ತುಮಕೂರು: ಬೀಡಿ ಕಾರ್ಮಿಕರ ಕನಿಷ್ಢ ವೇತನ ಪರಿಷ್ಕರಣೆ ವಿಳಂಬ -ತಕ್ಷಣ ಪರಿಕ್ಷರಣೆಗೆ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಮತ್ತು ತುಮಕೂರು ಜಿಲ್ಲಾ ಬೀಡಿ ಕೆಲಸಗಾರರ ಸಂಘ .ರಿ, ಸಿಐಟಿಯು ಬುಧುವಾರ (೦4-10-2023) ರಂದು ತುಮಕೂರು ಜಿಲ್ಲಾಧಿಕಾರಿಗಳು ಮತ್ತು ಕಾರ್ಮಿಕ ಅಧಿಕಾರಿಗಳ ಮೂಲಕ ಕಾರ್ಮಿಕ ಸಚಿವರಿಗೆ ಒತ್ತಾಯಿಸಿದೆ.
ಕನಿಷ್ಠ ವೇತನವು 5 ವರ್ಷಗಳಿಗೆ ಒಮ್ಮೆ ಮೇಲ್ಮುಖವಾದ ಪರಿಷ್ಕರಣೆಗೆ ಒಳಪಡುವುದು ನಡೆದು ಕೊಂಡು ಬಂದಿರುವ ವಾಡಿಕೆಯಾಗಿದೆ, ಈ ಹಿನ್ನಲೆಯಲ್ಲಿ 14-೦3-2018 ಪರಿಷ್ಕರಣೆಗೆ ಒಳಪಡಿಸಲಾಗಿತ್ತು .ಇದು ಐದುವರ್ಷಗಳಾದ ಕಾರಣ 14/3/2023 ಮತ್ತು ಪರಿಷ್ಕರಣೆಗೆ ಒಳ ಪಡಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ , ಆದರೆ ಇದುವರೆಗೂ ಬೀಡಿ ಕಾರ್ಮಿಕ ಕನಿಷ್ಠ ಕೂಲಿಯ ಪರಿಷ್ಕರಣೆ ಸರ್ಕಾರ ಯಾವುದೇ ಕ್ರಮ ವಹಿಸಿಲ್ಲವೆಂದು ಈ ವಿಚಾರಕ್ಕೆ ಸಂಬಂದಿಸಿದಂತೆ ಸಿಐಟಿಯು ಕಾರ್ಮಿಕ ಸಚಿವರಿಗೆ ಮನವಿ ಪತ್ರ ಸಲ್ಲಿಸಿದೆ.
ಕರ್ನಾಟಕ ರಾಜ್ಯದ 22-23 ಜಿಲ್ಲೆಗಳಲ್ಲಿ ನೂರಾರು ಬೀಡಿ ಉದ್ಯಮಗಳಲ್ಲಿ ಸರಿ – ಸುಮಾರು 6 ರಿಂದ 7 ಲಕ್ಷ ಜನ, ತುಮಕೂರು ಜಿಲ್ಲೆಯಲ್ಲಿ ಸರಿಸುಮಾರು 60-70 ಸಾವಿರ ಜನ ಬೀಡಿ ಕಾರ್ಮಿಕರು ಇದ್ದಾರೆ. ಈ ಬೀಡಿ ಉದ್ಯಮವು ರಾಜ್ಯ ಸರ್ಕಾರದ ಕನಿಷ್ಠ ವೇತನ ಪಾವತಿ ಕಾಯ್ದೆ 1948 ಅಧಿಸೂಚಿತ ಪಟ್ಟಿಯಲ್ಲಿ ಇದೆ, 5 ವರ್ಷಗಳ ಹಿಂದೆ ರಾಜ್ಯ ಸರ್ಕಾರವು ಕನಿಷ್ಠ ವೇತನ ಪಾವತಿ ಕಾಯ್ದೆ 1948 ಕಲಂ 5.1.ಎ ಅಡಿಯಲ್ಲಿ ತ್ರೀಪಕ್ಷೀಯ ಸಮಿತಿ ಒಂದನ್ನು ರಚಿಸಿ ಕನಿಷ್ಠ ವೇತನ ಪರಿಷ್ಕರಿಸಿ ಅಧಿಸೂಚನೆ ಹೊರಡಿಸಲಾಗಿತ್ತು, ಸದರಿ ಅಧಿಸೂಚನೆಯು ನ್ಯಾಯಲಯದಲ್ಲಿ ಕಳೆದ 4-5 ವರ್ಷಗಳಿಂದ ವಿವಾದಕ್ಕೆ ಒಳಗಾಗಿ ಜಾರಿಯಾಗದೇ ಹಾಗೇ ಉಳಿದಿದೆ, ಕಳೆದ 5 ವರ್ಷಗಳಿಂದ ಬಡ ಕಾರ್ಮಿಕರು ಬೆಲೆ ಏರಿಕೆಯಲ್ಲಿ ಬೆಂದು, ಕನಿಷ್ಠ ಕೂಲಿ ಇಲ್ಲದೆ ದುಸ್ತರವಾದ ಬದುಕು ಸಾಗಿರುತ್ತಿರುವುದನ್ನು ಸರ್ಕಾರ ಪರಿಗಣಿಸಿ ಈ ತಕ್ಷಣದಲ್ಲಿ ಸ್ಥಿತಿಯನ್ನು ಬದಲಿಸಲು ಸರ್ಕಾರ ಕ್ರಮ ವಹಿಸಬೇಕೆಂದು ಆಗ್ರಹಿಸಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಬಿಜೆಪಿ ಬೆಂಬಲಿಗರು ಹಂಚುತ್ತಿರುವ ಈ ಘಟನೆ ‘ಲವ್ ಜಿಹಾದ್’ ಅಲ್ಲ, ಯುಪಿಯದ್ದೂ ಅಲ್ಲ!
ಈ ಬಾರಿ ಕನಿಷ್ಟ ಕೂಲಿಯನ್ನು ಪರಿಷ್ಕರಿಸಿ ನಿಗಧಿ ಪಡಿಸುವಾಗ ಒಂದು ಸಾವಿರ ಬೀಡಿಯ ಕೂಲಿಯನ್ನು 395 ರೂಪಾಯಿ ಹಾಗೂ ತುಟ್ಟಿ ಭತ್ಯೆಯನ್ನು ಪ್ರತಿ ಪಾಯಿಂಟ್‌ಗೆ 5 ಪೈಸೆಯಂತೆ ಈ ತಕ್ಷಣ ಪರಿಷ್ಕರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದೆ.ಒಂದು ತಿಂಗಳಲ್ಲಿ ಈ ಕೆಲಸವನ್ನು ಮಾಡದೆ ಹೋದಲ್ಲಿ ಸಂಘವು ಅನಿರ್ವಾಯವಾಗಿ ಮುಂದಿನ ಹೋರಾಟಕ್ಕೆ ಮುಂದಾಗುತ್ತದೆ ಎಂದು ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಾಕ್ಷೆ ಶ್ರೀಮತಿ ಶಹತಾಜ್, ಪ್ರಧಾನ ಕಾರ್ಯದರ್ಶಿ, ಸೈಯದ್ ಮುಜೀಬ್ ಉಪಸ್ಥಿತರಿದ್ದರು.
ವಿಡಿಯೋ ನೋಡಿ: ಕೃಷಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದಎಂಎಸ್ ಸ್ವಾಮಿನಾಥನ್Janashakthi Media