ಬೆಂಗಳೂರು , ಜ. 04 : ಪೂರ್ಣಾವಧಿ ಸಿಎಂ ಆಗಬೇಕಾದರೆ ಶಾಸಕರ ವಿಶ್ವಾಸ ಅತಿ ಮುಖ್ಯ, ಹಾಗಾಗಿ ಶಾಸಕರ ವಿಶ್ವಾಸ ಗಳಿಸಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ. ನಗರದ ಖಾಸಗಿ ಹೊಟೇಲ್ ನಲ್ಲಿ ಕಳೆದ ಎರಡು ದಿನಗಳಿಂದ ವಯಲವಾರು ಸಭೆ ಆರಂಭಿಸಿರುವುದು ಈ ಅನುಮಾನಗಳಿಗೆ ಕಾರಣವಾಗಿದೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, “ಅವಧಿ ಮುಗಿಯುವ ವರೆಗೂ ಯಡಿಯೂರಪ್ಪ” ಸಿಎಂ ಎಂದು ಘೊಷಣೆ ಮಾಡಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತ್ರ ಪದೆ ಪದೆ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಯಡಿಯೂರಪ್ಪಗೆ ಭಯ ಹುಟ್ಟಿಸುತ್ತಿರುವುದಂತೂ ನಿಜ. ತನ್ನ ಹುದ್ದೆಯ ಸುತ್ತ ಎದ್ದಿರುವ ಚರ್ಚೆ ಬೂದಿ ಮುಚ್ಚಿದ ಕೆಂಡದಂತೆ ಎಂದು ಅರಿತು ಯಡಿಯೂರಪ್ಪ ಸಭೆ ನಡೆಸುತ್ತಿದ್ದಾರೆ ಎಂಬ ಚರ್ಚೆಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.
ಇವತ್ತು ಯಡಿಯೂರಪ್ಪ ಮೊದಲ ಹಂತದಲ್ಲಿ ಕಲ್ಯಾಣ ಕರ್ನಾಟಕ ಭಾಗದ 17 ಶಾಸಕರ ಜೊತೆ ಸಭೆ ನಡೆಸಿದ್ದು, ಸಭೆಯಲ್ಲಿ ಬಿದರ್ ನಿಂದ ಒಬ್ಬ ಶಾಸಕ, ಕಲಬುರಗಿ 5 ಶಾಸಕರು, ರಾಯಚೂರು-02, ಬಳ್ಳಾರಿ -04, ಕೊಪ್ಪಳ – 03, ಯಾದಗಿರಿ 02 ಶಾಸಕರು ಭಾಗಿಯಾಗಿದ್ದರು.

ಮನವರಿಕೆ ಮೂಲಕ ವಿಶ್ವಾಸ ಗಳಿಸಲು ಸಿಎಂ ಬಿಎಸ್ವೈ ಮುಂದಾಗಿದ್ದು, ಮೂರು ವಲಯವಾರು ಸಭೆ ನಡೆಸಿದ್ದಾರೆ. ಈ ಸಭೆಗೆ ಡಿಸಿಎಂ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಶಾಸಕ ರಾಜುಗೌಡ, ರೇಣುಕಾಚಾರ್ಯ ಆಗಮಿಸಿದ್ದರು. ಕಾರ್ಕಳ ಶಾಸಕ ಸುನೀಲ್ ಕುಮಾರ್,ಸಚಿವ ಸುರೇಶ್ ಕುಮಾರ್, ಸಚಿವ. ಆನಂದ ಸಿಂಗ್ ,ಸಚಿವ ಎಸ್.ಟಿ ಸೋಮಶೇಖರ್ ಡಿಸಿಎಂ ಅಶ್ವಥ್ ನಾರಯಣರವರು ಆಗಮಿಸಿದ್ದರು. ಇದನ್ನೆಲ್ಲ ಗಮನಿಸುತ್ತಿದ್ದರೆ ಸಿಎಂ ಹುದ್ದೆ ಉಳಿಸಿಕೊಳ್ಳಲು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಂತೆ ಕಾಣುತ್ತದೆ.

ಇನ್ನೊಂದು ಮೂಲದ ಪ್ರಕಾರ ಮುಂದಿನ ಬಜೆಟ್ ಸಿದ್ದತೆಗೆ ಶಾಸಕರ ಸಲಹೆ ಪಡೆಯಲು ಮಾಸ್ಟರ್ ಪ್ಲ್ಯಾನ್ ಹಾಕಿಕೊಂಡಿದ್ದು, ಆರ್ಥಿಕ ಸಂಕಷ್ಟದಿಂದ ಈ ಬಾರಿ ಕ್ಷೇತ್ರಾಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಲಾಗುವುದಿಲ್ಲ ಎಂಬ ವಿಚಾರ ಶಾಸಕರಿಗೆ ಮನವರಿಕೆ ಮಾಡಲು ಬಿಎಸ್ವೈ ತಂತ್ರ ಎಣೆದಿದ್ದಾರೆಂದು ಎಂಬ ಮಾತುಗಳು ಕೇಳಿಬರುತ್ತಿವೆ. ಸಭೆಯಲ್ಲಿ ಪ್ರತಿಯೊಬ್ಬ ಶಾಸಕರ ಅನುದಾನ ಸಮಸ್ಯೆ, ಕುಂದು ಕೊರತೆ, ಈ ಹಿಂದೆ ಶಾಸಕರಿಗೆ ನೀಡಲಾದ ಭರವಸೆ, ಕಾರ್ಯರೂಪಕ್ಕೆ ಬಂದಿರುವ ಕೆಲಸ, ಅಧಿಕಾರಿಗಳ ವರ್ಗಾವಣೆ, ನಿಗಮ ಮಂಡಳಿಗಳಲ್ಲಿ ಆಯಾ ಕ್ಷೇತ್ರಕ್ಕೆ ನೀಡಲಾಗಿರುವ ಸ್ಥಾನಮಾನ ಎಷ್ಟು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದ್ದು, ಅಂಕಿ ಅಂಶಗಳ ಆಧಾರವನ್ನು ಒಳಗೊಂಡಿರುವುದುದಾಗಿ ತಿಳಿದು ಬಂದಿದೆ.

ಈ ಮಹತ್ವದ ಸಭೆಯಲ್ಲಿ ಪ್ರಭುಚೌಹ್ಹಾಣ್ ಬೀದರ್ ಶಾಸಕ, ವೆಂಕಟ್ ರೆಡ್ಡಿ ಮದ್ನಾಳ್, ಹುನಾಬಾದ್ ಶಾಸಕ ರಾಜಶೇಖರ ಪಾಟೀಲ್, ವಿಜಯನಗರದ ಶಾಸಕ ಆನಂದ ಸಿಂಗ್ ಕಲಬುರ್ಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಆಳಂದ ಶಾಸಕ ಸುಭಾಶ್ ಗುತ್ತೇದಾರ್ ಕಲಬುರಗಿ ದಕ್ಷಿಣದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರು ಕಲಬುರಗಿ ಉತ್ತರ ಶಾಸಕ ಪರಣ್ಣಾ ಮನವಳ್ಳಿ, ಚಿಂಚೊಳ್ಳಿ ಶಾಸಕ ಅವಿನಾಶ್ ಜಾದವ್ ಶಿರಗೂಪ್ಪ ಶಾಸಕ ಸೋಮಲಿಂಗಪ್ಪ ರಾಜೂಗೌಡ, ಬಸವರಾಜ್ ದಡೇಸೂರು, ಕರುಣಾಕರ್ ರೆಡ್ಡಿ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಗೆ ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ, ಬಳ್ಳಾರಿ ಗ್ರಾಮೀಣ ಶಾಸಕ ಎನ್ ವೈ ಗೋಪಾಲಕೃಷ್ಣ ದೇವದುರ್ಗ ಶಾಸಕ ಶಿವನಗೌಡ ನಾಯ್ಕ್ ಸಭೆಗೆ ಗೈರಾಗಿದ್ದಾರೆ
ಮುಂಬೈ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಭಾಗದ ಶಾಸಕರ ಸಭೆ. ಮಲೆನಾಡು ಹಾಗೂ ಹಳೆಯ ಮೈಸೂರು ಭಾಗದ ಶಾಸಕರ ಸಭೆ, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯ ಭಾಗದ ಶಾಸಕರ ಸಭೆಯನ್ನು ಕೆರೆಯಲಾಗಿದೆ. ಇವರ ಜೊತೆಯೂ ಮೇಲಿನ ಎರಡು ವಿಚಾರಗಳ ಕುರಿತಾಗಿ ಚರ್ಚೆಯನ್ನು ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.