ಬೆಂಗಳೂರು: ಅದಾನಿ ಅಂಬಾನಿಗೆ ಸಾಲ ಮನ್ನಾ ಮಾಡುವ ಸರ್ಕಾರ ಮಹಿಳೆ, ಕಾರ್ಮಿಕರಿಗೆ ಏನು ಕೊಟ್ಟಿದೆ ಎಂದು ಸಿಐಟಿಯು ಅಧ್ಯಕ್ಷರಾದ ಎಸ್. ವರಲಕ್ಷ್ಮಿ ಸರ್ಕಾರವನ್ನು ಪ್ರಶ್ನಿಸಿದರು.ಸಾಲ
ಮೂರನೇ ದಿನದ ಮಹಾಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ದೇಶದ ಭವಿಷ್ಯತ್ತನ್ನು ಬದಲಾವಣೆ ಮಾಡಲು ರಾಜ್ಯದ ಎಲ್ಲಾ ಮೂಲೆ ಮೂಲೆಯಿಂದ ಜನರು ಬಂದಿದ್ದಾರೆ. ಇದೊಂದು ಐತಿಹಾಸಿಕ ಹೋರಾಟವಾಗಿದೆ. ಹಸಿರು, ಕೆಂಪು ಮತ್ತು ನೀಲಿ ಬಾವುಟ ಇಲ್ಲಿ ಒಂದಾಗಿದೆ. 5 ಟ್ರಿಲಿಯನ್ ಆರ್ಥಿಕತೆ ಮಾಡುತ್ತೇವೆ ಎಂದು ಹೇಳುತ್ತಾರೆ. ಭಾರತದ ಪ್ರಧಾನಿಯನ್ನು ಎಲ್ಲಾ ದೇಶವೂ ಗುರುತಿಸುತ್ತಿದೆ ಎನ್ನುತ್ತಾರೆ. ಆದರೆ ಈ ದೇಶದಲ್ಲಿ ಮಕ್ಕಳು ಅಪೌಷ್ಠಿಕತೆಯಿಂದ ಸಾಯುತ್ತಿದ್ದಾರೆ. ಹೆರಿಗೆ ವೇಳೆ ಹೆಣ್ಣು ಮಕ್ಕಳು ಸಾಯುತ್ತಿದ್ದಾರೆ. ನಮ್ಮ ದೇಶವೂ ಅಪೌಷ್ಠಿಕತೆಯಲ್ಲಿ 111ನೇ ಸ್ಥಾನಕ್ಕೆ ಇಳಿಯುತ್ತಿದೆ ಎನ್ನುವುದಕ್ಕೆ ನಮ್ಮ ದೇಶದ ಪ್ರಧಾನಿಗೆ ನಾಚಿಕೆಯಾಗಬೇಕು ಎಂದರು.
ಇದನ್ನೂ ಓದಿ:ಮಹಾಧರಣಿ| ದೇಶದ ಭೂಮಿ ದಲಿತ ಕಾರ್ಮಿಕರದ್ದಾಗಿದೆ – ಯು.ಬಸವರಾಜ್
ಅದಾನಿ ಅಂಬಾನಿಗೆ ಸಾಲ ಮನ್ನಾ ಮಾಡುವ ಸರ್ಕಾರ ಮಹಿಳೆ, ಕಾರ್ಮಿಕರಿಗೆ ಏನು ಕೊಟ್ಟಿದೆ 33% ಮೀಸಲಾತಿ ಮಹಿಳೆಗೆ ನೀಡುತ್ತೇವೆ ಎನ್ನುತಾರೆ. ಆದರೆ ಇದು ಮುಂದಿನ ಚುನಾವಣೆಗೊ ಸಿಗುವುದಿಲ್ಲ. ನಿಮಗೆ ಮಹಿಳೆಯರ ಮೇಲೆ ಕಾಳಜಿ ಇದ್ದರೆ 2014ರಂದು ಇದನ್ನು ತಂದು 2024ರಲ್ಲಿ ಜಾರಿಗೆ ತರಬೇಕಿತ್ತು. ಆದರೆ ಮೋದಿಗೆ ಇದು ಯಾವುದು ಮುಖ್ಯವಲ್ಲ ಎಂದು ಟೀಕಿಸಿದರು.
