ಬೆಂಗಳೂರು : ಪ್ರಸಿದ್ಧ ಸಾಮಾಜಿಕ ಜಾಲತಾಣ ವಾಟ್ಸಪ್ ಸರ್ವರ್ ನಲ್ಲಿ ಸಮಸ್ಯೆ ತಲೆದೋರಿದೆ. ಹೀಗಾಗಿ ವಿಶ್ವದಾದ್ಯಂತ ವಾಟ್ಸಪ್ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿದೆ.
ವಿಶ್ವದಾದ್ಯಂತ ಮಧ್ಯಾಹ್ನ ಸುಮಾರು 12.30ರಿಂದ ವಾಟ್ಸಪ್ ಕಾರ್ಯ ನಿರ್ವಹಿಸುತ್ತಿಲ್ಲ. ವಾಟ್ಸಪ್ ನಲ್ಲಿ ಮೆಸೇಜ್ ಗಳು ಕಳುಹಿಸಲು ಸಾಧ್ಯವಾಗದ ಕಾರಣಕ್ಕೆ ತಾವು ಮೊಬೈಲ್ ರಿ ಸ್ಟಾರ್ಟ್ ಮಾಡಿರುವುದಾಗಿ ಹಲವರು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.
So I was blaming my WiFi but actually I got to check on Twitter that the WhatsApp is down. @WhatsApp#whatsappdown pic.twitter.com/43tuT6cyol
— Mohsin Shafique (@Mohsinkhan7__) October 25, 2022
ವಾಟ್ಸ್ಆಯಪ್ನಲ್ಲಿ ಸಮಸ್ಯೆಯಾಗಿದ್ದನ್ನು ನೋಡಿ ನಮಗೊಬ್ಬರಿಗೇ ಇರಬಹುದು ಎಂದು ಹಲವರು ಭಾವಿಸಿದ್ದು, ಬಳಿಕ ಇತರರಿಗೂ ಹಾಗೆ ಆಗುತ್ತಿರುವುದು ಗಮನಕ್ಕೆ ಬಂದಿದೆ.
ಕೆಲವೇ ಹೊತ್ತಿನಲ್ಲಿ ಟ್ವಿಟರ್ನಲ್ಲಿ ವಾಟ್ಸ್‌ಆಯಪ್ ಡೌನ್ ಎಂಬುದು ಟ್ರೆಂಡಿಂಗ್ ಆಗುತ್ತಿದ್ದಂತೆ ವಾಟ್ಸ್ಆಯಪ್ನಲ್ಲೇ ಸಮಸ್ಯೆ ಎನ್ನುವುದು ಖಚಿತಗೊಂಡಿದೆ. ಚಿತ್ರ ವಿಚಿತ್ರ ಮೀಮ್ ಗಳು ಓಡಾಡುತ್ತಿವೆ.
ಈ ಬಗ್ಗೆ ಇದುವರೆಗೂ ವಾಟ್ಸಪ್ ನಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.