ಪಾಶ್ಚಿಮಾತ್ಯರು ರಾಜ್ಯದ ಬಗ್ಗೆ ವಿಕೃತ ಚಿತ್ರಣ ಸೃಷ್ಟಿಸಲು ಯತ್ನಿಸಿದ್ದಾರೆ: ಗೋವಾ ಸಿಎಂ

ಪಣಜಿ: ಅನೇಕ ಪಾಶ್ಚಿಮಾತ್ಯರು ಗೋವಾ ಬಗ್ಗೆ ವಿಕೃತ ಚಿತ್ರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೋಮವಾರ ಹೇಳಿದ್ದಾರೆ. ‘ಗೀತಾಮೃತಂ’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದಿವಂಗತ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಭಗವದ್ಗೀತೆಯನ್ನು ಪ್ರತಿನಿತ್ಯ ಓದಿ ಅದರ ಮಹತ್ವವನ್ನು ದೇಶ ಮತ್ತು ಜಗತ್ತಿಗೆ ತಿಳಿಸುತ್ತಿದ್ದರು ಎಂದು ಹೇಳಿದ್ದಾರೆ.

“ಇದು ನಿರ್ದಿಷ್ಟ ಧರ್ಮ ಅಥವಾ ಜಾತಿಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಮಾರ್ಗದರ್ಶನ ನೀಡುತ್ತದೆ. ಅನೇಕ ಪಾಶ್ಚಾತ್ಯರು ಗೋವಾದ ವಿಕೃತ ಚಿತ್ರಣವನ್ನು ಸೃಷ್ಟಿಸಲು ಪ್ರಯತ್ನಿಸಿದರು. ಆದರೆ ನಾವು, ಜನರು ಮತ್ತು ಸರ್ಕಾರವು ರಾಜ್ಯದ ಸುಸಂಸ್ಕೃತ ಮುಖವನ್ನು ತೋರಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಸಾವಂತ್ ಯಾರನ್ನೂ ಹೆಸರಿಸದೆ ಹೇಳಿದ್ದಾರೆ. ತಮ್ಮ ಸರ್ಕಾರವು ಸಂಸ್ಕೃತಿಗೆ ಒತ್ತು ನೀಡಿ ಜಗತ್ತಿನ ಮುಂದೆ ಮಂಡಿಸುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ರೂಪಾಂತರಿ : 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ ; ಸಚಿವ ದಿನೇಶ್ ಗುಂಡೂರಾವ್

“ಗೀತಾ ವಾಚನಕ್ಕಾಗಿ ವಿದ್ಯಾರ್ಥಿಗಳು ಮತ್ತು ಯುವಕರನ್ನು ನಾನು ಅಭಿನಂದಿಸುತ್ತೇನೆ. ಗೋವಾದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಎಲ್ಲಾ ಸಂಘಟಕರನ್ನು ನಾನು ಅಭಿನಂದಿಸುತ್ತೇನೆ. ಗೀತಾಮೃತದ ಉಪಕ್ರಮಕ್ಕೆ ಕೈಜೋಡಿಸಿರುವ ಲೋಕ ವಿಶ್ವಾಸ ಪ್ರತಿಷ್ಠಾನ ಶಾಲೆಯ ದಿವ್ಯಾಂಗ ವಿದ್ಯಾರ್ಥಿಗಳಿಗೆ ಮತ್ತು ರಾಜ್ಯದ ಎಲ್ಲಾ ಶಾಲೆಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

“ಭಗವದ್ಗೀತೆ ಪ್ರತಿಯೊಬ್ಬರಿಗೂ ದಾರ್ಶನಿಕ ಗ್ರಂಥವಾಗಿದೆ. ಈ ಉಪಕ್ರಮಗಳೊಂದಿಗೆ ಇದು ಯುವ ಪೀಳಿಗೆಗೆ ತಲುಪುತ್ತಿದೆ ಎಂಬುವುದು ನನಗೆ ಸಂತೋಷವಾಗಿದೆ, ಉಜ್ವಲ ಭವಿಷ್ಯಕ್ಕಾಗಿ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಭಗವದ್ಗೀತೆ ಕೇವಲ ‘ಧರ್ಮ ಗ್ರಂಥ’ ಅಲ್ಲ, ಅದೊಂದು ‘ರಾಷ್ಟ್ರೀಯ ಗ್ರಂಥ’. ಇದು ಇಡೀ ಜಗತ್ತಿಗೆ ಮಾರ್ಗದರ್ಶನ ನೀಡುತ್ತದೆ. ಇದು ಗರಿಷ್ಠ ಭಾಷೆಗಳಲ್ಲಿ ಅನುವಾದಗೊಂಡಿದ್ದು, ಅದರ ಬಗ್ಗೆ ನಾವು ಹೆಮ್ಮೆಪಡಬೇಕು” ಎಂದು ಅವರು ಹೇಳಿದ್ದಾರೆ.

ರಾಜ್ಯದ ಸಾಂಸ್ಕೃತಿಕ ಪ್ರವಾಸೋದ್ಯಮ, ಯೋಗ ಮತ್ತು ಆಯುರ್ವೇದ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿದೆ ಎಂದು ಸಾವಂತ್ ಹೇಳಿದ್ದು, ರಾಜ್ಯವನ್ನು ಈಗ ‘ದಕ್ಷಿಣ ಕಾಶಿ’ ಎಂದು ಕರೆಯಲಾಗುತ್ತದೆ ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ಪಿಚ್ಚರ್‌ ಪಯಣ – 144ಸಿನೆಮಾ : ಈ ಬಂಧನನಿರ್ದೇಶನ : ವಿಜಯಲಕ್ಷ್ಮಿ ಸಿಂಗ್‌ಕಥೆ ಹೇಳುವವರು: ಭಾವನಾ ಮರಾಠೆ

Donate Janashakthi Media

Leave a Reply

Your email address will not be published. Required fields are marked *