ಅಕ್ರಮ ಗಣಿಗಾರಿಕೆ: ಉರುಳಿ ಬಿದ್ದ ಬಂಡೆಗಳು; ಕಾರ್ಮಿಕರು ಸಿಲುಕಿರುವ ಶಂಕೆ

ವದತ್ತಿ: ಏಪ್ರಿಲ್‌ 16 ಬುಧವಾರ ರಾತ್ರಿ ತಾಲ್ಲೂಕಿನ ಯಡ್ರಾವಿ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆದ ಸಂದರ್ಭದಲ್ಲಿ, ಗುಡ್ಡದ ಮೇಲಿನ ಬೃಹತ್‌ ಬಂಡೆಗಳು ಉರುಳಿಬಿದ್ದಿವೆ. ಇದರಿಂದ ಒಂದು ಜೆಸಿಬಿ ಹಾಗೂ ಟ್ರ್ಯಾಕ್ಟರ್‌ ಸಂಪೂರ್ಣ ನಜ್ಜುಗುಜ್ಜಾಗಿವೆ. ಬಂಡೆಗಲ್ಲುಗಳ ಮಧ್ಯೆ ಅಕ್ರಮ ಗಣಿಗಾರಿಕೆ ನಡೆಸಿದವರು ಸಿಕ್ಕಿಕೊಂಡ ಅನುಮಾನ ಇದೆ.

ರಾತ್ರಿ 10.30ರ ವೇಳೆ ಗುಡ್ಡದ ಪಕ್ಕದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿತ್ತು. ಏಕಾಏಕಿ ಬೃಹತ್‌ ಬಂಡೆಗಳು ಗುಡ್ಡದ ಮೇಲಿಂದ ಉರುಳಿದವು. ವಿಷಯ ತಿಳಿದ ಸವದತ್ತಿ ಅಗ್ನಿಶಾಸಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.

ಇದನ್ನೂ ಓದಿ: ಮುಡಾ ಪ್ರಕರಣ: ಸಿದ್ದರಾಮಯ್ಯ ಹಾಗೂ ಪತ್ನಿಗೆ ಹೈಕೋರ್ಟ್ ನೋಟಿಸ್, ಸಿಬಿಐ ತನಿಖೆಗೆ ಮನವಿ

ಆಗ ನಜ್ಜುಗುಜ್ಜಾದ ವಾಹನಗಳು ಸಿಕ್ಕವು. ಆದರೆ, ಬಂಡೆಗಲ್ಲುಗಳ ಮಧ್ಯೆ ಯಾರಾದರೂ ಸಿಕ್ಕಿಕೊಂಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಗ್ರಾಮದಲ್ಲಿ ಗಣಿಗಾರಿಕೆಯಲ್ಲಿ ನಡೆಸಿದವರು ಯಾರಾದರೂ ಕಾಣೆಯಾಗಿದ್ದಾರೆ ಎಂದು ಹುಡುಕಾಟ ನಡೆದಿದೆ ಎಂದು ಮೂಲಗಳು ತಿಳಿಸಿವೆ. ತಡರಾತ್ರಿಯ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಇದನ್ನೂ ನೋಡಿ: ಅಂಬೇಡ್ಕರ್ ಮತ್ತು ಕಾರ್ಮಿಕ ಕಾನೂನುಗಳು – ಅಶ್ವಿನಿ ಒಬುಳೇಶ್‌ Janashakthi Media

Donate Janashakthi Media

Leave a Reply

Your email address will not be published. Required fields are marked *