ಒಂದು ದಿನ ಸಂಚಾರ ಪೊಲೀಸರಾಗಿ ಕೆಲಸ ಮಾಡಿ: ಬೆಂಗಳೂರಿನಲ್ಲಿ ‘ಕಾಪ್ ಫಾರ್ ದಿ ಡೇ’ ಕಾರ್ಯಕ್ರಮ ಪುನರಾರಂಭ

ಬೆಂಗಳೂರು: ನಗರದ ಸಂಚಾರ ವ್ಯವಸ್ಥೆ ನಿರ್ವಹಣೆಯ ಸವಾಲುಗಳನ್ನು ಸಾರ್ವಜನಿಕರಿಗೆ ನೇರವಾಗಿ ಪರಿಚಯಿಸುವ ಉದ್ದೇಶದಿಂದ ಬೆಂಗಳೂರು ಸಂಚಾರ ಪೊಲೀಸರು ‘ಕಾಪ್ ಫಾರ್ ದಿ ಡೇ’ ಕಾರ್ಯಕ್ರಮವನ್ನು ಪುನರಾರಂಭಿಸಿದ್ದಾರೆ. ಈ ಕಾರ್ಯಕ್ರಮದ ಮೂಲಕ ಬೆಂಗಳೂರಿನ ನಾಗರಿಕರು ಒಂದು ದಿನ ಸಂಚಾರ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸಿ, ವಾಹನ ದಟ್ಟಣೆ ನಿಯಂತ್ರಣ ಸೇರಿದಂತೆ ಸಂಚಾರ ನಿರ್ವಹಣೆಯ ಸವಾಲುಗಳನ್ನು ನೇರವಾಗಿ ಅನುಭವಿಸಬಹುದಾಗಿದೆ. ಒಂದು

ಬೆಂಗಳೂರು ಸಂಚಾರ ಪೊಲೀಸ್ ಜಂಟಿ ಆಯುಕ್ತ ಕಾರ್ತಿಕ್ ರೆಡ್ಡಿ ಅವರು, ಈ ಕಾರ್ಯಕ್ರಮವನ್ನು ಈ ಹಿಂದೆ ಯಶಸ್ವಿಯಾಗಿ ನಡೆಸಲಾಗಿತ್ತು. ಇದೀಗ ಮತ್ತೆ ಆರಂಭಿಸಲಾಗಿದ್ದು, ಸಂಚಾರ ಪೊಲೀಸರ ಜವಾಬ್ದಾರಿ ಮತ್ತು ಅವರು ಪ್ರತಿದಿನ ಎದುರಿಸುವ ಸಮಸ್ಯೆಗಳನ್ನು ನಾಗರಿಕರು ಅರ್ಥಮಾಡಿಕೊಳ್ಳಲು ಇದು ನೆರವಾಗಲಿದೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರ ಜತೆಗೆ, ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುರಕ್ಷಿತ ಹಾಗೂ ಸುಗಮಗೊಳಿಸಲು ಸಲಹೆಗಳನ್ನು ನೀಡಬಹುದು.

ಇದನ್ನೂ ಓದಿ : ‘ಹತ್ರಾಸ್‌ ಪ್ರಕರಣವನ್ನು ಯಾರೂ ಮರೆಯುವುದಿಲ್ಲ’: ಮಹಿಳಾ ಸುರಕ್ಷತೆ ವಿಚಾರದಲ್ಲಿ ಬಿಜೆಪಿಗೆ ಅಖಿಲೇಶ್‌ ಯಾದವ್‌ ತಿರುಗೇಟು

‘ಕಾಪ್ ಫಾರ್ ದಿ ಡೇ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು ಬೆಂಗಳೂರು ಸಂಚಾರ ಪೊಲೀಸರ ಬಿಟಿಪಿ ಆಸ್ಟ್ರಾಮ್ ಆ್ಯಪ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಆ್ಯಪ್‌ನಲ್ಲಿ ಮೊಬೈಲ್ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಂಡ ಬಳಿಕ ‘ಟ್ರಾಫಿಕ್ ಕಾಪ್ ಫಾರ್ ಎ ಡೇ’ ಆಯ್ಕೆಯನ್ನು ಆರಿಸಿ ಅಗತ್ಯ ವಿವರಗಳನ್ನು ಸಲ್ಲಿಸಬೇಕು. ಆಯ್ಕೆಯಾದ ನಾಗರಿಕರಿಗೆ ಸಂಚಾರ ಪೊಲೀಸರೊಂದಿಗೆ ಒಂದು ದಿನದ ಅನುಭವ ಪಡೆಯುವ ಅವಕಾಶ ದೊರೆಯಲಿದೆ.

ಕಾರ್ಯಕ್ರಮದ ಉದ್ದೇಶ ಕೇವಲ ಸಂಚಾರ ಪೊಲೀಸರ ಕರ್ತವ್ಯವನ್ನು ಪರಿಚಯಿಸುವುದಷ್ಟೇ ಅಲ್ಲದೆ, ವಾಹನ ಸವಾರರು ಮತ್ತು ಪೊಲೀಸರ ನಡುವೆ ಉತ್ತಮ ಅರಿವು ಮೂಡಿಸುವುದಾಗಿದೆ. ಸಂಚಾರ ನಿಯಮ ಪಾಲನೆ, ವಾಹನ ದಟ್ಟಣೆ ನಿಯಂತ್ರಣ ಹಾಗೂ ರಸ್ತೆ ಸುರಕ್ಷತೆಯಲ್ಲಿ ಸಾರ್ವಜನಿಕರ ಸಹಕಾರದ ಮಹತ್ವವನ್ನು ಈ ಮೂಲಕ ಮನವರಿಕೆ ಮಾಡಿಕೊಡಲು ಇಲಾಖೆ ಮುಂದಾಗಿದೆ. ಕಾರ್ಯಕ್ರಮದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು, ಬೆಂಗಳೂರಿನ ಮಾದರಿಯನ್ನು ಮುಂಬೈ ಸೇರಿದಂತೆ ಇತರ ನಗರಗಳಲ್ಲೂ ಜಾರಿಗೆ ತರಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಇದನ್ನೂ ನೋಡಿ : ಎಸ್‌ಐಆರ್‌ ವಿರುದ್ಧ ಸೆ.1ರಂದು ‘ಚುನಾವಣಾ ಆಯೋಗ ಚಲೋ’: ಪ್ರಕಾಶ್‌ ರಾಜ್‌ Janashakthi Media

Donate Janashakthi Media

Leave a Reply

Your email address will not be published. Required fields are marked *