ʻಕಾಲನ ಉಪಚಾರಕ್ಕೆ ಸಿದ್ದರಾಗಿʼ ಸಾಹಿತಿ ಬಿ ಎಲ್‌ ವೇಣುಗೆ ಬೆದರಿಕೆ ಪತ್ರ

ಚಿತ್ರದುರ್ಗ: ವೀರ್​ ಸಾವರ್ಕರ್​ ಕುರಿತು ಮಾತನಾಡಿದ್ದಕ್ಕೆ ಹಾಗೂ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಬರಗೂರು ರಾಮಚಂದ್ರಪ್ಪ ಅವರನ್ನು ಬೆಂಬಲಿಸಿದ ಕಾದಂಬರಿಕಾರ ಬಿ.ಎಲ್ ವೇಣು ಅವರಿಗೆ ಕೈಬರಹದ ಬೆದರಿಕೆ ಪತ್ರ ಬಂದಿದೆ. ಈ ಹಿಂದೆ ಕೂಡ ಒಂದು ಪತ್ರ ಬಂದಿತ್ತು. ಇದೀಗ ಮತ್ತೊಂದು ಪತ್ರ ಬಂದಿದೆ.

ಅದರಲ್ಲಿ ವೀರ್​ ಸಾವರ್ಕರ್ ಕುರಿತು ನೀಡಿದ ಹೇಳಿಕೆಗೆ ಬಹಿರಂಗ ಕ್ಷಮೆ ಕೇಳುವಂತೆ ತಿಳಿಸಲಾಗಿದೆ. ಪತ್ರದ ಕೊನೆಯಲ್ಲಿ ಸಹಷ್ಣು ಹಿಂದೂ ಎಂಬ ಉಲ್ಲೇಖವಿದ್ದು, ಯಾವುದೇ ವಿಳಾಸವಿಲ್ಲ. 61 ಸಾಹಿತಿಗಳಿಗೆ ಬುದ್ಧಿ ಹೇಳಿ ಹಾಗೂ ಕ್ಷಮೆ ಕೋರುವಂತೆ ಹೇಳಲಾಗಿದೆ.

ಇದನ್ನೂ ಓದಿ : ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌ಗೆ ಕೊಲೆ ಬೆದರಿಕೆ ಪತ್ರ – ಜೈಹಿಂದೂ ಎಂದು ಉಲ್ಲೇಖ

ಬಿ,ಎಲ್​.ವೇಣು ಸರ್​, ನಮಸ್ತೆ ಎನ್ನುವುದರೊಂದಿಗೆ ಪತ್ರ ಶುರುವಾಗಿದೆ. ಸಾವರ್ಕರ್ ಅವರು ಇಡೀ ಜೀವನವನ್ನು ಸ್ವಾತಂತ್ರ್ಯ ಚಳವಳಿಯ ಯಜ್ಞ ಕಾರ್ಯಕ್ಕೆ ಅರ್ಪಣೆ ಮಾಡಿದ್ದಾರೆ. ಅಂಥವರನ್ನು ಹೀಯಾಳಿಸಿ ಮಾತನಾಡಿದ್ದು ನಿಮಗೆ ಶೋಭೆ ತರುವುದಿಲ್ಲ. ಬರಗೂರು ರಾಮಚಂದ್ರಪ್ಪ ಅವರ ಪಠ್ಯ ಪರಿಷ್ಕರಣೆ ವಿಚಾರದಲ್ಲಿ ನಾಡದ್ರೋಹದ ಕೆಲಸ ಮಾಡಿದ್ದಾರೆ. ಅನೇಕ ಮಹನೀಯರ ಪಾಠವನ್ನು ಕಿತ್ತುಹಾಕಿದ್ದಾರೆ. ಇವರ ಬೆಂಬಲಕ್ಕೆ 61 ಸಾಹಿತಿಗಳು ನಿಂತಿದ್ದಾರೆ. ಈ ಎಲ್ಲರನ್ನೂ ಗಲ್ಲಿಗೇರಿಸಬೇಕು. ಇಲ್ಲವೆ ಗುಂಡಿಕ್ಕಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ. ಕೂಡಲೇ ಎಲ್ಲರೂ ಕ್ಷಮೆ ಕೇಳಬೇಕು, ಇಲ್ಲವೇ ಕಾಲನ ಉಪಚಾರಕ್ಕೆ ಸಿದ್ಧರಾಗಿ ಎಂಬ ಬೆದರಿಕೆ ಪತ್ರದಲ್ಲಿ ಹೇಳಲಾಗಿದೆ.

ಈ ದೇಶದಲ್ಲಿ ಹುಟ್ಟಿ ಭಗವದ್ಗೀತೆಯ ಮೇಲೆ ಏಕಿಷ್ಟು ಹೀನಭಾವನೆ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ. ಹಂಸಲೇಖ ಅವರು ಮೊದಲು ಹಂಸನಂತೆ ಇದ್ದರು. ಅವರನ್ನೂ ನೀವೆಲ್ಲಾ ಸೇರಿ ಕಂಸನಂತೆ ಮಾಡಿದ್ದೀರಿ ಎಂದು ಬರೆಯಲಾಗಿದೆ.

Donate Janashakthi Media

Leave a Reply

Your email address will not be published. Required fields are marked *