ಬೆಂಗಳೂರು: ನಿಯಮಬಾಹಿರವಾಗಿ ಬೆಂಗಳೂರು ಉತ್ತರ ವಿಶೇಷ ಜಿಲ್ಲಾಧಿಕಾರಿ ಯಲಹಂಕ ವಾಯುನೆಲೆಗೆ ಸೇರಿದ 10 ಎಕರೆ 23 ಗುಂಟೆ ಜಾಗವನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತಾ ವರ್ಗಾವಣೆ ಮಾಡಲು ಆದೇಶಿಸಿದ್ದು, ಇದರ ವಿರುದ್ದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹೈಕೋರ್ಟ್ ಮೊರೆ ಹೋಗಿರುವುದು ನಡೆದಿದೆ.
ಅಕ್ರಮದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು’ ಎಂದು ಆಗ್ರಹಿಸಿ ಪ್ರಧಾನ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
ಕೆ.ಎನ್. ಚಕ್ರಪಾಣಿ ಎನ್ನುವವರು ದೂರು ಸಲ್ಲಿಸಿದ್ದು, ರಕ್ಷಣಾ ಇಲಾಖೆಯನ್ನು ಪ್ರತಿವಾದಿಯನ್ನಾಗಿ ಮಾಡದೆಯೇ ವಿಶೇಷ ಜಿಲ್ಲಾಧಿಕಾರಿ ಬೆಂಗಳೂರು ಉತ್ತರ (ಹೆಚ್ಚುವರಿ) ತಾಲ್ಲೂಕಿನ ಹುಣಸಮಾರನಹಳ್ಳಿ ಪ್ರದೇಶದ ವ್ಯಾಪ್ತಿಯಲ್ಲಿರುವ ಜಾಗವನ್ನು ಜಾಗವನ್ನು ಪರಭಾರೆಯನ್ನು ಮಾಡಿಸಿರುವುದನ್ನು ಕೂಡಲೇ ರದ್ದುಪಡಿಸಬೇಕೆಂದು ರಕ್ಷಣಾ ಇಲಾಖೆಗೆ ತಿಳಿಸಲಾಗಿದೆ.
ಹುಣಸಮಾರನಹಳ್ಳಿ ಗ್ರಾಮವು ಜೋಡಿ ಇನಾಂ ಗ್ರಾಮ. ಈಗಿನ ಪಹಣಿ ಪ್ರಕಾರ, ಮೂರು ಸರ್ವೆ ಸಂಖ್ಯೆಯಲ್ಲಿರುವ 10 ಎಕರೆ 23 ಗುಂಟೆ ರಕ್ಷಣಾ ಇಲಾಖೆಯ ಹೆಸರಿನಲ್ಲಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