ಉತ್ತರ ಪ್ರದೇಶ: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಮಂಗಳವಾರ ಸಂಜೆ 35 ವರ್ಷದ ಮಹಿಳೆಯೊಬ್ಬಳ ಮನೆಗೆ ನುಗ್ಗಿದ ಕನಿಷ್ಠ ಐವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿ, ಲಕ್ಷಾಂತರ ಮೌಲ್ಯದ ನಗದು ಮತ್ತು ಚಿನ್ನಾಭರಣಗಳೊಂದಿಗೆ ಪರಾರಿಯಾಗಿರುವ ಪ್ರಕರಣ ದಾಕಲಗಿದೆ.
ಸಾಮೂಹಿಕ ಅತ್ಯಾಚಾರ ಮತ್ತು ಡಕಾಯಿತಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ. ಆರೋಪಿಗಳನ್ನು ಬಂಧಿಸಲು ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಬಿಜ್ನೋರ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ನೀರಜ್ ಕುಮಾರ್ ಜದೌನ್ ಹೇಳಿದ್ದಾರೆ.
ಬುಧವಾರದಂದು ದಾಖಲಿಸಲಾದ ಎಫ್‌ಐಆರ್ ಪ್ರಕಾರ , ಆರೋಪಿಯು ಮಂಗಳವಾರ ಮಹಿಳೆಯ ಮನೆಗೆ ನುಗ್ಗಿದ ಆಗಂತಕಕರು, ಆಕೆಗೆ ಬಲವಂತದಿಂದ ಯಾವುದೋ ದ್ರವವನ್ನು ಸೇವಿಸುವಂತೆ ಒತ್ತಾಯಿಸಿದ್ದಾರೆ. ಅದನ್ನು ಕುಡಿದು ಆಕೆ ಪ್ರಜ್ಞಾಹೀನಳಾದಾಗ, ಸುಮಾರು 250 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಮತ್ತು 1.5 ಲಕ್ಷ ರೂಪಾಯಿ ನಗದು ದೋಚಿದ್ದಾರೆ. ಆ ಆಗಂತಕರು ಮನೆಯನ್ನು ದೋಚುತ್ತಿರುವ ಸಮಯದಲ್ಲಿ ಮಹಿಳೆಗೆ ಎಚ್ಚರವಾಗಿ ಸಹಾಯಕ್ಕಾಗಿ ಕೂಗಿದಾಗ, ಆಕೆಯನ್ನು ಸೆರೆ ಹಿಡಿದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆಕೆಯ ದೇಹವನ್ನು ಸಿಗರೇಟಿನಿಂದ ಆರು ಕಡೆ ಸುಟ್ಟು ಪರಾರಿಯಾಗಿದ್ದಾರೆ’ ಎಂದು ಮಹಿಳೆಯ ಪತಿ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.
ಮಹಿಳೆಯ ಪತಿ ನೀಡಿರುವ ಲಿಖಿತ ದೂರಿನ ಆಧಾರದ ಮೇಲೆ ಪ್ರದೇಶ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ಸಂಜೆ ಮಹಿಳೆಯು ಮನೆಯಲ್ಲಿ ಒಬ್ಬಳೇ ಇದ್ದಳು ಎಂದು ಹತ್ತಿರದ ಕುಟುಂಬಸ್ತರು ಯಾರೋ ಆರೋಪಿಗೆ ಸುಳಿವು ನೀಡಿದ್ದಾರೆ. ಆಕೆಯ ಪತಿ ಮತ್ತು ಅವರ ಇಬ್ಬರು ಪುತ್ರರು ಹತ್ತಿರದ ಪಟ್ಟಣದ ವೈದ್ಯರಿಂದ ಔಷಧಿ ಪಡೆಯಲು ಹೋಗಿರುವ ಸಂದರ್ಭವನ್ನು ಕಾದು ಈ ಕೃತ್ಯವನ್ನು ಎಸಗಲಾಗಿದೆ. ನಾವು ಪ್ರದೇಶದಲ್ಲಿ ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಬಿಜ್ನೋರ್ ನ ಎಸ್‌ಪಿ ನೀರಜ್ ಕುಮಾರ್ ಜದೌನ್ ಹೇಳಿಕೆ ನೀಡಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376D (ಗ್ಯಾಂಗ್ ಅತ್ಯಾಚಾರ), 395 (ದರೋಡೆಕೋರಿಕೆ), 342 (ತಪ್ಪಾದ ಬಂಧನ) ಮತ್ತು 328 (ವಿಷದಿಂದ ಗಾಯಗೊಳಿಸುವುದು ಇತ್ಯಾದಿ) ಅಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು, ಆರೋಪಿಗಳು ಇನ್ನು ಪತ್ತೆಯಾಗಿಲ್ಲವೆಂದು