ತೆಲಂಗಾಣ| ಸುರಂಗದ ಮೇಲ್ಛಾವಣಿ ಕುಸಿತ: ಕಾರ್ಮಿಕರನ್ನು ರಕ್ಷಿಸಲು ಕಾರ್ಯ ಮುಂದುವರಿಕೆ

ತೆಲಂಗಾಣ: ನಾಗರದ ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಮೇಲ್ಛಾವಣಿ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ದಿನವೂ ರಕ್ಷಣಾ ಕಾರ್ಯ ಮುಂದುವರಿದಿದೆ.

ರ‍್ಯಾಟ್‌ ಹೊಲ್‌ ಪ್ರಯತ್ನದ ಬಳಿಕ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಸವಾಲಿನ ಕೆಲಸಕ್ಕೆ ರಕ್ಷಣಾ ತಂಡ ಮುಂದಾಗಿದೆ. ಕಾರ್ಮಿಕರು ಸಿಲುಕಿರುವ ಸ್ಥಳಕ್ಕೆ ತೆರಳಲು 10 ಅಡಿ ಎತ್ತರ ಮತ್ತು 10,000 ಘನ ಮೀಟ‌ರ್ ಆವೃತ್ತವಾಗಿರುವ ಕೆಸರನ್ನು ಹೊರತೆಗೆಯುವ ಸವಾಲಿನ ಕೆಲಸಕ್ಕೆ ರಕ್ಷಣಾ ತಂಡ ಕೈಹಾಕಿದೆ. ತೆಲಂಗಾಣ

ಇದನ್ನೂ ಓದಿ: 2026 ರಿಂದ ವರ್ಷಕ್ಕೆ 2 ಬಾರಿ 10ನೇ ತರಗತಿ ಪರೀಕ್ಷೆ: ಸಿಬಿಎಸ್‌ಇ

ಸುರಂಗದ ಒಳಗೆ ತಿರುವು ತೆಗೆದುಕೊಳ್ಳಲು ಸ್ಥಳಾವಕಾಶವಿಲ್ಲದೇ ಲಾರಿಗಳು ಒಳಗೆ ಹೋಗಿ ಕೆಸರು ಸಾಗಿಸಲು ಕಷ್ಟಕರವಾಗಿದೆ. ಸುರಂಗದ ಒಳಗಿದ್ದ ಟನಲ್‌ ಬೋರಿಂಗ್ ಮೆಷಿನ್ಗೆ ಅಳವಡಿಸಲಾಗಿದ್ದ ಕನ್ವೇಯ‌ರ್ ಬೆಲ್ಟ್ ಹಾಳಾಗಿದ್ದು, ಬೆಲ್ಟ್ ಮೂಲಕ ಮಣ್ಣು ಸಾಗಿಸುವ ಆಯ್ಕೆ ಕೂಡ ಇಲ್ಲದಂತಾಗಿದೆ.

ಇದನ್ನೂ ನೋಡಿ: ಪುಸ್ತಕ : ಬದಲಾವಣೆಯನ್ನು ತರುವ ಪ್ರಮುಖ ಅಸ್ತ್ರ – ಜಿ.ಎನ್ ಮೋಹನ್ Janashakthi Media

Donate Janashakthi Media

Leave a Reply

Your email address will not be published. Required fields are marked *