-ಡಾ. ಕೆ. ಸುಶೀಲಾ
ಕೊವಿಶೀಲ್ಡ್ ಲಸಿಕೆ ತೆಗೆದುಕೊಂಡು ಅದಾಗಲೇ ಎರಡು ವರ್ಷಗಳಾದವು. ಈಗ ಅದನ್ನು ಪಡೆದ ಕೋಟ್ಯಾಂತರ ಭಾರತೀಯರಲ್ಲಿ ಯಾವುದೇ ಪ್ರಾಣಾಪಾಯ ಬರುವುದು ಸಾಧ್ಯವಿಲ್ಲ. ಆದರೆ ನಮ್ಮ ದೇಶದಲ್ಲಿ ಈ ಲಸಿಕೆ ನೀಡಿದ ನಂತರ ಬರಬಹುದಾದ ಯಾವುದೇ ಸೌಮ್ಯ ಹಾಗೂ ತೀವ್ರ ಅಡ್ಡ ಪರಿಣಾಮಗಳನ್ನು ಗುರುತಿಸಿ ಅದನ್ನು ನಮೂದಿಸುವ ಕಾರ್ಯ ನಡೆದಿಲ್ಲ. ಹಾಗೂ ಜನರಿಗೆ ಈ ಅಡ್ಡ ಪರಿಣಾಮಗಳನ್ನು ಸಮರ್ಪಕ ರೀತಿಯಲ್ಲಿ ತಿಳಿಸಿ, ಅಂತಹ ತೊಂದರೆ ಬಂದಾಗ ಕೂಡಲೇ ಸಂಪರ್ಕಿಸ ಬೇಕೆನ್ನುವ ಸೂಕ್ತ ಮಾಹಿತಿ ಸಿಕ್ಕಿಲ್ಲ. ನಮ್ಮಲ್ಲಿ ಈ ಎಲ್ಲಾ ತೊಂದರೆ ಬಂದವರ ಸೂಕ್ತ ಮಾಹಿತಿ ಇಲ್ಲದಿರುವುದರಿಂದ ಈ ವಿಷಯದಲ್ಲಿ ಅಧ್ಯಯನ ನಡೆಸಿ ಈಗ ತಪ್ಪು ಮಾಹಿತಿ ಪಡೆದು ಗಾಬರಿಗೊಳಗಾದ ಜನರಿಗೆ ತಿಳಿಹೇಳಿ ಅವರಲ್ಲಿ ಧೈರ್ಯ ತುಂಬುವ ಕಾರ್ಯ ಸುಸೂತ್ರವಾಗಿ ನಡೆಸಲು ಸಾಧ್ಯವಾಗುತ್ತಿಲ್ಲ.
ಕೊರೊನಾ ವೈರಸ್ ಜಾತಿಗೆ ಸೇರಿದ ಸೂಕ್ಷಾö್ಮಣು ಜೀವಿಯಿಂದ ಉದ್ಭವಿಸಿದ ಕೊವಿಡ್-19 ಪ್ರಪಂಚದಲ್ಲಿ 2019 ಡಿಸೆಂಬರ್ನಲ್ಲಿ ಪ್ರಥಮ ಬಾರಿಗೆ ಕಾಣಿಸಿಕೊಂಡು ಕಾಳ್ಗಿಚ್ಚಿನಂತೆ ಪ್ರಪಂಚದಲೆಲ್ಲಾ ಹಬ್ಬುತ್ತಾ ಅಪಾರ ಸಾವು ನೋವಿಗೆ ಕಾರಣವಾಗಿತ್ತು. ಆದರೆ ವೈರಸ್ನ ಸೋಂಕಿನಿಂದಾಗುವ ಕಾಯಿಲೆಗೆ ಯಾವುದೇ ಚಿಕಿತ್ಸೆ ಇಲ್ಲದ ಕಾರಣ, ಈ ಕಾಯಿಲೆಯಿಂದ ಜನರನ್ನು ಕಾಪಾಡಲು ವೈದ್ಯಕೀಯ ಲೋಕಕ್ಕೆ ಉಳಿದ ಮಾರ್ಗ (1) ಈ ಕಾಯಿಲೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದನ್ನು ತಡೆಗಟ್ಟುವುದು. (2) ಆ ರೋಗದ ಗುಣ ಲಕ್ಷಣಗಳ ಶಮನಕ್ಕೆ ಚಿಕಿತ್ಸೆ ನೀಡುವುದು.
