ಹೊಸಪೇಟೆ : ನಗರದ ರಾಣಿಪೇಟೆಯಲ್ಲಿ ಕಲುಷಿತ ನೀರು ಸೇವಿಸಿ ಮಹಿಳೆಯೊಬ್ಬರು ಮಂಗಳವಾರ ಸಂಜೆ ಮೃತಪಟ್ಟಿದ್ದು, 54 ಜನ ಅಸ್ವಸ್ಥರಾಗಿದ್ದಾರೆ.
ರಾಣಿಪೇಟೆಯ 12ನೇ ಕ್ರಾಸ್ ನಿವಾಸಿ ಲಕ್ಷ್ಮೀದೇವಿ (50) ಮೃತ ಮಹಿಳೆ. ಅವರ ಮನೆಯ 11 ತಿಂಗಳ ಮಗು, ಇನ್ನೊಬ್ಬರು ಕೂಡ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ‘ಲಕ್ಷ್ಮಿದೇವಿ ಅವರು ಮಂಗಳವಾರ ಎಂಟರಿಂದ ಹತ್ತು ಸಲ ವಾಂತಿ ಭೇದಿ ಮಾಡಿಕೊಂಡಿದ್ದಾರೆ. ಆರೋಗ್ಯ ಕಾರ್ಯಕರ್ತೆಯರು ಆಸ್ಪತ್ರೆಗೆ ದಾಖಲಾ ಗುವಂತೆ ತಿಳಿಸಿದ್ದರು. ಆದರೆ, ಅವರು ಆರ್‌ಎಂಪಿ ವೈದ್ಯರ ಬಳಿ ಚಿಕಿತ್ಸೆ ಪಡೆದು, ಮನೆಯಲ್ಲೇ ಗ್ಲುಕೋಸ್ ಹಾಕಿಸಿಕೊಂಡಿದ್ದಾರೆ. ಸಂಜೆ ಮೃತಪಟ್ಟಿದ್ದಾರೆ’ ಎಂದು ಪ್ರಭಾರ ಡಿಎಚ್‌ಒ ಡಾ.ಶಂಕರ ನಾಯಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಮುದೇನೂರು: ಕಲುಷಿತ ನೀರು ಕುಡಿದು 94 ಮಂದಿ ಅಸ್ತವ್ಯಸ್ಥ; ವ್ಯಕ್ತಿ ಸಾವು-ಪರಿಹಾರ ಘೋಷಣೆ
50 ಕ್ಕೂ ಹೆಚ್ಚು ಜನರು ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ. ಬಡಾವಣೆಯಲ್ಲಿ ಆರೋಗ್ಯ ಇಲಾಖೆಯವರು ಬೀಡು ಬಿಟ್ಟಿದ್ದು, ಜನರಿಗೆ ವಾಂತಿ, ಭೇದಿ ಪ್ರಕರಣಗಳು ನಿಲ್ಲುವ ಲಕ್ಷಣಗಳು ಕಂಡು ಬರುತ್ತಿಲ್ಲ. ಹೊಸಪೇಟೆ ನಗರದ ರಾಣಿಪೇಟೆ, ಚಲುವಾದಿಕೇರಿ ಸೇರಿದಂತೆ ನಾನಾ ಕಡೆ ಕುಡಿವ ನೀರಿನ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ. ಇದರಿಂದ ನೀರು ಕಲುಷಿತಗೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 40 ಕ್ಕೂ ಹೆಚ್ಚು ಜನರು ಕಲುಷಿತ ನೀರು ಕುಡಿದು ಅಸ್ವಸ್ಥರಾಗಿದ್ದಾರೆ ಎಂದು ಹೇಳಲಾಗಿದೆ. ಕಲುಷಿತ ನೀರು ಸೇವಿಸಿ ಅಸ್ವಸ್ಥರಾದವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮನೆಗಳಿಗೆ ತೆರಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