ವಿಪ್ರೋ ಕಾರ್ಮಿಕರು ಮರು ನೇಮಕ: ವಜಾ ಅವಧಿಯ ಎಲ್ಲಾ ಸೌಲಭ್ಯ ಒದಗಿಸಲು ಕಾರ್ಮಿಕ ನ್ಯಾಯಾಲಯ ತೀರ್ಪು

ಬೆಂಗಳೂರು: ವಿಪ್ರೊ ತಂತ್ರಜ್ಞಾನ ಕಂಪನಿಯು ಬಲವಂತವಾಗಿ ತನ್ನ ಕಾರ್ಮಿಕರನ್ನು ರಾಜೀನಾಮೆ ‌ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಮಿಕ ನ್ಯಾಯಾಲಯವು ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಎಂದಿನಂತೆ ತಮ್ಮ ಸೇವೆಯಲ್ಲಿ ಮುಂದುವರೆಯುವುದು ಮತ್ತು ಕಾರ್ಮಿಕರಿಗೆ ನೀಡಬೇಕಾದ ಸಂಪೂರ್ಣ ವೇತನ ಸಂಸ್ಥೆಯು ನೀಡತಕ್ಕದ್ದು ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಮಾಹಿತಿ‌ ತಂತ್ರಜ್ಞಾನ ಕಾರ್ಮಿಕರ ಒಕ್ಕೂಟ, ಕಾರ್ಮಿಕರ ಪರ ವಕಾಲತ್ತು ವಹಿಸಿ ಗೆಲುವು ಪಡೆದಿದೆ. ಕೆಐಟಿಯುನ ಉಪಾಧ್ಯಕ್ಷರಾದ ಟಿಕೆಎಸ್ ಕುಟ್ಟಿ ಕಾರ್ಮಿಕ ನ್ಯಾಯಾಲಯದಲ್ಲಿ ಕಾರ್ಮಿಕರನ್ನು ಪ್ರತಿನಿಧಿಸಿದ್ದರು.

ಇದನ್ನು ಓದಿ: ನಾಸ್ಕಾಂ ವರದಿ: 2022ಕ್ಕೆ ದೇಶದಲ್ಲಿ 30 ಲಕ್ಷ ಐಟಿ ಉದ್ಯೋಗ ನಷ್ಟ?

ನ್ಯಾಯಾಲಯದಲ್ಲಿ ಕಾರ್ಮಿಕರು ಬಲವಂತ, ದಬ್ಬಾಳಿಕೆಯಿಂದ ಮತ್ತು ಆತನ ಮುಕ್ತ ಅನುಮತಿ ಪಡೆಯದೆ ಕಾರ್ಮಿಕರನ್ನು ರಾಜೀನಾಮೆಯನ್ನು ಕಂಪನಿಯು ಪಡೆದಿದೆ ಎಂದು ಕಾರ್ಮಿಕರು ವಾದಿಸಿದರು.

ಕಾರ್ಮಿಕ ನ್ಯಾಯಾಲಯವು ಕಂಪನಿಯ ಆಡಳಿತ ಮಂಡಳಿಯು, ಒಪ್ಪಲ್ಪಟ್ಟ ಮತ್ತು ಅಂಗೀಕರಿಸಲ್ಪಟ್ಟ ವಿಧಾನಗಳು ಸಮರ್ಥನೀಯವಲ್ಲ ಮತ್ತು ಕಾರ್ಮಿಕರಿಂದ ರಾಜೀನಾಮೆಯನ್ನು ಅಂಗೀಕರಿಸುವುದು ಕಾನೂನುಬಾಹಿರವಾಗಿದೆ ಎಂದು ತಿಳಿಸಿದೆ.

ಇದರ ಪರಿಣಾಮವಾಗಿ, ಸೇವೆಯಲ್ಲಿ ಮುಂದುವರಿಕೆ, ಪೂರ್ಣ ವೇತನ, ವೇತನದ ಬಾಕಿ ಮತ್ತು ಇತರ ಬಾಕಿ ಇತ್ಯಾದಿಗಳೊಂದಿಗೆ ಅರ್ಜಿದಾರನನ್ನು ಮೂಲ ಹುದ್ದೆಗೆ ನೇಮಕ ಮಾಡುವಂತೆ ವಿಪ್ರೋ ಕಂಪನಿಯ ಆಡಳಿತ ಮಂಡಳಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಇದನ್ನು ಓದಿ: ದುಡಿಯುವ ವರ್ಗದ ಚೇತನ ಕಾಮ್ರೇಡ್‌ ಸೂರಿ

ತೀರ್ಪು ಪ್ರಕಟಿಸಿದ 30 ದಿನಗಳ ಅವಧಿಯಲ್ಲಿ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿದ ದಿನಾಂಕದಿಂದ ಮರುನೇಮಕಗೊಂಡ ದಿನಾಂಕದವರೆಗೆ ಅವರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳಿಗೆ  ಅವರು ಅರ್ಹರಾಗಿದ್ದಾರೆ ಎಂದು ಕಾರ್ಮಿಕ ನ್ಯಾಯಾಲಯ ಪ್ರಕರಣವನ್ನು ಪೂರ್ಣಗೊಳಿಸಿದೆ.

ವರದಿ: ಶೃತಿ ಹೊಸಪೇಟೆ

Donate Janashakthi Media

Leave a Reply

Your email address will not be published. Required fields are marked *