ಇದನ್ನೂ ಓದಿ: ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಕಾಣೆಯಾಗಿರುವ ಮೋದಿ ಚಿತ್ರ
ರೋಗ ತಡೆಗಟ್ಟುವಲ್ಲಿ ಒಂದು ಪ್ರಮುಖ ವಿಧಾನ ಜನರಿಗೆ ಈ ರೋಗದ ವಿರುದ್ಧ ಅವರ ದೇಹ ಸೆಣಸಾಡಲು ಸಹಕರಿಸುವ ಲಸಿಕೆಯನ್ನು ನೀಡುವುದು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿ, ಕನಿಷ್ಠ ಅಡ್ಡ ಪರಿಣಾಮ ಬೀರುವ, ಸಾಗಾಣಿಕೆ ಸಂಗ್ರಹಕ್ಕೆ ಸುಲಭವಾದ, ಅಗ್ಗ ಬೆಲೆಯಲ್ಲಿ ಸಿಗುವ, ಎಲ್ಲರಿಗೂ ಸುಲಭದಲ್ಲಿ ನೀಡಲಾಗುವ ಲಸಿಕೆ ತಯಾರಿಸಲು ಕೆಲವು ದಶಕಗಳೇ ಅಗತ್ಯ. ಆದರೆ ಅಂದಿನ ಪರಿಸ್ಥಿತಿಯಲ್ಲಿ ವರ್ಷಗಟ್ಟಲೆ ಕಾಯುವುದು ಅಸಾಧ್ಯ. ಆಗ ಹಲವಾರು ವಿಜ್ಞಾನಿಗಳ ಸತತ ಪ್ರಯತ್ನದಿಂದ ವರ್ಷ ಒಂದರೊಳಗೆ ಉದ್ಭವಿಸಿದ ಲಸಿಕೆಗಳು (1) ವೆಕ್ಟರ್ ಎಡಿನೋವೈರಸ್ ಉಪಯೋಗಿಸಿ ಮಾಡಿದ ಆಕ್ಸ್ಫರ್ಡ್ ಆಸ್ಟಾçಜೆನಿಕಾ ಲಸಿಕೆ ಹಾಗೂ ಅದೇ ತಂತ್ರಜ್ಞಾನ ಉಪಯೋಗಿಸಿ ಭಾರತದ ಸೀರಂ ಇನ್ಸ್ಟಿಟ್ಯೂಟ್ ತಯಾರಿಸಿದ ಕೊವಿಶೀಲ್ಡ್ ಲಸಿಕೆ. (2) ಹಾಗೂ `ಎಮ್.ಆರ್.ಎನ್.ಎʼ ತಂತ್ರಜ್ಞಾನ ಉಪಯೋಗಿಸಿ ತಯಾರಿಸಿದ ಫೈಝರ್ ಹಾಗೂ ಮೊಡರ್ನಾ ಲಸಿಕೆ.
2o ರಿಂದ 8 o ಸೆಂಟಿಗ್ರೇಡ್ ಉಷ್ಣಾಂಶದಲ್ಲಿ ಸಾಗಾಟ ಮತ್ತು ಸಂಗ್ರಹಣೆ ಸಾಧ್ಯವಾದ, 30 o ಸೆಂ. ಕೆಳಗಿನ ಉಷ್ಣತೆಯಲ್ಲಿ ನೀಡಬಹುದಾದ, ಬೇರೆ ಲಸಿಕೆಗಳಿಂದ ಬಹಳಷ್ಟು ಅಗ್ಗವಾದ, ಭಾರತದಲ್ಲೇ ತಯಾರಾದ ಕೋವಿಶೀಲ್ಡ್ ಲಸಿಕೆಯನ್ನು ತನ್ನ ಲಸಿಕಾ ಕಾರ್ಯಕ್ರಮಕ್ಕೆ ಭಾರತ ಆಗ ಬಳಸಿತ್ತು. ಇಲ್ಲಿಯ ತನಕ 170 ಕೋಟಿ ಕೊವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ನೀಡಲಾಗಿದೆ.
