- ಕೇರಳದ ಶೀಜಾ ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
- ನೋಡಲು ವಿಚಿತ್ರವೆನಿಸಬಹುದು. ಆದರೆ ಶೀಜಾಗೆ ತನ್ನ ಲುಕ್ ಬಗ್ಗೆ ತುಂಬಾ ಹೆಮ್ಮೆ ಇದೆ.
ಕಣ್ಣೂರು : ಕೇರಳದ 35 ವರ್ಷದ ಶೈಜಾ ಎಂಬ ಮಹಿಳೆ ಮೀಸೆ ಬಿಡುವ ಮೂಲಕ ಗಮನ ಸೆಳೆದಿದ್ದಾರೆ. ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಮೀಸೆಯಿಂದಾಗಿ ಅವರು ಇಂಟರ್ನೆಟ್ನಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ.
ನಾನು ಮೀಸೆಯನ್ನು ಹೊಂದಲು ಇಷ್ಟಪಡುತ್ತೇನೆ ಮತ್ತು ಅದನ್ನು ತೆಗೆದುಹಾಕಲು ನಾನು ಬಯಸುವುದಿಲ್ಲ” ಎಂದು ಅವರು ಹೇಳುತ್ತಾರೆ. ಶೈಜಾಳ ಮುಖದಲ್ಲಿ ಮೊಟ್ಟಮೊದಲ ಬಾರಿಗೆ ಮೀಸೆ ಚಿಗುರೊಡೆದಾಗ ಅನೇಕರು ಆಕೆಯನ್ನು ಅವಮಾನಿಸಲು ಮುಂದಾದರು. ಆದರೆ ಅವಳು ಈ ಅವಮಾನಗಳನ್ನು ತನ್ನ ಹೃದಯಕ್ಕೆ ತೆಗೆದುಕೊಳ್ಳುವುದಿಲ್ಲ. “ನನ್ನ ತವರೂರಿನಲ್ಲಿ ನನ್ನನ್ನು ‘ಮೀಶಾಕರಿ’ ಶೈಜಾ ಎಂದು ಕರೆಯಲಾಗುತ್ತದೆ ಮತ್ತು ಇದು ನನಗೆ ದುಃಖ ತರುವ ವಿಷಯವಲ್ಲ” ಎಂದು ಅವರು ಹೇಳುತ್ತಾರೆ.
ಪತಿ ಪಾಲಕ್ಕಾಡ್ ಮೂಲದ ಲಕ್ಷ್ಮಣನ್ ಮತ್ತು ಮಗಳು ೧೦ ನೇ ತರಗತಿ ವಿದ್ಯಾರ್ಥಿನಿ ಅಶ್ವಿಕಾ ಸೇರಿದಂತೆ ಶೈಜಾ ಅವರ ಕುಟುಂಬವು ತನ್ನ ಮೀಸೆಯನ್ನು ಉಳಿಸಿಕೊಳ್ಳುವ ನಿರ್ಧಾರಕ್ಕೆ ತುಂಬಾ ಬೆಂಬಲ ನೀಡುತ್ತಿದೆ. ‘ನಿನ್ನ ಮೀಸೆ, ಅದು ನಿನ್ನ ನಿರ್ಧಾರ’ ಎನ್ನುತ್ತಾರೆ ಆಕೆಯ ಪತಿ. ಮಹಿಳೆಯರು ಇತರರ ಆಶಯದಂತೆ ಬದುಕಿದಾಗ ದುರ್ಬಲರಾಗುತ್ತಾರೆ. ನನ್ನ ಮೀಸೆಯ ಹಿಂದಿನ ಕಥೆಯನ್ನು ತಿಳಿದುಕೊಳ್ಳಲು ಎಲ್ಲರಿಗೂ ಕುತೂಹಲವಿದೆ,” ಎಂದು ಶೈಜಾ ಹೇಳುತ್ತಾರೆ.
ಇದನ್ನೂ ಓದಿ :ಪರಸ್ಪರ ಮಡಿಲಲ್ಲಿ ಕುಳಿತು ಸಂಪ್ರದಾಯವಾದಿಗಳಿಗೆ ಪಾಠ ಕಲಿಸಿದ ಕೇರಳ ವಿದ್ಯಾರ್ಥಿಗಳು
ಹಾರ್ಮೋನ್ಗಳ ಏರಿಳಿತಗಳಿಂದಾಗಿ ಕೆಲವು ಮಹಿಳೆಯರ ಮುಖದ ಮೇಲೆ ಕೂದಲು ಬೆಳೆಯುವುದು ಸಾಮಾನ್ಯ ಸಂಗತಿ. ಹಾಗೆಯೇ, ಸಾಮಾನ್ಯವಾಗಿ ಹೀಗೆ ಕೂದಲು ಬೆಳೆಯುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸ್ತ್ರೀಯರು ಶೇವ್ ಮಾಡುವುದು, ವಿವಿಧ ಕ್ರೀಮ್ಗಳನ್ನು ಬಳಸಿ ಕೂದಲು ಕೀಳುವುದು ಸೇರಿದಂತೆ ಹಲವು ಬಗೆಯ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಆದರೆ ಕೇರಳದ 35 ವರ್ಷದ ಭಾರತೀಯ ಮಹಿಳೆಗೆ ಅವರ ಮೀಸೆಯೇ ಅವರಿಗೆ ಹೆಚ್ಚು ಆಕರ್ಷಕ.
ಸಾಮಾನ್ಯವಾಗಿ ಮಹಿಳೆಯರಿಗೆ ಮೀಸೆ ಇದ್ದರೆ ಅದನ್ನು ಗೇಲಿ ಮಾಡುವವರೇ ಹೆಚ್ಚು. ಕೆಲ ಜನ ಮುಖದ ಕೂದಲುಗಾಗಿ ಶೈಜಾವನ್ನು ಟ್ರೋಲ್ ಮಾಡಿದರೆ, ಇನ್ನೂ ಕೆಲವರು ಆಕೆಯ ಕೆಚ್ಚೆದೆಯ ಆಯ್ಕೆಯನ್ನು ಮೆಚ್ಚಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಶೈಜಾ ಅವರ ಮುಖದ ಮೇಲೆ ಮೀಸೆ ಕಾಣಿಸಿಕೊಳ್ಳುತ್ತಿದ್ದು ಅದನ್ನು ಮರೆ ಮಾಡಲಾಗಲಿ ಅಥವಾ ಅದನ್ನು ತೆಗೆಸುವ ಕಡೆಗಾಗಲಿ ಶೈಜಾ ಅಷ್ಟಾಗಿ ಮನಸ್ಸು ಮಾಡಿಲ್ಲ. ವಿಚಲಿತರೂ ಆಗಲಿಲ್ಲ. ಪುರುಷರಂತೆ ನನಗೂ ಮೀಸೆ ಅಂದರೆ ಇಷ್ಟ ಎಂದಿದ್ದಾರೆ.