ಮೈಸೂರು: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೊಳೆನರಸೀಪುರ ನಿವಾಸದಿಂದ ಮನೆಕೆಲಸದಾಕೆ ಅಪಹರಣ ಪ್ರಕರಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೆ.ಆರ್.ನಗರ ಠಾಣೆಯ ಪೊಲೀಸರು ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬುವಿನ ಮೊಬೈಲ್ ಅನ್ನು ಸೀಜ್ ಮಾಡಿದ್ದಾರೆ ಎಂದು ವರದಿಯಾಗಿದೆ. ಅಪಹರಣ
ಎ2 ಆರೋಪಿ ಸತೀಶ್ ಬಾಬು ಮೊಬೈಲ್ ಅನ್ನು ಸೀಜ್ ಮಾಡಿದ್ದು, ಆತ ಪೊಲೀಸರಿಗೆ ಅಸಹಕರಿಸುತಿದ್ದಾನೆ ಎನ್ನಲಾಗಿದೆ. ಅಲ್ದೇ ಆತ ತನ್ನ ಮೊಬೈಲ್ನ ಕಾಲ್ ರಿಕಾರ್ಡ್ ಸೇರಿದಂತೆ ಇತರೆ ಮಾಹಿತಿಗಳನ್ನು ಡಿಲೀಟ್ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಮೊಬೈಲ್ ಅನ್ನು ಸೀಜ್ ಮಾಡಿರುವ ಪೊಲೀಸರು ಆತನ ಮೊಬೈಲ್ ಕಾಲ್ ಡಿಟೇಲ್ಸ್ ಮೇಲೆ ಹದ್ದಿನಕಣ್ಣಿಟ್ಟು ಅದರ ಡಾಟಾವನ್ನು ಸಂಗ್ರಹಿಸಿ, ಕಾಲ್ ರಿಕಾರ್ಡ್ಸ್ನ ವಿವರ ಪತ್ತೆಹಚ್ಚುತ್ತಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : ಮೋದಿ ವಿರುದ್ಧ ಸ್ಪರ್ಧಿಸಿರುವ ಹಾಸ್ಯನಟ ಶ್ಯಾಮ್ ರಂಗೀಲಾ; ಕನ್ನಡದ ನಟ ಕಿಶೋರ್ ಬೆಂಬಲ
ಬೆಂಗಳೂರು, ಹಾಸನ, ಹೊಳೆನರಸೀಪುರ, ಕೆ.ಆರ್.ನಗರ, ಮಂಡ್ಯ, ಕೆ.ಆರ್.ಪೇಟೆ ಎಲ್ಲಾ ಕಡೆ ತಲಾಶ್ ಮಾಡುತ್ತಿರುವ ಪೊಲೀಸ್ ಸಿಬ್ಬಂದಿ. ಆದರೆ ಎಷ್ಟೇ ಹುಡುಕಿದರೂ ಮನೆಕೆಲಸದ ಮಹಿಳೆ ಪತ್ತೆಯಾಗಿಲ್ಲ. ಇದು ಆತಂಕಕ್ಕೀಡು ಮಾಡಿದ್ದು, ಒಂದೆಡೆ ಎಸ್ ಐಟಿ ಪೊಲೀಸರಿಂದ ಹುಟುಕಾಟ ನಡೆಯುತ್ತಿದ್ದರೆ ಮತ್ತೊಂದೆಡೆ ಕೆ.ಆರ್.ನಗರ ಠಾಣಾ ಪೊಲೀಸರಿಂದ ಶೋಧಕಾರ್ಯ ನಡೆದಿದೆ. ಈಗಾಗಲೇ ಮೈಸೂರು ಕೆ.ಆರ್.ನಗರ ಠಾಣಾ ಪೊಲೀಸರು ಹೆಚ್.ಡಿ.ರೇವಣ್ಣನಿಗೆ ಲುಕ್‌ಔಟ್ ನೊಟೀಸ್ ನೀಡಿದ್ದಾರೆ. ಕಿಡ್ನ್ಯಾಪಿಂಗ್ ಪ್ರಕರಣ ಸಂಬಂಧ ಮಹಿಳೆಯ ಮಗ ದೂರು ಸಲ್ಲಿಸಿದ್ದಾನೆ.
ಇದನ್ನು ನೋಡಿ : ಬಿಜೆಪಿಗೆ 400 ಪ್ಲಸ್ ಅಂದರೆ ಸಂವಿಧಾನ ಬದಲಾವಣೆ ಮತ್ತು ಮೀಸಲಾತಿ ಅಂತ್ಯ, ‘ಇಲ್ಲಿದೆ ವಿವರಗಳು’ Janashakthi Media