ಆದರೆ ಇತ್ತೀಚಿನ ಕೆಲವು ದಿನಗಳಲ್ಲಿ ಸುದ್ದಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕೊವಿಶೀಲ್ಡ್ ಪಡೆದ ಕೋಟ್ಯಾಂತರ ಭಾರತೀಯರು ಪ್ರಾಣಾಪಾಯದಲ್ಲಿ ಸಿಲುಕಿದ್ದಾರೆ ಎನ್ನುವ ವದಂತಿ ಹರಡಿದೆ.
`ಟಿ.ಟಿ.ಎಸ್ʼ ಕುರಿತು ಆತಂಕ
ಇತ್ತೀಚೆಗೆ ಯು.ಕೆ.ನ ನ್ಯಾಯಾಲಯದಲ್ಲಿ ಆಸ್ಟಾçಜೆನಿಕಾ ಲಸಿಕೆ ಪಡೆದವರಲ್ಲಿ ಕೆಲವರು ಪ್ರಾಣಾಪಾಯಕ್ಕೆ ಒಳಗಾಗಿದ್ದಾರೆ ಎನ್ನುವ ದಾವೆ ಹೂಡಲಾಗಿತ್ತು. ಅದಕ್ಕೆ ಆಸ್ಟಾçಜೆನಿಕಾ ಕಂಪೆನಿ, ಈ ಲಸಿಕೆಯಿಂದ ಬಹಳ ವಿರಳ ಆದರೆ ಗಂಭೀರ ಅಪಾಯವಿರುವ `ಟಿ.ಟಿ.ಎಸ್ʼ (`ತ್ರೊಂಬೋಸಿನ್ ವಿದ್ತ್ರೊಂಬೊಸೈಟೋಪೀಗಿಯಾ ಸಿಂಡ್ರೋಮ್ʼ) ಎನ್ನುವ ಕಾಯಿಲೆ ತಲೆದೋರುವ ಸಾಧ್ಯತೆ ಇದೆ, ಎನ್ನುವ ಉತ್ತರ 2024ರ ಫೆಬ್ರವರಿಯಲ್ಲಿ ನೀಡಿತ್ತು.
ಏನಿದು `ಟಿ.ಟಿ.ಎಸ್’?
ರಕ್ತದಲ್ಲಿನ ಪ್ಲೇಟ್ಲೆಟ್-ಕಣಗಳು ಉದರ ಹಾಗೂ ಮಿದುಳಿನ ಅಭಿಧಮನಿ(ವೈನ್) ಗಳಲ್ಲಿ ಗುಂಪಾಗಿ ಒಂದಕ್ಕೊಂದು ಅಂಟಿಕೊಂಡು ರಕ್ತ ಹೆಪ್ಪುಗಟ್ಟಿಸುವುದು ಈ ಸಮಸ್ಯೆಗೆ ಕಾರಣ. ಇದು ಲಸಿಕೆ ತೆಗೆದುಕೊಳ್ಳದೆ ಇರುವವರಲ್ಲೂ ಬರುವ ಸಾಧ್ಯತೆ ಇದೆ.
ಇದರ ಗುಣ ಲಕ್ಷಣಗಳೂ: ಅತಿ ತೀವ್ರ ಹೊಟ್ಟೆನೋವು, ತಲೆನೋವು, ಎದೆನೋವು ಉಸಿರಾಟದಲ್ಲಿ ತೊಂದರೆ, ಮಂಜಾದ ಕಣ್ಣು ದೃಷ್ಠಿ, ಮಾತನಾಡಲು ತೊಂದರೆ, ಕಾಲು ಊತ ಇತ್ಯಾದಿ.
ಇದು ಮೊದಲ ಲಸಿಕೆ ತೆಗೆದುಕೊಂಡು 4 ರಿಂದ 42 ದಿನದೊಳಗೆ ಕಾಣಿಸಿಕೊಳ್ಳಬಹುದು. ಬಹಳ ವಿರಳ ಪ್ರಕರಣಗಳಲ್ಲಿ ಇದು 3-6 ತಿಂಗಳ ಅವಧಿಯಲ್ಲೂ ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ವೆಲ್ಲೂರಿನ `ಸಿಎಮ್ಸಿ’ಯ ವೈರಾಣು ತಜ್ಞ ಡಾ. ಜೆಕೋಬ್ ಜಾನ್.
ಆದರೆ ಈ ಪ್ರತಿಕ್ರಿಯೆಗೆ ಕಾರಣವೇನು ಎನ್ನುವುದು ಸರಿಯಾಗಿ ತಿಳಿದಿಲ್ಲ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇಮ್ಯುನಾಲಜಿಯ ಪ್ರಕಾರ ಬಹಳ ವಿರಳ ಪ್ರಕರಣದಲ್ಲಿ ಎಡಿನೋ ಪೈಥಸ್ ಲಸಿಕೆ ಕಾಯಿಲೆಯ ವಿರುದ್ಧ ಆ್ಯಂಟಿಬೋಡಿ ತಯಾರಿಸುವಾಗ ರಕ್ತದಲ್ಲಿರುವ `ಪ್ಲೇಟ್ಲೆಟ್-4’ ಎನ್ನುವ ಪ್ರೋಟೀನ್ನ ವಿರುದ್ದವೂ ಆಟೊ-ಎಂಟಿಬೋಡಿ ತಯಾರಿಸಬಹುದು. ಇದು ಪ್ಲೇಟ್ಲೆಟ್ಗಳು ಒಂದುಕ್ಕೊAದು ಗುಂಪಾಗಿ ಅಂಟಿಕೊಂಡು ರಕ್ತ ಹೆಪ್ಪುಗಟ್ಟಲು ಕಾರಣವಾಗಿರಬಹುದು. ಆದರೆ ಯಾಕೆ ಎಲ್ಲೊ ಕೆಲವರಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ ಎನ್ನುವುದು ತಿಳಿದಿಲ್ಲ.
ಅಧ್ಯಯನ ಏನೆನ್ನುತ್ತದೆ?
ಬ್ರಿಟಿಷ್ ಹಾರ್ಟ್ ಪೌಂಡೇಶನ್ನಿನ ಪ್ರಕಾರ ರಕ್ತಹೆಪ್ಪುಗಟ್ಟುವ ಕ್ರಿಯೆ ಈ ಲಸಿಕೆ ಪಡೆದವರಲ್ಲಿ ಕಂಡು ಬಂದದ್ದಕ್ಕಿAತ ಅತೀ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್-19 ರ ಕಾಯಿಲೆ ಬಂದವರಲ್ಲಿ ಕಂಡು ಬಂದಿತ್ತು.
