ವಿದ್ಯತ್ ಬಿಕ್ಕಟ್ಟು ಯಾಕೆ? ಜಾರ್ಖಂಡ್ ಸರಕಾರವನ್ನು ಪ್ರಶ್ನಿಸಿದ ‘ಸಾಕ್ಷಿ’!

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಎಂ. ಎಸ್​. ಧೋನಿ ಪತ್ನಿ ಸಾಕ್ಷಿ ಧೋನಿ ಅವರು ಜಾರ್ಖಂಡ್​ ಸರ್ಕಾರದ ವಿರುದ್ಧ ಟ್ವೀಟ್​ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

ಹಲವು ವರ್ಷಗಳಿಂದ ಜಾರ್ಖಂಡ್​ನಲ್ಲಿ ವಿದ್ಯುತ್​ ಬಿಕ್ಕಟ್ಟು ಯಾಕಿದೆ ಎಂಬುದನ್ನು ನಾನೋರ್ವ ಜಾರ್ಖಂಡ್​ನ ತೆರಿಗೆದಾರಳಾಗಿ ತಿಳಿಯಲು ಬಯಸಿದ್ದೇನೆ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ನಾವು ವಿದ್ಯುತ್​ ಉಳಿತಾಯ ಮಾಡುವಲ್ಲಿ ಪ್ರಜ್ಞಾಪೂರ್ವಕವಾಗಿ ನಮ್ಮ ಪಾಲಿನ ಕೆಲಸವನ್ನು ಮಾಡುತ್ತಿದ್ದೇವೆ ಎಂಬುದು ನಮಗೆ ತಿಳಿದಿದೆ. ಆದರೂ ಜಾರ್ಖಂಡ್​ನಲ್ಲಿ ವಿದ್ಯುತ್​ ಬಿಕ್ಕಟ್ಟು ಯಾಕಿದೆ ಎನ್ನುವ ಮೂಲಕ ಸರ್ಕಾರ ವಿರುದ್ಧ ಸಾಕ್ಷಿ ಧೋನಿ ಅವರು ಅಸಮಾಧಾನವನ್ನು ಹೊರಹಾಕಿದ್ದಾರೆ.

ರಾಜ್ಯದ ಬಹುತೇಕ ಭಾಗಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ಕಂಡು ಬರುತ್ತಿರುವ ಸಂದರ್ಭದಲ್ಲಿ ರಾಜ್ಯದ ಜನತೆ ಪದೇ ಪದೇ ಲೋಡ್ ಶೆಡ್ಡಿಂಗ್‌ನಿಂದ ಬಳಲುತ್ತಿದ್ದಾರೆ. ಬಿಸಿಗಾಳಿಯು ಪಶ್ಚಿಮ ಸಿಂಗ್‌ಭೂಮ್, ಕೊಡೆರ್ಮಾ ಮತ್ತು ಗಿರಿದಿಹ್ ಜಿಲ್ಲೆಗಳನ್ನು ಈಗಾಗಗಲೇ ಆವರಿಸಿದ್ದು, ಏಪ್ರಿಲ್ 28ರ ವೇಳೆಗೆ ರಾಂಚಿ, ಬೊಕಾರೊ, ಪೂರ್ವ ಸಿಂಗ್‌ಭುಮ್, ಗರ್ವಾ, ಪಲಾಮು ಮತ್ತು ಛತ್ರಕ್ಕೆ ಬಿಸಿಗಾಳಿ ಹರಡುವ ಸಾಧ್ಯತೆಯಿದೆ.

ಅಡೆತಡೆಯಿಲ್ಲದ ವಿದ್ಯುತ್ ಸರಬರಾಜಿಗೆ ಕೈಜೋಡಿಸುವಂತೆ ಕೇಂದ್ರ ಮತ್ತು ರಾಜ್ಯ ಮಟ್ಟದ ಎಲ್ಲ ಪಾಲುದಾರರನ್ನು ಒತ್ತಾಯಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಕಲ್ಲಿದ್ದಲು ಪೂರೈಕೆಯಲ್ಲಿನ ಲಾಜಿಸ್ಟಿಕ್ ನಿರ್ಬಂಧಗಳನ್ನು ಎದುರಿಸಲು ರೈಲ್ವೇ ಸಚಿವಾಲಯದ ಯೋಜನೆಯಡಿಯಲ್ಲಿ ಸರಕು ಸಾಗಣೆ ರೇಕ್‌ಗಳನ್ನು ಹೊಂದಲು ಪವರ್ ಜೆನ್‌ಕೋಸ್‌ ರೂಪಿಸಬೇಕಿದೆ ಎಂದು ಜಾರ್ಖಂಡ್ ವಿದ್ಯತ್ ಸಚಿವಾಲಯ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *