ಇದೇ ವಾರ ಬಿಡುಗಡೆ ಆಗಲಿದೆ ಸಾಪ್ತಸಾಗರದಾಚೆ ಎಲ್ಲೋ (ಸೈಡ್‌ ಬಿ)

ಸೆಪ್ಟೆಂಬರ್‌ 1 ರಂದು ಬಿಡುಗಡೆ ಆಗಿದ್ದ ಸಾಪ್ತಸಾಗರದಾಚೆ ಎಲ್ಲೋ (ಸೈಡ್‌ ಎ) ಸಿನಿಮಾ ಎಲ್ಲೆಡೆ ಬಾರಿ ಸದ್ದು ಮಾಡಿ ಒಳ್ಳೆಯ ವಿಮರ್ಶೆ ಪಡೆದಿತ್ತು. ಇದೀಗಾ ಅಕ್ಟೋಬರ್‌ 17 ರಂದು ಸಾಪ್ತಸಾಗರದಾಚೆ ಎಲ್ಲೋ (ಸೈಡ್‌ ಬಿ) ಬಿಡುಗಡೆ ಆಗಲಿದೆ.

ಸಪ್ತ ಸಾಗರದಾಚೆ ಎಲ್ಲೋ ಭಾಗ ಒಂದರ ಮುಂದುವರೆದ ಭಾಗ ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್ 2. ಚಿತ್ರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಾಯಕನಾಗಿ ಹಾಗೂ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಚೈತ್ರಾ ಆಚಾರ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದ್ದು, ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಪರವಃ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಅವರೇ ನಿರ್ಮಾಣ ಮಾಡಿದ್ದಾರೆ.

ನಿರ್ದೇಶಕ ಹೇಮಂತ್ ಎಂ ರಾವ್ ಅವರ ಮೂರನೇ ಸಿನಿಮಾ ‘ಸಪ್ತ ಸಾಗರದಾಚೆ ಎಲ್ಲೋ’. ರಕ್ಷಿತ್ ಶೆಟ್ಟಿ ಜೊತೆಗೆ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಮಾಡಿದ್ದರು ಹೇಮಂತ್‌. ಅಲ್ಲಿ ತಂದೆ-ಮಗನ ಕಥೆಯನ್ನು ಹೇಳಿದ್ದರು. ಆದರೆ ಈ ಬಾರಿ ಭಾವ ತೀವ್ರತೆಯುಳ್ಳ ಪ್ರೇಮ ಕಥೆಯೊಂದನ್ನು’ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ಹೇಳಿದ್ದಾರೆ. ಇದೊಂದು ಮಿಡಲ್‌ ಕ್ಲಾಸ್ ಪ್ರೇಮಿಗಳ ಕಥೆ. ಪ್ರೀತಿಯ ಆಳದಲ್ಲಿ ಮುಳಗಿರುವ ಪ್ರಿಯಾ ಮತ್ತು ಮನು ಎಂಬಿಬ್ಬರು ಯುವ ಪ್ರೇಮಿಗಳು ಬದುಕಿನ ಮೇಲೆ ಬೆಟ್ಟದಷ್ಟು ಕನಸಿಟ್ಟುಕೊಂಡಿದ್ದಾರೆ. ಸಣ್ಣ ಪುಟ್ಟ ವಿಷಯಗಳಲ್ಲೇ ಖುಷಿ ಕಾಣುತ್ತ, ತಮ್ಮದೇ ಕನಸಿನ ಪ್ರಪಂಚದಲ್ಲಿ ತೇಲುತ್ತಿದ್ದಾರೆ. ಬದುಕನ್ನು ಆಗಾಗ ಫಾಸ್ಟ್‌ ಫಾರ್ವರ್ಡ್ ಮಾಡಿಕೊಂಡು ಸಂಭ್ರಮಿಸುತ್ತಾರೆ. ಪ್ರಿಯಾ, ತುಂಬ ಜಾಣೆ, ಬದುಕನ್ನು ಪ್ರಾಕ್ಟಿಕಲ್ ಆಗಿ ನೋಡುವ ಹೆಣ್ಣು ಮಗಳು. ಆದರೆ ಮನು, ಪ್ರಿಯಾಳನ್ನೇ ಬದುಕು ಎಂದುಕೊಂಡಿರುವವನು. ಇಂತಹ ಪ್ರೇಮಿಗಳು ಪರಿಸ್ಥಿತಿಯ ತಿರುವುಗಳಿಗೆ ಸಿಲುಕಿ ನಲುಗಬೇಕಾಗುತ್ತದೆ. ಅವರಿಬ್ಬರ ಆ ಕಥೆಯನ್ನು ತೀವ್ರವಾಗಿ ಹೇಳಿದ್ದಾರೆ ಹೇಮಂತ್ ರಾವ್.

ಈಗ ಸೈಡ್‌ ಬಿ ಚಿತ್ರದ ಟ್ರೈಲರ್‌ ಆಗಲೇ ಬಿಡುಗಡೆಯಾಗಿದ್ದು, ಸೈಡ್‌ ಎ ಗಿಂತ ವಿಭಿನ್ನ ರೀತಿಯಲ್ಲಿ ಕತೆಯನ್ನು ಮುಂದುವರಿಸುವ ಸೂಚನೆಗಳು ಕಾಣುತ್ತಿವೆ. ಸೈಡ್‌ ಎ ನೋಡಿರುವ ಪ್ರೇಕ್ಷಕರು ಸೈಡ್‌ ಬಿ ನಲ್ಲಿ ಮುಂದೆ ಏನಾಗಬಹುದು ಎಂದು ಸಿನಿಮಾ ನೋಡಲು ಕಾತುರರಾಗಿದ್ದಾರೆ.

ಜೊತೆಗೆ ಮಂಗಳವಾರಂ, ರಾಜಯೋಗ, ಬೆಂಬಿಡದ ನಾವಿಕ ಮುಂತಾದ ಚಿತ್ರಗಳು ಸಹ ಇದೆ ವಾರ 17 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿವೆ.

Donate Janashakthi Media

Leave a Reply

Your email address will not be published. Required fields are marked *