ಸಂಗೀತ ನಿರ್ದೇಶಕ ಹಂಸಲೇಖ ಅವರಿಂದ ಮೈಸೂರು ದಸರಾ ಉದ್ಘಾಟನೆ – ಸಿಎಂ ಸಿದ್ದರಾಮಯ್ಯ

ಕಲಾ ಪ್ರತಿನಿಧಿಯಾಗಿ ಮೈಸೂರಿಗೆ ದೀಪ ಹಚ್ಚಲು ಬರುತ್ತೇನೆ- ಹಂಸಲೇಖ

ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾವನ್ನು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಆಗಸ್ಟ್ -29 ರಂದು ತಿಳಿಸಿದ್ದಾರೆ.

ಇದನ್ನೂ ಓದಿ:ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಆಗಸ್ಟ್‌ 30ಕ್ಕೆ ಅನುಷ್ಠಾನ: ಸಿಎಂ ಸಿದ್ದರಾಮಯ್ಯ

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ 413ನೇ ಮೈಸೂರು ದಸರಾ ಮಹೋತ್ಸವವನ್ನು ಖ್ಯಾತ ಸಾಹಿತಿ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಅವರು ಉದ್ಘಾಟಿಸಲಿದ್ದಾರೆ. ಇಡೀ ವಿಶ್ವವೇ ಬೆರಗುಗಣ್ಣುಗಳಿಂದ ನೋಡುವ ಮೈಸೂರಿನ ದಸರಾವನ್ನು  ಈ ಈ ಬಾರಿ ಅದ್ಧೂರಿಯಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಹಿಂದೆ ಹಿಂದೆಯೂ ಗಿರೀಶ್‌ ಕಾರ್ನಾಡ್, ಬರಗೂರು ರಾಮಚಂದ್ರಪ್ಪ ಅವರು ಸೇರಿದಂತೆ ಹಲವರು ಚಿಂತಕರು ದಸರಾ ಉದ್ಘಾಟಿಸಿದ ಉದಾಹರಣೆಯಿದೆ. ಸಾಹಿತಿಗಳು, ಧರ್ಮಗುರುಗಳೂ ಕೂಡ ದಸರಾವನ್ನು ಹಲವು ಬಾರಿ ಉದ್ಘಾಟಿಸಿದ್ದಾರೆ. ಈ ಬಾರಿ ಹಂಸಲೇಖ ಅವರಿಗೆ ಈ ಬಾರಿ ಅವಕಾಶ ದೊರೆತಿದೆ.

ಈ ಬಗ್ಗೆ ಮಾಧ್ಯಮಕ್ಕೆ, ನಾದಬ್ರಹ್ಮ ಹಂಸಲೇಖ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಕಲಾ ಪ್ರತಿನಿಧಿ ಆಗಿದ್ದೇನೆ. ಎಲ್ಲರ ಪರವಾಗಿ ನಾನು ದಸರಾ ದೀಪ ಹಚ್ಚುತ್ತೇನೆ. ದಸರಾ ಉತ್ಸವಕ್ಕೆ ಹಾಡನ್ನ ಮಾಡೋಕೆ ಈಗ ಆಸೆ ಉಕ್ಕುತ್ತಾ ಇದೆ. ಬದುಕಿದು ಕನ್ನಡ ಭಿಕ್ಷೆ. ಇಲ್ಲಿ ಸಮರಸವೇ ನಮ್ಮ ರಕ್ಷೆ ಎಂದು ಸಾಲುಗಳನ್ನ ಹಂಸಲೇಖ ಮಾಧ್ಯಮದ ಮುಂದೆ ಹೇಳಿದ್ದರು. ಈ ಮೂಲಕ ತಮ್ಮ ಖುಷಿಯನ್ನ ವ್ಯಕ್ತಪಡಿಸಿದ್ದರು.

ಹಂಸಲೇಖ ಕನ್ನಡ ಚಿತ್ರರಂಗದಲ್ಲಿ ಸಂಗೀತ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡಿದ ದೇಸಿ ಕಲಾವಿದ. ಮಂಡ್ಯ ಮೂಲದವರಾದರೂ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ನೀನಾ ಭಗವಂತಾ ಹಾಡಿಗೆ ಧ್ವನಿಯಾಗಿ ನಂತರ ಸಂಗೀತ ನಿರ್ದೇಶನದತ್ತ ಹೊರಳಿದವರು ಹಂಸಲೇಖ. ಪ್ರೇಮಲೋಕ ಚಿತ್ರದ ಮೂಲಕ ಹೊಸ ಟ್ರೆಂಡ್‌ ಹುಟ್ಟು ಹಾಕಿದ ಹಿರಿಮೆ ಅವರದ್ದು. ಐದು ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶನ, ಸಾಹಿತ್ಯ ಬರೆದಿರುವ ಹಂಸಲೇಖ ಗೀತ ರಚನೆಕಾರರಾಗಿಯೂ ಮಾಡಿದ ಮೋಡಿ ದೊಡ್ಡದು. ರವಿಚಂದ್ರನ್‌ ಅವರೊಂದಿಗೆ ಜೋಡಿಯಾಗಿ ಹಲವು ಚಿತ್ರಗಳಲ್ಲಿ ಕೆಲಸ ಮಾಡಿ ಹೊಸತನ ಹುಟ್ಟು ಹಾಕಿದ್ದು ಹಂಸಲೇಖ ಹಿರಿಮೆ. ಇದಲ್ಲದೇ ರಿಯಾಲಿಟಿ ಶೋ ಗಳಲ್ಲೂ ಕೆಲಸ ಮಾಡುತ್ತಾ ಬಂದಿದ್ದಾರೆ. ದೇಸಿ ಜನಪದ ಸಂಸ್ಥೆ ಆರಂಭಿಸಿ ಶಿಕ್ಷಣದ ಜತೆಗೆ ಕಾರ್ಯಕ್ರಮಗಳನ್ನೂ ಆಯೋಜಿಸುತ್ತಾ ಬಂದಿದ್ದಾರೆ.

“ದಸರಾ ಬೊಂಬೆ ನಿನ್ನನು ನೋಡಲು ನಮ್ಮೂರಿಂದ ಬಂದೆ ಕಣೇ” ಎಂಬ ಹಾಡು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 

 

Donate Janashakthi Media

Leave a Reply

Your email address will not be published. Required fields are marked *