ನಗರವನ್ನು ಸ್ವಚ್ಛವಾಗಿಡುವುದು ನಮ್ಮಗಳ ಮೂಲಭೂತ ಕರ್ತವ್ಯ – ಇಂಜಿನೀಯರ್ ಕವಿತ

ಹಾಸನ: ಕಸ ಎಲ್ಲೆಂದರಲ್ಲೇ ಬಿಸಾಕುವುದು ನಾಗರೀಕ ಲಕ್ಷಣ ಅಲ್ಲ, ನಗರ ಸಭೆ ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದೆ ಆದರೂ ಅನಾಗರೀಕರಾಗಿ ನಾವು ಕಸವನ್ನು ಬೀದಿಗೆಸೆದು ನಗರವನ್ನು ಹಾಳುಮಾಡುತ್ತಿದ್ದೇವೆ ನಗರವನ್ನು ಸ್ವಚ್ಛವಾಗಿಡುವುದು ನಮ್ಮಗಳ ಮೂಲಭೂತ ಕರ್ತವ್ಯ ಎಂದು ಸಮಾಜಸೇವಕಿ ಹಾಗೂ ನಗರಸಭೆ ಇಂಜಿನೀಯರ್ ಕವಿತ ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ಜಯನಗರ ಬಿಜಿವಿಎಸ್ ಘಟಕ ನಗರದ ರಿಂಗ್‌ರಸ್ತೆಯ ವೃತ್ತದಲ್ಲಿ ಸಾರ್ವಜನಿಕವಾಗಿ ಹಮ್ಮಿಕೊಂಡಿದ್ದ ಬಿಜಿವಿಎಸ್ ಸದಸ್ಯತ್ವ ಆಂದೋಲನ ಉದ್ಘಾಟನ ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿತ್ತು. ಸಮಾಜಸೇವಕಿ ಹಾಗೂ ನಗರಸಭೆ ಇಂಜಿನೀಯರ್ ಕವಿತ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಸ ಎಲ್ಲೆಂದರಲ್ಲೇ ಬಿಸಾಕುವುದು ನಾಗರೀಕ ಲಕ್ಷಣ ಅಲ್ಲ, ನಗರ ಸಭೆ ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದೆ. ಆದರೂ ಅನಾಗರೀಕರಾಗಿ ನಾವು ಕಸವನ್ನು ಬೀದಿಗೆಸೆದು ನಗರವನ್ನು ಹಾಳುಮಾಡುತ್ತಿದ್ದೇವೆ. ನಗರವನ್ನು ಸ್ವಚ್ಛವಾಗಿಡುವುದು ನಮ್ಮಗಳ ಮೂಲಭೂತ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.

ಭಾರತದ ಅಭಿವೃದ್ಧಿಗೆ ವಿಜ್ಞಾನ ಮಾರ್ಗವೆ ಅಂತಿಮ ವಿಜ್ಞಾನ ಮಾರ್ಗಕ್ಕೆ ವೈಜ್ಞಾನಿಕ ಮನೋಭಾವ ಬಿತ್ತಲು ಎಲ್ಲರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಇದು ಜೀವನದ ಕಷ್ಟಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳುವ ಶಕ್ತಿಯನ್ನು ನೀಡುತ್ತದೆ ಎಂದು ನುಡಿದು ಬಿಜಿವಿಎಸ್ ಜಯನಗರ ಬಡಾವಣೆಯಲ್ಲಿ ಕೋವಿಡ್ ಕಾಲದಿಂದ ಆರೋಗ್ಯದ ಕುರಿತು, ಅಂಗಳಪೌಷ್ಠಿಕ ತೋಟಗಳ ಕುರಿತು, ಪ್ಲಾಸ್ಟಿಕ್ ನಿಯಂತ್ರಣ ಕುರಿತು ನಿರಂತರವಾಗಿ ಜನರಲ್ಲಿ ಆರೋಗ್ಯಕರ ಚಟುವಟಿಕೆ ನಡೆ ಇಟ್ಟುಕೊಂಡು ಬರುತ್ತಿರುವುದು ಶ್ಲಾಘನೀಯ ಹೆಚ್ಚೆಚ್ಚು ಜನ ಬಿಜಿವಿಎಸ್ ಸದಸ್ಯರಾಗಿ ನಮ್ಮ ಬಡಾವಣೆಯನ್ನು ಕಸಮುಕ್ತ ಬಡಾವಣೆ ಮಾಡಿ ಹಸಿರು ಜಯನಗರ ಮಾಡೋಣ ಎಂದು ಸಾರ್ವಜನಿಕರಿಗೆ  ಕರೆನೀಡಿದರು.

ಇದನ್ನೂ ಓದಿ:ಬಿಜಿವಿಎಸ್‌ ವತಿಯಿಂದ ಪ್ಲಾಸ್ಟಿಕ್‌ ಕಸ ಸಂಗ್ರಹ-ಪರಿಸರ ಇಟ್ಟಿಗೆ ನಿರ್ಮಾಣ ಚಟುವಟಿಕೆ

ಹಲೋಹಾಸನ್ ಪತ್ರಿಕೆಯ ಸಂಪಾದಕ ರವಿನಾಕಗೋಡು ಮಾತನಾಡಿ, ಜನಗಳಲ್ಲಿ ವಿಜ್ಞಾನವನ್ನು ಪ್ರಚಾರ ಮಾಡಿ ತನ್ನ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಲು ಭಾರತ ಜ್ಞಾನ ವಿಜ್ಞಾನ ಸಮಿತಿಯು ಕಳೆದ 33 ವರ್ಷಗಳಿಂದಲೂ ದೇಶಾದ್ಯಂತ ಶ್ರಮಿಸುತ್ತಿದೆ. ಹಾಸನದಲ್ಲೂ ಕೂಡ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಪರಿಸರ, ವಿಜ್ಞಾನ ಹಬ್ಬ, ಜಲಾಂದೋಲನದಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ನಾನು ಈ ಚಟುವಟಿಕೆಗಳನ್ನು ಬಹಳಕಾಲದಿಂದ ಗಮನಿಸುತ್ತಿದ್ದೇನೆ ಎಂದು ಮಾತನಾಡಿದ ಅವರು ಎಲ್ಲರು ಜಯನಗರ ಬಡಾವಣೆ ಕಸಮುಕ್ತಮಾಡಲು ಬಿಜಿವಿಎಸ್ ಜೊತೆಗೂಡಲು ಕರೆನೀಡಿದರು.

ವೈಜ್ಞಾನಿಕ ಮನೋಭಾವದಿಂದ ಪರಿಸರದ ವಿಷಯ, ಕಸದ ವಿಷಯವನ್ನ ಜನತೆ ಮತ್ತು ಮಕ್ಕಳು ಸರಿಯಾಗಿ ಅಧ್ಯಯನ ಮಾಡುವುದರಿಂದ ಭೂಮಿಯನ್ನು ನೂರಾರು ತಲೆಮಾರುಗಗಳಿಗೆ ಉಳಿಸಬಹುದು  ಅಭಿಯಾನದಲ್ಲಿ ಪಾಲ್ಗೊಂಡಿಂದ್ದ ಹೊಯ್ಸಳಪಥ ಪತ್ರಿಕೆಯ ಸಂಪಾದಕ ರಘುನಂದನ್ ಮಾತನಾಡಿ ಕಳವಳವನ್ನ ವ್ಯಕ್ತಪಡಿಸಿದರು.