ಆಕ್ಸಫರ್ಡ್ ಯೂನಿರ್ವಸಿಟಿ ನಡೆಸಿದ 2.91 ಕೋಟಿ ಹೆಲ್ತ್ ರೆಕಾರ್ಡ್ನ ಕೂಲಂಕುಷ ಅಧ್ಯಯನದಿಂದ ತಿಳಿದ ವಿಚಾರವೆಂದರೆ – ಮೊದಲ ಡೋಸ್ ಆಸ್ಟ್ರಾಜೆನಿಕಾ ಲಸಿಕೆಯ ನಂತರ ಈ `ಟಿ.ಟಿ.ಎಸ್’ ಅತ್ಯಂತ ಅಲ್ಪ ಮಟ್ಟದಲ್ಲಿ ಕಾಣಿಸಿಕೊಂಡಿದ್ದರೆ, ಕೊವಿಡ್-19 ರ ಕಾಯಿಲೆಯ ನಂತರ ಇದು ಕಾಣಿಸಿಕೊಂಡ ಪ್ರಮಾಣ ಬಹಳ ಪಾಲು ಹೆಚ್ಚಾಗಿತ್ತು. ಪ್ರತೀ ಒಂದು ಕೋಟಿ ಲಸಿಕೆ ಪಡೆದವರಲ್ಲಿ ರಕ್ತ ಅಪಧಮನಿಗಳಲ್ಲಿ ಹೆಪ್ಪುಗಟ್ಟುವ 66 ಹೆಚ್ಚುವರಿ ಪ್ರಕರಣಗಳು ಕಂಡು ಬಂದಿದ್ದವು ಅಂದರೆ 1 ರಿಂದ 2 ಲಕ್ಷ ಜನರಲ್ಲಿ ಒಂದು ಪ್ರಕರಣ. ಕಾಯಿಲೆಯಿಂದಾಗುವ ಸಾವು-ನೋವು ಹಾಗೂ ರಕ್ತ ಹೆಪ್ಪುಗಟ್ಟಿದ ಪ್ರಕರಣದ ಪ್ರಮಾಣ, ಈ ಲಸಿಕೆಯ ಉಪಯೋಗದ ನಂತರ ಬರಬಹುದಾದುದಕ್ಕಿಂತ ಅಸಂಖ್ಯ ಪಾಲು ಜಾಸ್ತಿ. ಯಾರೂ ಈ ಲಸಿಕೆಯ 2 ಡೋಸ್ ಪಡೆದ ನಂತರ ಇದು 60 ರಿಂದ 80 ಪ್ರತಿಶತ ಕೋವಿಡ್-19 ರ ಸೋಂಕು ತಡೆಗಟ್ಟುವುದರಿಂದ ಈ ಲಸಿಕೆಯ ಉಪಯೋಗ ಸೂಕ್ತ.
ಹೀಗಾಗಿ ಇದನ್ನು ನಿಷೇಧಿಸಿದ ದೇಶಗಳೂ ಕೆಲವು ಸಮಯದ ನಂತರ ಇದರ ಉಪಯೋಗವನ್ನು ಪ್ರಾರಂಭಿಸಿದವು. ಈಗ ಬರುವುದು-ಕೊವಿಶೀಲ್ಡ್ ಬದಲು ಫೈಝರ್ ಮೊದಲಾದ ಲಸಿಕೆಯ ಉಪಯೋಗ ಸೂಕ್ತವಾಗಿತ್ತೆ ಎನ್ನುವ ಪ್ರಶ್ನೆ. ಆದರೆ ತಿಳಿಯಬೇಕಾದ ವಿಷಯವೆಂದರೆ ಯಾವುದೇ ಲಸಿಕೆಯೂ ಅಡ್ಡ ಪರಿಣಾಮಗಳಿಂದ ಮುಕ್ತವಾಗಿಲ್ಲ. ಈ ಎಲ್ಲಾ ಲಸಿಕೆಗಳಲ್ಲಿ ತಾತ್ಕಾಲಿಕ ಮತ್ತು ಸೌಮ್ಯ ತೊಂದರೆಗಳು ಬರುವುದು ಸಾಮಾನ್ಯ. ಅಂದರೆ ಇದು ಲಸಿಕೆ ದೇಹದಲ್ಲಿ ಸೂಕ್ತ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದರ ಸೂಚನೆ.
ಕೊವಿಶೀಲ್ಡ್ ಟಿ.ಟಿ.ಎಸ್ ನ ಅಡ್ಡಪರಿಣಾಮ ಉಂಟು ಮಾಡಬಹುದು ಎಂಬುದು ಹೊಸ ಮಾಹಿತಿಯೂ ಅಲ್ಲ. ವೈದ್ಯಕೀಯ ವಿಜ್ಞಾನ ಕ್ಷೇತ್ರಗಳಲ್ಲಿ ಬಹಳ ಹಿಂದೆನೇ ಈ ಮಾಹಿತಿ ಲಭ್ಯವಿತ್ತು. ಈಗ ಆಸ್ಟ್ರಾಜೆನಿಕಾ ಯುಕೆ ಕೋರ್ಟ್ ಪ್ರಕರಣವೊಂದರಲ್ಲಿ ಅಧಿಕೃತವಾಗಿ ಈ ಹೇಳಿಕೆ ನೀಡಿದೆ ಎನ್ನುವುದಷ್ಟೇ ಹೊಸದು.
ಬದಲಿ ಲಸಿಕೆಗಳು ಸುರಕ್ಷಿತವಾಗಿದ್ದವೆ?
ಇನ್ನು ಫೈಝರ್ ಲಸಿಕೆ `ಎನಾಫೈಲಾಕ್ಸಿಸ್’ ಎನ್ನುವ ಅತ್ಯಂತ ಗಂಭೀರ ಅಲರ್ಜಿಯ ಕ್ರಿಯೆಯನ್ನು ಬಹಳ ವಿರಳವಾದರೂ ದೇಹದಲ್ಲಿ ಉಂಟು ಮಾಡಬಹುದು. (ತುರ್ತು ಚಿಕಿತ್ಸೆಯಿಂದ ಈ ತೊಂದರೆ ಬಂದವರನ್ನು ಪ್ರಾಣಾಪಾಯದಿAದ ಪಾರು ಮಾಡಬಹುದು) ಇನ್ನು ಹೃದಯದ ಸ್ನಾಯುಗಳಲ್ಲಿ ಉರಿಯೂತ (ಮಯೋತಾಡೈಟಿಸ್) ಹಾಗೂ ಹೃದಯದ ತೆಳಗಿನ ಪೊರೆಯ ಹೊರ ಕವಚದಲ್ಲಿ ಉರಿಯೂತ (ಪೆರಿಕಾರ್ಡೈಟಿಸ್) ಬಹಳ ಬಹಳ ವಿರಳವಾದರೂ ಉಂಟು ಮಾಡುವ ಸಂಭವವಿದೆ ಹಾಗೂ ಈ ಲಸಿಕೆಯ ಸಂಗ್ರಹ ಸಾಗಾಟಕ್ಕೆ – 25 o ರಿಂದ -15 o ಸೆಂಟಿಗ್ರೇಡ್ ಉಷ್ಣಾಂಶ ಅಗತ್ಯ. ಇದು ಉಷ್ಣ ವಲಯದ ನಮ್ಮ ದೇಶದಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ನಿಭಾಯಿಸುವುದು ಕಷ್ಟ. ಹಾಗಾಗಿ ಈ ಲಸಿಕೆಗಳ ಉಪಯೋಗ ಕೊವಿಶೀಲ್ಡ್ಗಿಂತ ಉತ್ತಮವೆಂದು ಹೇಳಲಾಗದು.
ಇನ್ನು ನಾವು ಉಪಯೋಗಿಸುವ, ತಿನ್ನುವ, ಉಸಿರಾಡುವ ಯಾವುದೇ ಒಂದು ವಸ್ತುವು ಬಹಳ ವಿರಳವಾದರೂ ಕೆಲದರಲ್ಲಿ ಬಹಳ ಗಂಭೀರ ಅಲರ್ಜಿಯನ್ನುಂಟು ಮಾಡಬಹುದು. ಪ್ರಾಣಾಪಾಯ ತರಬಹುದು. ಪ್ರಪಂಚದ 800 ಕೋಟಿ ಜನರಲ್ಲಿ ಆ ಕೆಲವರು ಯಾರು ಎನ್ನುವುದು ಯಾರಿಗೂ ತಿಳಿಯದು. ಅದಕ್ಕಾಗಿ ಈ ವಸ್ತುಗಳನ್ನು 800 ಕೋಟಿ ಜನರಲ್ಲಿ ನಿಷೇಧಿಸಲು ಸಾಧ್ಯವಿಲ್ಲ.
ಆತಂಕಕ್ಕೆ ಕಾರಣವಿಲ್ಲ
ಕೊವಿಶೀಲ್ಡ್ ಲಸಿಕೆ ತೆಗೆದುಕೊಂಡು ಅದಾಗಲೇ ಎರಡು ವರ್ಷಗಳಾದವು. ಈಗ ಅದನ್ನು ಪಡೆದ ಕೋಟ್ಯಾಂತರ ಭಾರತೀಯರಲ್ಲಿ ಯಾವುದೇ ಪ್ರಾಣಾಪಾಯ ಬರುವುದು ಸಾಧ್ಯವಿಲ್ಲ.
ಆದರೆ ನಮ್ಮ ದೇಶದಲ್ಲಿ ಈ ಲಸಿಕೆ ನೀಡಿದ ನಂತರ ಬರಬಹುದಾದ ಯಾವುದೇ ಸೌಮ್ಯ ಹಾಗೂ ತೀವ್ರ ಅಡ್ಡಪರಿಣಾಮಗಳನ್ನು ಗುರುತಿಸಿ ಅದನ್ನು ನಮೂದಿಸುವ ಕಾರ್ಯ ನಡೆದಿಲ್ಲ. ಹಾಗೂ ಜನರಿಗೆ ಈ ಅಡ್ಡ ಪರಿಣಾಮಗಳನ್ನು ಸಮರ್ಪಕ ರೀತಿಯಲ್ಲಿ ತಿಳಿಸಿ, ಅಂತಹ ತೊಂದರೆ ಬಂದಾಗ ಕೂಡಲೇ ಸಂಪರ್ಕಿಸ ಬೇಕೆನ್ನುವ ಸೂಕ್ತ ಮಾಹಿತಿ ಸಿಕ್ಕಿಲ್ಲ. ನಮ್ಮಲ್ಲಿ ಈ ಎಲ್ಲಾ ತೊಂದರೆ ಬಂದವರ ಸೂಕ್ತ ಮಾಹಿತಿ ಇಲ್ಲದಿರುವುದರಿಂದ ಈ ವಿಷಯದಲ್ಲಿ ಅಧ್ಯಯನ ನಡೆಸಿ ಈಗ ತಪ್ಪು ಮಾಹಿತಿ ಪಡೆದು ಗಾಬರಿಗೊಳಗಾದ ಜನರಿಗೆ ತಿಳಿಹೇಳಿ ಅವರಲ್ಲಿ ಧೈರ್ಯ ತುಂಬುವ ಕಾರ್ಯ ಸುಸೂತ್ರವಾಗಿ ನಡೆಸಲು ಸಾಧ್ಯವಾಗುತ್ತಿಲ್ಲ.
ಕೊವಿಶೀಲ್ಡ್ ಲಸಿಕೆ ಪಡೆದ ಎಲ್ಲರಿಗೂ ಈ ಲೇಖನದ ಮೂಲಕ ತಿಳಿಸುವುದೇನೆಂದರೆ, ನಿಮ್ಮಲ್ಲಿ ಯಾರಿಗೂ ಈ ಲಸಿಕೆಯಿಂದಾಗಿ ಈಗ ಯಾವುದೇ ತೊಂದರೆ ಬಾರದು. ಹಾಗೂ ಎಲ್ಲಿಯ ತನಕ ಯಾವುದೇ ಕಾಯಿಲೆ ತರುವ ನೋವು ಸಾವಿನ ಪ್ರಮಾಣ ಲಸಿಕೆಯಿಂದ ಬರಬಹುದಾದ ಅಡ್ಡ ಪರಿಣಾಮಗಳಿಗಿಂತ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದೊ ಆಗ ಲಸಿಕೆ ತೆಗೆದುಕೊಳ್ಳುವುದು ಕ್ಷೇಮ.
ಇದನ್ನೂ ನೋಡಿ: ಹಾಸನ ಲೈಂಗಿಕ ಹಗರಣ – ಪ್ರಜ್ವಲ್ ದಾರಿಯಲ್ಲಿ ರೇವಣ್ಣ ಕೆ.ಎಸ್ ವಿಮಲಾ – ಗುರುರಾಜ ಮಾತುಕತೆ