ಸೌತಾಂಪ್ಟನ್ :ಸೌತಾಂಪ್ಟನ್ ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಭರ್ಜರಿ ಜಯ ಗಳಿಸಿದೆ. ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ ಪಡೆ ನಿರಾಸೆ ಅನುಭವಿಸಿದೆ. ನ್ಯೂಜಿಲೆಂಡ್ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದಿದೆ.
ಮಳೆ ಕಾಟದ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 8 ವಿಕೆಟ್ ಗಳ ಜಯ ಗಳಿಸಿದೆ. ಎರಡೂ ಇನಿಂಗ್ಸ್ ಗಳಲ್ಲಿ ದಿಢೀರ್ ಕುಸಿತ ಕಂಡ ಭಾರತದ ಕಳಪೆ ಬ್ಯಾಟಿಂಗ್ ಪ್ರದರ್ಶನ ಸೋಲಿಗೆ ಕಾರಣ ಕಾರಣವಾಗಿದ್ದು, ಚಾಂಪಿಯನ್ ಆದ ನ್ಯೂಜಿಲೆಂಡ್ ತಂಡ 11.73 ಕೋಟಿ ರೂಪಾಯಿ ಬಹುಮಾನ ಪಡೆದಿದೆ. ರನ್ನರ್ ಅಪ್ ಭಾರತಕ್ಕೆ 5.86 ಕೋಟಿ ರೂಪಾಯಿ ಬಹುಮಾನ ಗಳಿಸಿದೆ.
NEW ZEALAND ARE THE INAUGURAL ICC WORLD TEST CHAMPIONSHIP WINNERS 🎉#WTC21 Final | #INDvNZ | @BLACKCAPS pic.twitter.com/HMIaYI32Az
— ICC (@ICC) June 23, 2021
ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 217 ರನ್ ಗಳಿಸಿದ್ದು, ನ್ಯೂಜಿಲೆಂಡ್ 249 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 170 ರನ್ ಗಳಿಸಿದ್ದು, ನ್ಯೂಜಿಲೆಂಡ್ ಗೆಲುವಿಗೆ 139 ರನ್ ಗುರಿ ನೀಡಿತ್ತು. 45.5 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿದ ನ್ಯೂಜಿಲೆಂಡ್ ಭರ್ಜರಿ ಜಯದೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಆಗಿದೆ.