ಜೈ ಭೀಮ್ ಹಿರೋ ಸೂರ್ಯಗೆ ಲೀಗಲ್ ನೋಟಿಸ್: ವಿಸ್ಟ್ಯಾಂಡ್ ವಿತ್ ಸೂರ್ಯ ಎಂದ ಜಾಲತಾಣಿಗರು

ಚೆನ್ನೈ: ಜೈ ಭೀಮ್ ಸಿನಿಮಾದಲ್ಲಿ ವೆಣ್ಣಿಯಾರ್ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ನಟ ಸೂರ್ಯ, ಪತ್ನಿ ಜ್ಯೋತಿಕಾ ಮತ್ತು ಚಿತ್ರತಂಡ ಹಾಗೂ ಅಮೆಝೋನ್ ಪ್ರೈಮ್ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ.

ವೆಣ್ಣಿಯಾರ್ ಸಂಘದ ಪರ ವಕೀಲರು ಸೂರ್ಯ ಮತ್ತು ಚಿತ್ರತಂಡದ ವಿರುದ್ಧ 5 ಕೋಟಿ ರೂ. ದಾವೆ ಹೂಡಿದ್ದಾರೆ. ಅಲ್ಲದೆ ತಮ್ಮ ಸಮುದಾಯವನ್ನು ಅವಮಾನಿಸಿದ್ದಕ್ಕೆ ಬೇಷರತ್ ಕ್ಷಮೆ ಯಾಚಿಸಬೇಕೆಂದು ಕೋರಿದ್ದಾರೆ.  ನೋಟಿಸ್ ಜಾರಿಯಾದ ಬೆನ್ನಿಗೇ ಸಾಮಾಜಿಕ ಜಾಲತಾಣಿಗರು ನಟ ಸೂರ್ಯ ಅವರಿಗೆ ಬೆಂಬಲವಾಗಿ ನಿಂತಿದ್ದು  ವಿಸ್ಟ್ಯಾಂಡ್‍ವಿತ್ ಸೂರ್ಯ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

ಮಾಜಿ ಕೇಂದ್ರ ಸಚಿವ ಹಾಗೂ ಪಿಎಂಕೆ ನಾಯಕ ಡಾ. ಅಂಬುಮನಿ ರಾಮದೋಸ್ ಅವರು ಸೂರ್ಯ ವಿರುದ್ಧ ಕಿಡಿ ಕಾರಿ ಅವರು ವಣ್ಣಿಯಾರ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಆರೋಪಿಸಿದ ಬೆನ್ನಲ್ಲೇ ಕಾನೂನು ನೋಟಿಸ್ ಜಾರಿಯಾಗಿದೆ. ವಣ್ಣಿಯಾರ್ ತಮಿಳುನಾಡಿನಲ್ಲಿ ಅತ್ಯಂತ ಹಿಂದುಳಿದ ಜಾತಿಯಾಗಿದ್ದು ಉತ್ತರ ತಮಿಳುನಾಡಿನಲ್ಲಿ ರಾಜಕೀಯ ಪ್ರಾಬಲ್ಯ ಹೊಂದಿರುವ ಸಮುದಾಯವಾಗಿದೆ. ಸೂರ್ಯ ಅವರ ಹೊರತಾಗಿ ಅವರ ಪತ್ನಿ ಹಾಗೂ ನಟಿ ಜ್ಯೋತಿಕ, ಅವರ ಒಡೆತನದ ನಿರ್ಮಾಣ ಸಂಸ್ಥೆ 2ಡಿ ಎಂಟರ್‍ಟೈನ್ಮೆಂಟ್ ಲಿ. ಹಾಗೂ ಅಮೆಜಾನ್.ಇನ್ ನ ಪ್ರತಿನಿಧಿಯೊಬ್ಬರ ಹೆಸರನ್ನೂ ಕಾನೂನು ನೋಟಿಸ್‍ನಲ್ಲಿ ಉಲ್ಲೇಖಿಸಲಾಗಿದೆ.

