ನವದೆಹಲಿ: ಇಂದು ದೆಹಲಿ ವಿಧಾನಸಭಾ ಚುನಾವಣೆ ಮತ ಏಣಿಕೆ ನಡೆದಿದ್ದೂ, ಬಿಜೆಪಿಯಿಂದ ಹೀನಾಯ ಸೋಲು ಅನುಭವಿಸಿದ್ದೂ ಅಲ್ಲದೇ ತಮ್ಮದೇ ಆದ ಕ್ಷೇತ್ರವನ್ನು ಸಹ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕಳೆದುಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಜನರ ತೀರ್ಪನ್ನು ಸ್ವೀಕರಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಪುತ್ತೂರು| ಮನೆ ತೆರವು ಪ್ರಕರಣ: ಬಿಜೆಪಿ ವಿರುದ್ದ ಕಾಂಗ್ರೇಸ್ ಪ್ರತಿಭಟನೆ
‘ದೆಹಲಿ ಚುನಾವಣೆಯ ಫಲಿತಾಂಶಗಳನ್ನು ಇಂದು ಘೋಷಿಸಲಾಗಿದೆ ಮತ್ತು ನಾವು ಜನರ ತೀರ್ಪನ್ನು ಸ್ವೀಕರಿಸುತ್ತೇವೆ. ಜನರ ನಿರ್ಧಾರವು ಅತ್ಯುನ್ನತವಾಗಿದೆ. ಬಿಜೆಪಿಯ ಗೆಲುವಿಗೆ ನಾನು ಅಭಿನಂದಿಸುತ್ತೇನೆ. ಅವರಿಗೆ ಬಹುಮತ ನೀಡಿದ ಜನರ ಭರವಸೆಗಳು ಮತ್ತು ನಿರೀಕ್ಷೆಗಳಿಗೆ ತಕ್ಕಂತೆ ಇರುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದರು.
ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 47, ಎಎಪಿ 23, ಕಾಂಗ್ರೆಸ್ 0 ಸ್ಥಾನಗಳು ಗೆದಿದ್ದು, ಅಧಿಕೃತ ಘೋಷಣೆಯೊಂದೆ ಬಾಕಿ ಇದೆ.
ಇದನ್ನೂ ನೋಡಿ: ಕೇಂದ್ರ ಬಜೆಟ್ 2025 : ಬಡವರಿಗೆ ಏನೂ ಇಲ್ಲ! ಶ್ರೀಮಂತರಿಗಾಗಿ ಮಂಡಿಸಿದ ಬಜೆಟ್ Janashakthi Media