ಶರ್ಟ್ ಬಿಚ್ಚುವಂತೆ ಬೆಂಗಳೂರು ಏರ್ಪೋರ್ಟ್ ಸಿಬ್ಬಂದಿಯಿಂದ ಮಹಿಳೆಗೆ ಒತ್ತಾಯ : ಟ್ವಿಟರ್‌ನಲ್ಲಿ ಆರೋಪ

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ಏರ್ಪೋರ್ಟ್ ಸಿಬ್ಬಂದಿ ಮಹಿಳೆಯೊಬ್ಬರಿಗೆ ಶರ್ಟ್ ಬಿಚ್ಚುವಂತೆ ಒತ್ತಾಯಿಸಿದ್ದಾರಂತೆ. ಈ ಬಗ್ಗೆ ಸ್ವತಃ ಅವರೇ ತಮಗಾದ ಅವಮಾನದ ಬಗ್ಗೆ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು ಸಿಬ್ಬಂದಿಯ ವರ್ತನೆಯನ್ನು ಖಂಡಿಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ಶರ್ಟ್ ತೆಗೆಯುವಂತೆ ಹೇಳಿದ್ದಾಗಿ ಸಂಗೀತಗಾರ್ತಿಯೊಬ್ಬರು ಆರೋಪಿಸಿದ್ದು, ‘ನಿಜವಾಗಿಯೂ ಇದು ಅವಮಾನಕರ’ ಅನುಭವ. ‘ಮಹಿಳೆಯರೇಕೆ ಬಟ್ಟೆ ಬಿಚ್ಚಬೇಕು’ ಎಂದು ತಮ್ಮ ಟ್ವಿಟರ್ ಖಾತೆ ಮೂಲಕ ಪ್ರಶ್ನಿಸಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಪರಿಶೀಲನೆ ವೇಳೆ ನನಗೆ ಸಿಬ್ಬಂದಿ ಶರ್ಟ್ ತೆಗೆಯುವಂತೆ ಸೂಚಿಸಿದರು. ಸಿಬ್ಬಂದಿಯ ಈ ವರ್ತನೆಯಿಂದ ನನಗೆ ಬಹಳ ಮುಜುಗರ ಹಾಗೂ ಅವಮಾನವಾಗಿದೆ. ಕೇವಲ ಕ್ಯಾಮಿಸೋಲ್ (ಮಹಿಳೆಯರು ಧರಿಸುವ ಉಡುಪು) ಧರಿಸಿ ಭದ್ರತಾ ಪರಿಶೀಲನೆ ಕೇಂದ್ರದ ಬಳಿ ನಿಂತು ಮಹಿಳೆಯರಿಗೆ ಕಿರಿಕಿರಿ ಉಂಟುಮಾಡುವ ರೀತಿಯ ವರ್ತನೆಗಳನ್ನು ಎದುರಿಸುವುದು ಅವಮಾನಕರ ಸಂಗತಿಯಾಗಿದೆ. ಭದ್ರತಾ ಪರಿಶೀಲನೆ ವೇಳೆ ಮಹಿಳೆಯರು ಶರ್ಟ್ ನ್ನು ಏಕೆ ತೆಗೆಯಬೇಕು? ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟ್ವೀಟ್ ಖಾತೆಗೆ ಟ್ಯಾಗ್ ಮಾಡಿ ಮಹಿಳೆ ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿನಾಲ್ಕು ಮಹಾನಗರದ ವಿಮಾನ ನಿಲ್ದಾಣಗಳು ಖಾಸಗಿಯವರ ಪಾಲು

I was asked to remove my shirt at Bengaluru airport during security check. It was really humiliating to stand there at the security checkpoint wearing just a camisole and getting the kind of attention you’d never want as a woman. @BLRAirport Why would you need a woman to strip?

— Krishani Gadhvi (@KrishaniGadhvi) January 3, 2023

 

ಭದ್ರತಾ ಏಜೆನ್ಸಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಮಹಿಳೆಯ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದಾಗಿ ಹೇಳಿವೆ ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಅಥವಾ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಏಕೆ ಮಹಿಳೆ ದೂರು ದಾಖಲಿಸಿಲ್ಲ? ಎಂದು ಏಜೆನ್ಸಿಗಳು ಪ್ರಶ್ನಿಸಿವೆ?

ಇನ್ನು ಘಟನೆ ಬಗ್ಗೆ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ವಿಷಾದ ವ್ಯಕ್ತಪಡಿಸಿದ್ದಾರೆ. ಮತ್ತು ವಿಮಾನ ನಿಲ್ದಾಣದ ಭದ್ರತೆಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ನಿರ್ವಹಿಸುತ್ತದೆ. ಕಾರ್ಯಾಚರಣೆ ಮತ್ತು ಭದ್ರತಾ ತಂಡಗಳಿಗೆ ಸಮಸ್ಯೆಯ ಬಗ್ಗೆ ವಿವರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮಹಿಳೆಯ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ್ದು “ಇದು ಸಂಭವಿಸಬಾರದಿತ್ತು” ಎಂದು ಹೇಳಿದೆ.

ಈ ಟ್ವೀಟ್ ನಲ್ಲಿ ಮಹಿಳೆ ತಾನು ಪ್ರಯಾಣಿಸಿದ ವಿಮಾನ ಸಂಸ್ಥೆಯ ಹೆಸರು. ಪ್ರಯಾಣಿಸಬೇಕಿದ್ದ ಸ್ಥಳ, ಪ್ರಯಾಣದ ದಿನಾಂಕ ಸೇರಿದಂತೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಹೀಗಾಗಿ ಅಧಿಕಾರಿಗಳಿಗೆ ಈ ಬಗ್ಗೆ ತನಿಖೆ ನಡೆಸಲು ಸಮಸ್ಯೆಯಾಗಬಹುದು ಎಂದಿದ್ದಾರೆ. ಸದ್ಯ ಮಹಿಳೆಯ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದಾಗಿ ಹೇಳಿವೆ.

Donate Janashakthi Media

Leave a Reply

Your email address will not be published. Required fields are marked *