ಬಿಜಿವಿಎಸ್ ಜಿಲ್ಲಾ ಸಮಿತಿ ಸದಸ್ಯೆ ಆಶಾ ಅಭಿಯಾನದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿ ಅವರು ಕಳೆದ ಮೂರು ವರ್ಷಗಳಿಂದ ಜಯನಗರ ಘಟಕ ಬಿಜಿವಿಎಸ್ ೫೦ ಮನೆಗಳಲ್ಲಿ “ಕಸದಿಂದ-ರಸ” ಹೆಸರಿನಲ್ಲಿ ಅಂಗಳ ಕೃಷಿ ಹಾಗೂ ಘನತ್ಯಾಜ್ಯನಿರ್ವಹಣೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಅದನ್ನು ಈ ವರ್ಷ 100 ಕ್ಕೇರಿಸುವ ಗುರಿಹೊಂದಿದೆ,ಎಂದು ತಿಳಿಸಿದರು. ಬಡಾವಣೆಯನ್ನು ಹಸಿರುಬಡಾವಣೆ ಮಾಡುವ ಹಿನ್ನಲೆಯಲ್ಲಿ ಹಾಸನ ನಗರದ ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ರಿಂಗ್‌ರಸ್ತೆಯ ವಿಭಜಕದ ನಡುವೆ ಹೂಗಿಡಗಳನ್ನು ನೆಟ್ಟು ಬೆಳಸಲಾಗಿದೆ ಎಂದು ಮಾತನಾಡಿ  ನಾಗರೀಕರ ಗಮನ ಸೆಳೆದ ಅವರು , ಈಗ ಬಡಾವಣೆಯಲ್ಲಿ ಪೌಷ್ಠಿಕ ಅಂಗಳ ನಿರ್ಮಿಸುವ ಗುರಿ ಹೊಂದಿದೆ, ಬಡಾವಣೆಯ ಜನರ ನಡುವೆ ಸಾಹಿತ್ಯಿಕ, ಸಾಂಸ್ಕೃತಿಕ ಅಭಿವೃದ್ಧಿಗಾಗಿ ಮನೆಯಂಗಳದಲಿ ಮಾತುಕತೆ ಮಾಸಿಕ ಮನೆ ಮನೆ ಚಟುವಟಿಕೆ ನಡೆಸಿ ನಮ್ಮ ಬಡಾವಣೆಯನ್ನು ಮಾದರಿ ಬಡಾವಣೆಯನ್ನಾಗಿ ರೂಪಿಸಲು ಬಿಜಿವಿಎಸ್ ಸದಸ್ಯತ್ವ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ವಿವರಸಿದರು.

ಈ ಸಂದರ್ಬದಲ್ಲಿ ಕ್ಲಿಯರಿನ್ ಸಂಸ್ಥೆಯ ಚಂದ್ರಶೇಖರ್, ಹಸಿರುಭೂಮಿ ಪ್ರತಿಷ್ಠಾನದ ಶಿವಶಂಕರಪ್ಪ, ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷ ಡಾ.ಮಂಜುನಾಥ್, ಸಹಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ, ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಭಾನುಮತಿ, ಖಜಾಂಚಿ ಸುರೇಶ್, ಸಹಕಾರ್ಯದರ್ಶಿ ಶ್ರೀನಿವಾಸ್, ವಕೀಲ ಗುರುರಾಜ್, ಬಿಜಿವಿಎಸ್ ಜಯನಗರಘಟಕ ಅಧ್ಯಕ್ಷೆ ಶಾರದಾ, ಉಪಾದ್ಯಕ್ಷೆ ಉಪಸ್ಥಿತರಿದ್ದು ಬಿಜಿವಿಎಸ್ ಸದಸ್ಯತ್ವ ನಡೆಸಿದರು. ಬಿಜಿವಿಎಸ್ ತಾ.ಕಾರ್ಯದರ್ಶಿ ವನಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು, ಘಟಕ ಕಾರ್ಯದರ್ಶಿ ಮೋನಿಕಾ ಸ್ವಾಗತಿಸಿ, ಉಪಾದ್ಯಕ್ಷೆ ಜಾನಕಿ ವಂದನಾರ್ಪಾಣೆಯನ್ನ ನೇರೆವೆರಿಸಿಕೊಟ್ಟರು.

Donate Janashakthi Media

Leave a Reply

Your email address will not be published. Required fields are marked *