ಸುವೇಂದು ಅಧಿಕಾರಿಗೇಕೆ ಬಂಧಿಸಿಲ್ಲ: ದೂರುದಾರ ಪ್ರಶ್ನೆ

ನವದೆಹಲಿ: ನಾರದ ಗುಪ್ತ ಕಾರ್ಯಚರಣೆಯಲ್ಲಿ ಸಿಬಿಐ ಅಧಿಕಾರಿಗಳು ಇಂದು ಆರೋಪವನ್ನು ಹೊತ್ತಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷದ ರಾಜಕೀಯ ನಾಯಕರನ್ನು ಬಂಧಿಸಿದೆ. ಅದಕ್ಕಾಗಿ ನಾನು ಅತ್ಯಂತ ಸಂತುಷ್ಟಗೊಂಡಿದ್ದೇನೆ. ಆದರೆ ಇದೇ ಪ್ರಕರಣದಲ್ಲಿ ಸಾಕ್ಷಾಧಾರಗಳಿದ್ದರೂ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರನ್ನು ಏಕೆ ಬಂಧಿಸಲಾಗಿಲ್ಲ ಎಂದು ಮ್ಯಾಥ್ಯೂ ಸ್ಯಾಮ್ಯುವೆಲ್ ಪ್ರಶ್ನೆ ಮಾಡಿದ್ದಾರೆ.

ಹಿರಿಯ ಪತ್ರಕರ್ತ ಹಾಗೂ ದೂರುದಾರ ಮ್ಯಾಥ್ಯೂ ಸ್ಯಾಮ್ಯುವೆಲ್ ಅವರು  ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಟಿಎಂಸಿ ನಾಯಕರಾದ ಸುಬ್ರತಾ ಮುಖರ್ಜಿ ಮತ್ತು ಫರ್ಹಾದ್ ಹಕೀಂ ಸೇರಿದಂತೆ ನಾಲ್ವರು ಬಂಧಿಸಿದೆ.  ಆದರೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಧಿಸಿಲ್ಲವೇಕೆ ಎಂದು ಕೇಳಿದರು.

ಇದನ್ನು ಓದಿ: ನಾರದ ಲಂಚ ಪ್ರಕರಣದಲ್ಲಿ ಟಿಎಂಸಿ ಸಚಿವ, ಶಾಸಕರ ಬಂಧನ – ಸಿಬಿಐ ಕಚೇರಿಗೆ ದೌಡಾಯಿಸಿದ ಸಿಎಂ ಮಮತಾ

ಹಲವು ವರ್ಷಗಳಿಂದ ಈ ದಿನಕ್ಕಾಗಿ ನಾನು ಕಾಯುತ್ತಿದ್ದೆ. ಈ ಪ್ರಕರಣ ಬೆಳಕಿಗೆ ಬಂದಿದ್ದು 2016ರಲ್ಲಿ ಅಂದು ಕುಟುಕು ಕಾರ್ಯಾಚರಣೆ ಮೂಲಕ ದಾಖಲೆ ಸಮೇತ ಸಾಬೀತುಪಡಿಸಲಾಗಿತ್ತು. ಸಿಬಿಐನವರು ಮೂರು ವರ್ಷಗಳ ಹಿಂದೆಯೇ ದೋಷಾರೋಪಣ ಪಟ್ಟಿ ಸಿದ್ಧಪಡಿಸಿತ್ತಾದರು.

ಆದರೂ ಆಗ ಇವರುಗಳನ್ನು ಬಂಧಿಸಿರಲಿಲ್ಲ. ಎಂದು ತನಿಖಾ ಪತ್ರಕರ್ತ ಹಾಗೂ ನಾರದ ನ್ಯೂಸ್‌ನ ಸ್ಥಾಪಕರೂ ಆಗಿರುವ ಸ್ಯಾಮ್ಯುಯೆಲ್ ಹೇಳಿದ್ದಾರೆ.

ಕೆಲವು ಕೆಲಸಗಳನ್ನು ಮಾಡಿಕೊಡಲು ತೃಣಮೂಲ ಕಾಂಗ್ರೆಸ್‌ ಪಕ್ಷದ ನಾಯಕರು ಹಣವನ್ನು ಸ್ವೀಕರಿಸಿದ್ದ ವಿಡಿಯೊವೊಂದನ್ನು 2016ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮೊದಲು ನಾರದ ನ್ಯೂಸ್ ಬಿಡುಗಡೆ ಮಾಡಿತ್ತು. ಬಳಿಕ ಇದು ನಾರದ ಪ್ರಕರಣ ಎಂದೇ ಖ್ಯಾತಿ ಗಳಿಸಿತ್ತು.

ಈ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಇನ್ನಿತರೆ ಕೆಲವು ಗಣ್ಯರಲ್ಲಿ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮಾಜಿ ನಿಕಟವರ್ತಿಗಳಾದ ಮುಕುಲ ರಾಯ್ ಮತ್ತು ಸುವೇಂದು ಅಧಿಕಾರಿ ಅವರೂ ಸೇರಿದ್ದಾರೆ. ಇವರಿಬ್ಬರೂ ಈಗ ಬಿಜೆಪಿಯಲ್ಲಿದ್ದಾರೆ. ಇವರ ವಿರುದ್ಧ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸ್ಯಾಮ್ಯುಯೆಲ್ ನಿರಾಶೆ ವ್ಯಕ್ತಪಡಿಸಿದ್ದಾರೆ.

‘ನಾನು ಅಧಿಕಾರಿ ಕಚೇರಿಗೆ ತೆರಳಿ ಅವರಿಗೆ ಹಣ ನೀಡಿದ್ದೆ. ಅವರ ಹೆಸರು ಪಟ್ಟಿಯಲ್ಲಿಲ್ಲ, ಏಕೆ? ವಿಧಿವಿಜ್ಞಾನ ಪರೀಕ್ಷೆಯೂ ಅವರು ಹಣ ಪಡೆದಿದ್ದನ್ನು ಸಾಬೀತುಗೊಳಿಸಿತ್ತು. ಸಿಬಿಐ ನನ್ನಿಂದಲೂ ಹೇಳಿಕೆಯನ್ನು ಪಡೆದುಕೊಂಡಿತ್ತು. ನನ್ನಿಂದ ಹಣ ಸ್ವೀಕರಿಸಿದ್ದನ್ನು ಅಧಿಕಾರಿ ಒಪ್ಪಿಕೊಂಡಿದ್ದೂ ನನಗೆ ಗೊತ್ತಿದೆ ’ಎಂದು ಸ್ಯಾಮ್ಯುಯೆಲ್ ತಿಳಿಸಿದ್ದಾರೆ.

ಸುವೇಂದು ಅಧಿಕಾರಿ ಮತ್ತು ಇತರರ ವಿರುದ್ಧ ಕ್ರಮ ಜರುಗಿಸಲು ಅನುಮತಿಗಾಗಿ ಕಾಯುತ್ತಿರುವುದಾಗಿ ಸಿಬಿಐ ಸುದ್ದಿಸಂಸ್ಥೆಗಳಿಗೆ ತಿಳಿಸಿದೆ.

ಕುಟುಕು ಕಾರ್ಯಚಾರಣೆಐಲ್ಲಿ ಕಂಡಿರುವುದು ಹಗರಣದ ಸಣ್ಣ ಭಾಗ ಮಾತ್ರವಾಗಿದೆ ಎಂದು ಹೇಳಿರುವ ಸ್ಯಾಮ್ಯುಯೆಲ್, ತನಿಖೆಯು ನ್ಯಾಯಯುತವಾಗಿ ನಡೆಯಬೇಕು ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *