ಪ್ರಜ್ವಲ್ ರೇವಣ್ಣ ಶೀಘ್ರ ಶರಣಾಗತಿ ಸಾಧ್ಯತೆ?!

  • ಬ್ಲೂ ಕಾರ್ನರ್ ನೋಟಿಸ್ ಹಿನ್ನೆಲೆಯಲ್ಲಿ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ
  • ಸಾಧ್ಯತೆಪ್ರಕರಣ ಹೊರಬಂದಾಗಿನಿಂದಲೂ ಜರ್ಮನಿಯಲ್ಲೇ ಇದ್ದ ಪ್ರಜ್ವಲ್ ರೇವಣ್ಣ
ಬೆಂಗಳೂರು: ಪೆನ್ ಡ್ರೈವ್ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರು ಇಂದು (ಮೇ 5) ಕರ್ನಾಟಕಕ್ಕೆ ಹಿಂದಿರುಗುವ ಸಾಧ್ಯತೆಗಳಿವೆ. ಪ್ರಕರಣ ಹೊರಬಂದ ಕೂಡಲೇ ಅವರು ವಿದೇಶಕ್ಕೆ ತೆರಳಿದ್ದರು.

ಪೆನ್ ಡ್ರೈವ್ ಹಗರಣದ ವಿಚಾರಣೆಗೆ ಅವರು ಹಾಜರಾಗದ ಹಿನ್ನೆಲೆಯಲ್ಲಿ, ಅವರ ವಿರುದ್ಧ ಮೊದಲು ಲುಕ್ ಔಟ್ ನೋಟಿಸ್ ಹಾಗೂ ಮೇ 4ರಂದು ಬ್ಲೂಕಾರ್ನರ್ ನೋಟಿಸ್ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣನವರು ಸ್ವದೇಶಕ್ಕೆ ಬರುತ್ತಿದ್ದಾರೆ.

ಇದೀಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಪ್ರಜ್ವಲ್ ರೇವಣ್ಣನವರು ಜರ್ಮನಿಯಿಂದ ಯುಎಇಗೆ ಶಿಫ್ಟ್ ಆಗಿದ್ದಾರೆ. ಲುಕ್ ಔಟ್ ನೋಟಿಸ್ ಜಾರಿಯಾಗಿರುವ ಮೊದಲೇ ಅವರು ಯುಎಇಗೆ ಹೋಗಿದ್ದು, ದುಬೈನಿಂದಲೇ ಮಂಗಳೂರಿಗೆ ಆಗಮಿಸಲಿದ್ದಾರೆಂದು ಹೇಳಲಾಗಿದೆ. ಮೇ 5ರಂದು ದುಬೈನಿಂದ ಒಟ್ಟು ನಾಲ್ಕು ವಿಮಾನಗಳು ಮಂಗಳೂರಿಗೆ ಪ್ರಯಾಣ ಬೆಳೆಸಲಿವೆ. ಅವುಗಳಲ್ಲಿ ಯಾವಾದಾದರೊಂದು ವಿಮಾನದಲ್ಲಿ ಪ್ರಜ್ವಲ್ ಅವರು ಆಗಮಿಸುವ ಸಾಧ್ಯತೆಗಳಿವೆ.

ದುಬೈನಿಂದ ಮಂಗಳೂರಿಗೆ ಇಂದು (ಮೇ 5) ನಾಲ್ಕು ವಿಮಾನಗಳು ಆಗಮಿಸಲಿದ್ದು, ಅವುಗಳಲ್ಲಿ ಎರಡು ಈಗಾಗಲೇ ಬಂದಿಳಿದಿವೆ. ಬೆಳಗ್ಗೆ 6.24 ಹಾಗೂ 7. 55ರ ಸುಮಾರಿಗೆ ಆ ವಿಮಾನ ಆಗಮಿಸಿವೆ. ಅವುಗಳಲ್ಲಿ ಪ್ರಜ್ವಲ್ ಆಗಮಿಸಿಲ್ಲ. ಆದರೆ, ಸಂಜೆ 6.15ಕ್ಕೆ ಮತ್ತೊಂದು ವಿಮಾನ ಬರಲಿದೆ. ಆನಂತರ, 6.40ಕ್ಕೆ ಮತ್ತೊಂದು ವಿಮಾನ ಬರಲಿದೆ. ಸಂಜೆ ಬರುವ ವಿಮಾನಗಳಲ್ಲಿ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿಸಾಮಾಜಿಕ ನೈತಿಕತೆಯೂ ರಾಜಕೀಯ ಮಾಲಿನ್ಯವೂ

ಪ್ರಜ್ವಲ್‌ ಬರೋದು ಪಕ್ಕಾ : ಸರಣಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಅಧಿಕಾರಿಗಳ ಮುಂದೆ ಶರಣಾಗಲಿದ್ದಾರೆ ಎಂದು ಜೆಡಿಎಸ್‌ನ ಹಿರಿಯ ನಾಯಕ ಸಿ ಎಸ್ ಪುಟ್ಟರಾಜು ಹೇಳಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಭೇಟಿಯ ನಂತರ ಮಾತನಾಡಿದ ಪುಟ್ಟರಾಜು, ಕಾನೂನು ಚರ್ಚೆ ನಡೆಯುತ್ತಿದೆ, ಪ್ರಜ್ವಲ್ ಶರಣಾಗುತ್ತಾರೆ ಎಂದು ಹೇಳಿದರು. ಆದರೆ ಕುಮಾರಸ್ವಾಮಿ ಭೇಟಿ ವೇಳೆ ಪ್ರಜ್ವಲ್ ಪ್ರಕರಣ ಪ್ರಸ್ತಾಪವಾಗಲಿಲ್ಲ ಎಂದು ತಿಳಿಸಿದರು

ಪ್ರಜ್ವಲ್ ತಂದೆ ಹೆಚ್ ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಪುಟ್ಟರಾಜು ಅವರು, ಅವರನ್ನು ಎಸ್ ಐ ಟಿ ಬಂಧಿಸಿಲ್ಲ, ಜಾಮೀನು ಅರ್ಜಿ ತಿರಸ್ಕೃತಗೊಂಡ ನಂತರ, ಎಚ್‌ಡಿ ದೇವೇಗೌಡರ ಆಶೀರ್ವಾದ ಪಡೆದು ರೇವಣ್ಣ ಎಸ್‌ಐಟಿ ಮುಂದೆ ಹಾಜರಾದರು ಎಂದು ಹೇಳಿದರು.

 

 

Donate Janashakthi Media

Leave a Reply

Your email address will not be published. Required fields are marked *