ರಾಯಚೂರು: ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ತಮ್ಮ ಹಿಂದೆ ಗೂಢಚರ್ಯೆ ನಡೆದಿದೆ, ತಿಂಗಳಲ್ಲಿ 70 ಸಾರಿ ನನ್ನ ಮೊಬೈಲ್ ಲೊಕೇಷನ್ ತೆಗೆಸುತ್ತಾರೆ, ಯಾಕೆ ತೆಗೆಸುತ್ತಿದ್ದಾರೋ ಗೊತ್ತಿಲ್ಲ ಅಂತ ರಾಯಚೂರು ಎಸ್.ಪಿ. ಪುಟ್ಟಮಾದಯ್ಯ ಬಳಿ ತಮ್ಮ ಅಳಲು ತೋಡಿಕೊಂಡಿದ್ದು, ಮೌಖಿಕ ದೂರು ನೀಡಿದ್ದಾರೆ.
ಪೊಲೀಸ್ ಸ್ಟೇಷನ್‌ಗಳಿಗೆ ಹೋಗಿ ನನ್ನ ಲೊಕೇಷನ್ ತೆಗಿಸ್ತಾರೆ. ಇಂತಹ ಜನ ರಾಯಚೂರಿನಲ್ಲಿದ್ದಾರೆ, ಯಾಕೆ ತೆಗೆಸುತ್ತಾರೋ ಗೊತ್ತಿಲ್ಲ ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಹೇಳಿದ್ದಾರೆ. ಎಸ್.ಪಿ.ಕಚೇರಿಯಲ್ಲಿ ಪ್ರಕರಣವೊಂದರ ಕುರಿತು ಮಾತನಾಡುತ್ತಿದ್ದ ವೇಳೆ ತಮ್ಮ ಅಳಲು ತೋಡಿಕೊಂಡಿರುವ ಶಾಸಕ, ಪದೇ ಪದೇ ನನ್ನ ಮೊಬೈಲ್ ಲೊಕೇಷನ್ ಚೆಕ್ ಮಾಡುತ್ತಿದ್ದಾರೆ ಅಂತ ಪರೋಕ್ಷವಾಗಿ ಆಡಳಿತ ಪಕ್ಷದವರ ವಿರುದ್ದ ಆರೋಪಿಸಿದ್ದಾರೆ.
ಇದನ್ನೂ ಓದಿ: ಟರ್ಕಿ |42ಗಂಟೆಗಳಿಂದ ಲಂಡನ್ to ಮುಂಬೈ ವಿಮಾನಯ ಸ್ಥಗಿತ, ಪ್ರಯಾಣಿಕರ ಪರದಾಟ!
ಆದ್ರೆ ಯಾರು ಶಾಸಕರ ಲೊಕೇಷನ್ ತೆಗೆಸುತ್ತಿದ್ದಾರೆ, ಯಾಕೆ ತೆಗೆಸುತ್ತಿದ್ದಾರೆ ಅನ್ನೋದನ್ನ ಸ್ಪಷ್ಟಪಡಿಸಿಲ್ಲ. ಹೀಗಾಗಿ ರಾಯಚೂರು ನಗರ ಶಾಸಕರ ಬೆನ್ನ ಹಿಂದೆ ಬಿದ್ದಿರೋರ್ಯಾರು.. ಕಾರಣ ಏನು..? ಶಾಸಕ ಡಾ.ಶಿವರಾಜ್ ಪಾಟೀಲ್ ಚಲನವಲನಗಳ ಗೂಢಚರ್ಯ ನಡೆದಿದೆಯಾ..? ಅನ್ನೋ ಅನುಮಾನಗಳು ಹುಟ್ಟಿಕೊಂಡಿವೆ.
ಇದನ್ನೂ ಓದಿ;ಮಂಗಳೂರಿನ ಕುಖ್ಯಾತ ದರೋಡೆಕೋರರ ಮೇಲೆ ಪೊಲೀಸ್ ಫೈರಿಂಗ್
ಸರ್ಕಾರ ಯಾರದ್ದು ಇರುತ್ತೋ ಸಹಜವಾಗಿ ಪೊಲೀಸರು ಅವರ ಮಾತು ಕೇಳುವ ಪರಸ್ಥಿತಿ ನಿರ್ಮಾಣವಾಗಿದೆ ಅಂತ ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದ್ದಾರೆ.