-ಏ ಕೆ ಕುಕ್ಕಿಲ
ಕುಂಭಮೇಳವನ್ನು ಸ್ಪೋಟಿಸುತ್ತೇನೆ ಎಂದು ಡಿಸೆಂಬರ್ 30ರಂದು ಬೆದರಿಕೆ ಹಾಕಿದ್ದ ನಾಸಿರ್ ಪಠಾಣ್ ನನ್ನು ಹುಡುಕಿಕೊಂಡು ಹೋದ ಉತ್ತರ ಪ್ರದೇಶದ ಪೊಲೀಸರಿಗೆ ಆಯುಷ್ ಜೈಸ್ವಾಲ್ ಎಂಬ ಯುವಕ ಸಿಕ್ಕಿದ್ದಾನೆ.
ಮುಸ್ಲಿಂ ಹೆಸರಲ್ಲಿ ಬೆದರಿಸಿದ್ರೆ ಮಾರ್ಕೆಟ್ ವ್ಯಾಲ್ಯೂ ಜಾಸ್ತಿ ಅಂತ ಅಂದುಕೊಂಡನೋ ಅಥವಾ ಯಾರದೋ ದಾಳವಾದನೋ ಗೊತ್ತಿಲ್ಲ. ಆದರೆ ಈಗಾಗಲೇ ನಾಸಿರ್ ಪಠಾಣ್ ಸುತ್ತ ಭಯಂಕರ ಸ್ಕ್ರಿಪ್ಟ್ ರಚಿಸಿ ಕಾಯುತ್ತಿರಬಹುದಾದ ಗೋಧಿ ಮೀಡಿಯಾಗಳನ್ನು ಈ ಜೈಸ್ವಾಲ್ ತೀವ್ರ ನಿರಾಶೆಗೆ ದೂಡಿದ್ದಾನೆ ಎಂದೇ ಹೇಳಬೇಕು.
ನಾಸಿರ್ ಪಠಾಣೇ ಸಿಕ್ಕಿರುತಿದ್ದರೆ ಕುಂಭ ಮೇಳವೆಂಬ ಅಪ್ಪಟ ಧಾರ್ಮಿಕ ಕಾರ್ಯಕ್ರಮವನ್ನು ಹಿಂದು ಮುಸ್ಲಿಂ ಗೊಳಿಸಿ, ಮುಸ್ಲಿಮರು ಹೇಗೆ ಕುಂಭಮೇಳವನ್ನು ದ್ವೇಷಿಸುತ್ತಾರೆ ಎಂದು ವ್ಯಾಖ್ಯಾನಿಸಿ, ಈ ಪಠಾಣ್ ಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಸಿರಿಯಾದ ನಂಟನ್ನು ಕಲ್ಪಿಸಿ ಭಯಂಕರ ಉಗ್ರನಾಗಿ ಬಿಂಬಿಸಿ ಆತನನ್ನು ಟಿವಿ ಸ್ಕ್ರೀನ್ ತುಂಬಾ ಈ ಚಾನೆಲ್ ಗಳು ತುಂಬಿಸಿ ಬಿಡುವ ಸಾಧ್ಯತೆ ಹೆಚ್ಚಿತ್ತು. ಆದರೆ ಈಗ ಬಂಧನಕ್ಕೀಡಾದವ ಆಯುಷ್ ಜೈಸ್ವಾಲ್ ಆಗಿರೋದ್ರಿಂದ ಆತ ಫ್ಲ್ಯಾಶ್ ನ್ಯೂಸ್ ನಲ್ಲಿ ಹಾಗೆ ಬಂದು ಹೀಗೆ ಹೋಗಿದ್ದಾನೆ.
ಇದನ್ನೂ ಓದಿ: ಭೀಮಸೇತು ಮುನಿವೃಂದ ಮಠದವರು ಭೂಮಿಯ ವಿಚಾರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅನ್ಯಾಯ : ಆಲಗೇರಿ ಗ್ರಾಮಸ್ಥರು ಪ್ರತಿಭಟನೆ
ನಿಜವಾಗಿ ಮುಸ್ಲಿಮರೆಂದರೆ ಕುಡಿಕೆ ತುಂಬಾ ಹಾಲು ಕೊಡುವ ಹಸುವಿನಂತೆ. ಅವರನ್ನು ಬೈದರೆ ವೋಟು ಸಿಗುತ್ತೆ. ಟಿವಿ ಚಾನೆಲ್ ಗಳಿಗೆ ಟಿಆರ್‌ಪಿ ಸಿಗುತ್ತೆ. ಸೋಶಿಯಲ್ ಮೀಡಿಯಾಕ್ಕಂತೂ ಮುಸ್ಲಿಮರೆಂದರೆ ಭಯಂಕರ ಪ್ರೀತಿ. ಮುಸ್ಲಿಮರು ಇಲ್ಲದಿದ್ದರೆ ಇವರೆಲ್ಲರೂ ನಿರುದ್ಯೋಗಿಗಳಾಗಿ ಬಿಡಬಹುದೋ ಅನ್ಸುತ್ತೆ.
ಅಷ್ಟಕ್ಕೂ ಹದಿಹರೆಯದ ಮುಗ್ಧ ಬಾಲಕನಂತಿರುವ ಈ ಜೈಸ್ವಾಲನ್ನು ಯಾರು ಬಾವಿಗೆ ತಳ್ಳಿದರೋ ಗೊತ್ತಾಗುತ್ತಿಲ್ಲ. ಆತನ ಮಾತು ಆಲಿಸಿದೆ. ಆತನಲ್ಲಿ ಮುಸ್ಲಿಂ ದ್ವೇಷ ಇದ್ದಂತೆ ಕಾಣಿಸಲಿಲ್ಲ. ಯಾರ ಭಾಷಣ ಕೇಳಿ ಹಾಗೆ ಮಾಡಿದನೋ ಯಾರಿಗೆ ಗೊತ್ತು?
ಇದನ್ನೂ ನೋಡಿ: ಐಸಿಡಿಎಸ್ 50| ಅಂಗನವಾಡಿ ಬಲಗೊಳಿಸಲು ಹುಟ್ಟಿದ ಸಂಘಟನೆ ಐಫ್ಹಾ (AIFAWH-35) Janashakthi Media