ಪಂಚರಾಜ್ಯ ಚುನಾವಣೆ : ಬಂಗಾಳ, ಅಸ್ಸಾಂನಲ್ಲಿ ಎರಡನೇ ಹಂತದ ಮತದಾನ

ನವದೆಹಲಿ : ಐದು ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳ, ಅಸ್ಸಾಂ ವಿಧಾನಸಭಾ ಚುನಾವಣೆ 2021 ಎರಡನೇ ಹಂತದ ಮತದಾನ ಗುರುವಾರ (ಏಪ್ರಿಲ್ 1) ಬೆಳಿಗ್ಗೆ 7 ಗಂಟೆಗೆ ಆರಂಭವಾಗಿದೆ. ಬಂಗಾಳ, ಅಸ್ಸಾಂನಾದ್ಯಂತ 69 ಸ್ಥಾನಗಳಲ್ಲಿ ಮತದಾನ ನಡೆಯುತ್ತಿದೆ.

ಚುನಾವಣಾ ಆಯೋಗದ ಪ್ರಕಾರ,  ಮತ್ತು ಪಶ್ಚಿಮ ಬಂಗಾಳದಲ್ಲಿ ಕ್ರಮವಾಗಿ ಬೆಳಿಗ್ಗೆ 11 ಗಂಟೆಯವರೆಗೆ ಶೇಕಡಾ 21.71 ಮತ್ತು ಶೇಕಡಾ 29.27 ರಷ್ಟು ಮತದಾನವಾಗಿದೆ ಎಂದು ತಿಳಿಸಿದೆ.

ಅಸ್ಸಾಂನ 39 ಕ್ಷೇತ್ರಗಳು ಹಾಗೂ ಪಶ್ಚಿಮ ಬಂಗಾಳದ 30 ಕ್ಷೇತ್ರಗಳಿಗೆ ಇಂದುಮತದಾನ ಆರಂಭವಾಗಿದ್ದು, ಪಶ್ಚಿಮ ಬಂಗಾಳದಲ್ಲಿ 171 ಅಭ್ಯರ್ಥಿಗಳು ಹಾಗೂ ಅಸ್ಸಾಂನ 345 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಬಂಗಾಳದಲ್ಲಿ 2ನೇ ಹಂತದಲ್ಲಿ  ಮತದಾನ ನಡೆಯುತ್ತಿದ್ದು, ಇಂದು ಮತದಾನ ನಡೆಯುತ್ತಿರುವ ನಂದಿಗ್ರಾಮ ವಿಧಾನ ಸಭಾ ಕ್ಷೇತ್ರ ಎಲ್ಲರ ಗಮನ ಸೆಳೆದಿದೆ. ಟಿಎಂಸಿಯಿಂದ ಮಮತಾ ಬ್ಯಾನರ್ಜಿ  ಬಿಜೆಪಿ ಯಿಂದ ಸುಬೋಂದ್ರ ಅಧಿಕಾರಿ ಸಿಪಿಐಎಂ ನಿಂದ ಯುವ ಅಭ್ಯರ್ಥಿ ಮೀನಾಕ್ಷಿ ಮುಖರ್ಜಿಯವರ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿದೆ.

ಇದನ್ನೂ ಓದಿ : 14 ವರ್ಷಗಳ ನಂತರ ನಂದಿಗ್ರಾಮ ‘ಗೋಲೀಬಾರ್’ನ ಪಿತೂರಿ ಬಯಲು?

ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ತೀವ್ರ ಪ್ರಚಾರ ನಡೆದಿತ್ತು, ಬಂಗಾಳ ಚುನಾವಣೆಗಳಲ್ಲಿ ಕೇಂದ್ರ ವಿಷಯವು ಬೆಂಗಾಲಿ ವರ್ಸ್ಸ್‌ ಹೊರಗಿನವರು ಎಂದು ಪ್ರಚಾರ ನಡೆಸಲಾಗಿತ್ತು. ಅಸ್ಸಾಂನಲ್ಲಿ ಚುನಾವಣೆಗಳು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯ ವಿಷಯವು ಹೆಚ್ಚೆ ಪ್ರಚಾರದಲ್ಲಿತ್ತು.

ಅಸ್ಸಾಂನಲ್ಲಿ ಅಧಿಕಾರಕ್ಕೆ ಮರಳಲು ಪ್ರಯತ್ನ ನಡೆಸಿರುವ ಬಿಜೆಪಿ ಗೆ ಕಾಂಗ್ರೆಸ್‌ ಸವಾಲೊಡ್ಡಲಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ವಿರೋಧಿ ಅಲೆ ಹೆಚ್ಚಾಗಿದ್ದು ಎಡಪಕ್ಷದ ಮೈತ್ರಿಕೂಟ ಅಥವಾ ಬಿಜೆಪಿ ಲಾಭವಾಗಲಿದೆಯೇ ಎಂಬ ಲೆಕ್ಕಾಚಾರಗಳು ಆರಂಭವಾಗಿವೆ.

Donate Janashakthi Media

Leave a Reply

Your email address will not be published. Required fields are marked *