಸಸ್‌ನ ಉಪಕುಲಪತಿ ಡಾ ಎಸ್‌ಕೆ ಸರಿನ್ ಹೇಳುತ್ತಾರೆ.

ಇದನ್ನು ನೋಡಿ : ರೈತ ಸಮುದಾಯವನ್ನು ಹಿಂಡಿ ಹಿಪ್ಪೆ ಮಾಡಿದ ಬಿಜೆಪಿಗೆ ರೈತರು ಓಟು ಹಾಕುವುದಿಲ್ಲ Janashakthi Media

Donate Janashakthi Media

Leave a Reply

Your email address will not be published. Required fields are marked *