ಜೈ ಭೀಮ್ ಒಂದು ನಿಜ ಜೀವನಾಧರಿತ ಚಿತ್ರವಾಗಿದೆ. ಚಿತ್ರದಲ್ಲಿ ಸೂರ್ಯ ಅವರ ವಕೀಲ ಚಂದ್ರ ಪಾತ್ರ ನಿರ್ವಹಿಸಿದ್ದಾರೆ. ಸುಳ್ಳು ಆರೋಪಗಳ ಮೇಲೆ ಬಂಧಿತ ತನ್ನ ಪತಿ ರಾಜಕಣ್ಣು ಅವರನ್ನು ರಕ್ಷಿಸಲು ಸೆಂಗ್ಗೆನಿ ಎಂಬ ಆದಿವಾಸಿ ಮಹಿಳೆ ವಕೀಲ ಚಂದ್ರು ಸಹಾಯ ಕೋರಿದ ನಂತರ ಸತ್ಯವನ್ನು ಅನಾವರಣಗೊಳಿಸುವ ಚಂದ್ರು ಪಯಣವನ್ನು ಈ ಚಿತ್ರ ಬಿಂಬಿಸುತ್ತದೆ.

ಟ್ರೆಂಡಿಂಗ್ ಆದ
#WeStandWithSuriya : ನಟ ಸೂರ್ಯ ಅವರಿಗೆ ನೋಟೀಸ್ ಬರುತ್ತಿದ್ದಂತೆ ಸಿನಿಮಾಸಕ್ತರು, ಜನಪರ ಚಳುವಳಿಗಳು ಜಾಲತಾಣದಲ್ಲಿ #WeStandWithSuriya ಎಂದು ಟ್ವೀಟ್ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಆ ಟ್ವಿಟ್ ಟ್ರೆಂಡಿಂಗ್ ಆಗಿದೆ.

ನಟ ಸೂರ್ಯ ಅವರನ್ನು ಬೆಂಬಲಿಸಿ ಸಿಪಿಐ(ಎಂ) ಕೂಡ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‍ನಲ್ಲಿ ಟ್ವೀಟ್ ಒಂದನ್ನು ಪೋಸ್ಟ್ ಮಾಡಿದೆ.

“ಲಾಕಪ್ ಸಾವು ಪ್ರಕರಣದ ಸಂತ್ರಸ್ತ ರಾಜ ಕಣ್ಣು ಅವರ ಪತ್ನಿ ಪಾರ್ವತಿಗೆ ಸಹಾಯ ಮಾಡಲು ಸೂರಿಯ ಮುಂದೆ ಬಂದಿದ್ದಾರೆ ಹಾಗೂ ಆಕೆಯ ಹೆಸರಿನಲ್ಲಿ ರೂ 10 ಲಕ್ಷ ಠೇವಣಿಯಿರಿಸಿದ್ದಾರೆ,” ಚಿತ್ರದಲ್ಲಷ್ಟೆ ಅಲಗಲದೆ ನಿಜ ಜೀವನದಲ್ಲಿ ತುಳಿತಕ್ಕೊಳಗಾದವರ ಪರ ಸೂರ್ಯ ಹಾಗೂ ಆತನ ತಂಡ ನಿಂತಿದೆ ಎಂದು ಪಕ್ಷ ಟ್ವೀಟ್ ಮಾಡಿದೆ.

ರಾಜ ಕಣ್ಣು ಅವರ ನಿಜ ಜೀವನ ಆಧರಿಸಿ ಜೈ ಭೀಮ್ ಚಿತ್ರ ನಿರ್ಮಾಣಗೊಂಡಿದೆ. “ಅವರ ಶ್ರಮಕ್ಕೆ ಹಾಗೂ ಈ ಕಷ್ಟಕರ ಸಮಯದಲ್ಲಿ ಸಮಾಜಕ್ಕೆ ಅವರ ಕೊಡುಗೆಗಾಗಿ#ವಿಸ್ಟ್ಯಾಂಡ್‍ವಿತ್ ಸೂರ್ಯ” ಎಂದು ಮನೋಬಲ ವಿಜಯಬಾಲನ್ ಎಂಬವರು ಟ್ವೀಟ್ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *