ಬಂಡವಾಳ ಕೇಂದ್ರೀತ ಆರ್ಥಿಕತೆಯಿಂದ ಸಂಕಷ್ಟಕ್ಕೆ ಸಿಲುಕಿದ ದುಡಿಯುವ ಜನ – ಸೈಯದ್ ಮುಜೀಬ್ ಆರೋಪ

ದಾವಣಗೆರೆ: ಕಳೆದ ಮೂರು ದಶಕಗಳಿಂದ ನಮ್ಮ ದೇಶದಲ್ಲಿ ನವ ಉದಾರವಾದಿ ಆರ್ಥಿಕ ನೀತಿಗಳನ್ನು ಬಂಡವಾಳಶಾಹಿ ಕೇಂದ್ರೀತ ರಾಜಕೀಯ ಪಕ್ಷಗಳು ಜಾರಿಗೊಳಿಸುತ್ತಿರುವ ಫಲದಿಂದಾಗಿ ದೇಶದಲ್ಲಿ ದುಡಿಯುವ ಜನರು ಸಂಕಷ್ಟಗಳ ಸರಮಾಲೆಯನ್ನೇ ಅನುಭವಿಸುತ್ತಿದ್ದಾರೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಬ್ ಆರೋಪಿಸಿದರು. ಬಂಡವಾಳ

ಚಿತ್ರದುರ್ಗದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ದಾವಣಗೆರೆ-ಚಿತ್ರದುರ್ಗ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಕಾರ್ಪೋರೆಟ್ ಪ್ರೇರಿತ ಆರ್ಥಿಕ ನೀತಿಗಳು ದೇಶದಲ್ಲಿ ಕೃಷಿ,ಕೈಗಾರಿಕಾ ಬಿಕ್ಕಟ್ಟು ಸೃಷ್ಟಿಸಿ ಅಪಾರ ಪ್ರಮಾಣದ ನಿರುದ್ಯೋಗ ಸೃಷ್ಟಿಸಿವೆ ಈ‌ ನೀತಿಗಳ ಫಲವಾಗಿ ಬೆರಳೆಣಿಕೆಯಷ್ಟು ಕುಟುಂಬಗಳು ಬಿಲಿಯಾಧಿಪತಿಗಳಾಗಿ ಅಪಾರ ಸಂಪತ್ತಿನ ಒಡೆಯರಾಗಿದ್ದರೆ ಕೋಟ್ಯಾಂತರ ಜನರ ಬದುಕು ದುಸ್ಥಿತಿಗೆ ತಳ್ಳಲ್ಪಟ್ಟಿದೆ. ಇದರ ವಿರುದ್ಧ ಎಲ್ಲ ವಿಭಾಗದ ಶ್ರಮಜೀವಿಗಳನ್ನು ಸಂಘಟಿಸುವುದು ಅನಿವಾರ್ಯವಾಗಿದೆ ವಾಣಿಜ್ಯ ಎಂದರು‌.

ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದ ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಕೆ.ಮಹಾಂತೇಶ ಮಾತನಾಡಿ ದುಡಿಯುವ ವರ್ಗದ ಪಕ್ಷವಾಗಿ ಸಿಪಿಎಂ ದೇಶದಲ್ಲಿ ಪರ್ಯಾಯ ನೀತಿಗಳಿಗಾಗಿ ಹೋರಾಡುತ್ತಾ ಬಂದಿದ್ದು ಅದು ಅಧಿಕಾರದಲ್ಲಿ ಇರುವ ಕೇರಳದಲ್ಲಿ ಹಾಗೂ ಹಿಂದೆ ಅಧಿಕಾರದಲ್ಲಿದ್ದ ಪ.ಬಂಗಾಳ ಮತ್ತು ತ್ರಿಪುರ ಗಳಲ್ಲಿ ಶ್ರಮಜೀವಿಗಳ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರ ಬದುಕನ್ನು ಉತ್ತಮಪಡಿಸಲು ಶಿಕ್ಷಣ,ಆರೋಗ್ಯ, ವಸತಿ,ಪಿಂಚಣಿ ಮೊದಲಾದ ಸಾಮಾಜಿಕ ಭದ್ರತೆಗಳನ್ನು ಒದಗಿಸಲು ತನ್ನ ಸೀಮಿತ ಸಂಪನ್ಮೂಲಗಳನ್ನು ಬಳಸಿ ಕೆಲಸ ಮಾಡಿವೆ ಎಂದು ಹೇಳಿದರು.

ಇದನ್ನೂ ಓದಿ: 76 ಮೈಲ್ ಕಾಲುವೆಗೆ ನೀರು ಹರಿಸುವಂತೆ ಆಗ್ರಹ: ರೈತರ ಪ್ರತಿಭಟನೆ

ಬಂಡವಾಳಶಾಹಿ ಆರ್ಥಿಕ ನೀತಿಗಳನ್ನು ಅನುಸರಿಸುತ್ತಿರುವ ಬಿಜೆಪಿ‌,ಕಾಂಗ್ರೆಸ್ ಹಾಗೂ ಜನತಾದಳದಂತಹ ಪಕ್ಷಗಳ ನೀತಿಗಳಿಗೆ ಪರ್ಯಾಯವಾಗಿ ಸಿಪಿಎಂ ಪಕ್ಷವನ್ನು ಮಧ್ಯಕರ್ನಾಟಕದ ಈ ಎರಡು ಜಿಲ್ಲೆಗಳಲ್ಲಿ ಬೆಳೆಸಲು ಶ್ರಮಜೀವಿಗಳಾದ ಕಾರ್ಮಿಕ ವರ್ಗ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಲೆ ಜನವಸತಿ ಪ್ರದೇಶಗಳಲ್ಲಿ ರಾಜಕೀಯ ‌ಕಾರ್ಯಕರ್ತರಾಗಿ‌ಮುಂದಿನ ದಿನಗಳಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿ ಕೆ.ಎಚ್. ಆನಂದರಾಜ್ ವಹಿಸಿದ್ದರು ಜಿಲ್ಲಾ ಸಂಘಟನಾ ಸಮಿತಿ ಸದಸ್ಯ ಟಿ.ತಿಪ್ಪೇಸ್ವಾಮಿ ಸ್ವಾಗತಿಸಿದರೆ, ಮತ್ತೊರ್ವ ಸದಸ್ಯ ಡಿ.ಎಂ ಮಲಿಯಪ್ಪ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಮತ್ತೋರ್ವ ಸದಸ್ಯ. ಸಿ.ಕೆ ಗೌಸ್ ಪೀರ್ ವಂದನಾರ್ಪಣೆ ಮಾಡಿದರು. ವೇದಿಕೆಯಲ್ಲಿ ಜಿಲ್ಲಾ ಸಂಘಟನಾ ಸಮಿತಿ ಸದಸ್ಯರಾದ ಶ್ರೀನಿವಾಸ್ ಮೂರ್ತಿ, ಟಿ.ನಿಂಗಣ್ಣ,‌ ಇ ಶ್ರೀನಿವಾಸ್ ಉಪಸ್ಥಿತರಿದ್ದರು.

ಮಧ್ಯಾನ್ಹ ಪ್ರತಿನಿಧಿ ಅಧಿವೇಶನಕ್ಕೆ ಮುನ್ನ ಜಿಲ್ಲಾ ಸಮಿತಿ ಸದಸ್ಯೆ ನಿಂಗಮ್ಮ ಧ್ವಜಾರೋಹಣ ಮಾಡಿದರೆ ಜಿಲ್ಲಾ ಸಮಿತಿ ಸದಸ್ಯ ಅನಂತರಾಜ್ ಶ್ರದ್ಧಾಂಜಲಿ ನಿರ್ಣಯ ಮಂಡಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ಎಚ್ ಆನಂದರಾಜ್ ಕಳೆದ ‌ಮೂರು ವರ್ಷಗಳ ರಾಜಕೀಯ ಸಂಘಟನಾ ವರದಿಯನ್ನು ಚರ್ಚೆಗೆ ಮಂಡಿಸಿದರು ಅದರ‌ಮೇಲೆ ವಿವಿಧ ಶಾಖೆಗಳ ಸಂಗಾತಿಗಳು ಚರ್ಚೆ ನಡೆಸಿದರು. ಬಳಿಕ ಒಂಬತ್ತು ಜನರ ಜಿಲ್ಲಾ ಸಂಘಟನಾ ಸಮಿತಿ ಆಯ್ಕೆ ಮಾಡಲಾಯಿತು ನೂತನ ಕಾರ್ಯದರ್ಶಿ ಯಾಗಿ ಆನಂದರಾಜ್ ಪುನರಾಯ್ಕೆಯಾದರು.

ಸಮ್ಮೇಳನ ಉದ್ಘಾಟನೆಗಿಂತ ಮುನ್ನ ಪ್ರವಾಸಿ ಮಂದಿರದಿಂದ ಅಂಬೇಡ್ಕರ್ ಭವನದವರೆಗೆ ನೂರಾರು ಜನರ‌ ಮೆರವಣಿಗೆ ನಡೆಯಿತು.

ಇದನ್ನೂ ನೋಡಿ: ಹವಾಮಾನ ವರದಿ ಅಕ್ಟೋಬರ್ 16ರ ವರೆಗೆJanashakthi Media

Donate Janashakthi Media

Leave a Reply

Your email address will not be published. Required fields are marked *