ಇಂದು ಒಬ್ಬ ಭಿಕ್ಷುಕ ಡಬ್ಬಿ ಹಿಡಿದುಕೊಂಡರೆ ಸಿಗುವ ಹಣವು, ಬೆವರು ಸುರಿಸಿ ದುಡಿಯುವ ಕಾರ್ಮಿಕರಿಗೆ ಸರ್ಕಾರ ವೇತನ ನೀಡುತ್ತಿಲ್ಲ. ಕನಿಷ್ಠ ವೇತನ ಎನ್ನುವಂತದ್ದು ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ಸಾಧನವಾಗಿದೆ. ಆದರೆ ಅದನ್ನು ಸರ್ಕಾರ ನೀಡಲು ಕೇಳುತ್ತಿಲ್ಲ. ಕಾರ್ಮಿಕರಿಗೆ ಕೂಲಿ ಕೊಟ್ಟರೆ ಮಾಲಿಕರು ಬಡವರಾಗುತ್ತಾರೆ ಎಂದು ಹೇಳುತ್ತಾರೆ. ಆದರೆ ಕೊರೊನಾ ವೇಳೆ ಬಡವರಾದವರು ಯಾರು? ಅಂಬಾನಿ ಅದಾನಿ ಶ್ರೀಮಂತರಾಗವುದಕ್ಕೆ ಕಾರ್ಮಿಕರು ನಡುಬಗ್ಗಿಸಿ ದುಡಿಯಬೇಕಾಗಿದೆ ಎಂದರು.
ಆಹಾರ ಆರೋಗ್ಯ ಶಿಕ್ಷಣ ಇಲ್ಲದ ದೇಶವನ್ನು ಕಲ್ಪನೆ ಮಾಡಲು ಸಾಧ್ಯವೆ? ಆದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದು ರೂ. ಕೂಡಾ ಜಾಸ್ತಿಯಾಗಿಲ್ಲ. ಬಿಸಿಯೂಟ, ಆಶಾ ಕಾರ್ಮಿಕರ ಬೆಂಬಲ ಬೆಲೆ ನೀಡಿದರೆ ನಿಮ್ಮಪ್ಪನ ಗಂಟು ಹೋಗುತ್ತದೆಯೆ? ಶ್ರೀಮಂತರಿಗೆ 2% ಹೆಚ್ಚು ತೆರಿಗೆ ಹಾಕಿದರೆ ಇದಕ್ಕೆ ಬೇಕಾದ ಹಣ ಸರ್ಕಾರಕ್ಕೆ ಸಿಗುತ್ತದೆ. ಆದರೆ ಮೋದಿ ಸರ್ಕಾರ ಇದು ಯಾವುದನ್ನೂ ಮಾಡುತ್ತಿಲ್ಲ ಎಂದು ಕಟುವಾಗಿ ನುಡಿದರು.
ಇದನ್ನೂ ಓದಿ:ಮಹಾಧರಣಿ| ರೈತ ಕಾರ್ಮಿಕರ ಹಕ್ಕೊತ್ತಾಯ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಿದ್ದಾರೆ: ಸಚಿವ ಬೈರೇಗೌಡ
ರೈತ ಕಾರ್ಮಿಕರು ಬೆಕ್ಕುಗಳಲ್ಲ, ಹುಲಿಗಳು: ಸಿದ್ದನಗೌಡ ಪಾಟೀಲ್
ರೈತ ಮುಖಂಡ ಸಿದ್ದನಗೌಡ ಪಾಟೀಲ್ ಮಹಾಧರಣಿಯಲ್ಲಿ ಮಾತನಾಡಿ ಇಲ್ಲಿ ನಾವು ಬೇಡಿಕೆ ಈಡೇರಿಸಲು ಬಂದಿಲ್ಲ, ಅಧಿಕಾರದಿಂದ ಕಳೆಗೆ ಇಳಿಯಿರಿ ಎಂದು ಹೇಳಲು ನಾವು ಬಂದಿದ್ದೇವೆ. ಅರ್ಥ, ಕುಲ ಮತ್ತು ಅಹಂಕಾರ ಮದ ಇಂದು ಜಾರಿಯಲ್ಲಿದೆ. ನನ್ನನ್ನು ಯಾರೂ ಕೇಳುವವರೆ ಇಲ್ಲ ಎಂದು ಮೋದಿ ಇರುವಾಗ ದೆಹಲಿಯ ಬೀದಿಯಲ್ಲಿ ನಿಂತ ರೈತರು ಪಾರ್ಲಿಮಂಟ್ ಅನ್ನು ನಿಯಂತ್ರಣ ಮಾಡಿದರು. ನರಗುಂದ ನವಲಗುಂದ ಹೋರಾಟದ ಸಮಯದಲ್ಲಿ ಅಂದಿನ ಕಾರ್ಮಿಕರು ರೈತರು ಕೈಜೋಡಿಸಿ ಅಂದಿನ ಗುಂಡುರಾವ್ ಸರ್ಕಾರ ಪತನ ಮಾಡಿದರು ಎಂದರು.
ರೈತ ಕಾರ್ಮಿಕರು ಬೆಕ್ಕುಗಳಲ್ಲ, ಹುಲಿಗಳು, ಇದನ್ನು ನೆನಪು ಮಾಡಲು ನಾವು ಮಹಾಧರಣಿ ಮಾಡಿದ್ದೇವೆ. 120 ಕೋಟಿ ಜನರ ಬಲ ಹುಲಿಯ ಬಲವಾಗಿದೆ. ಆದರೆ ನಮ್ಮ ಈ ಬಲ ಹಿಂದೂ, ಮುಸ್ಲಿಂ, ದಲಿತ ಮತ್ತು ಬ್ರಾಹ್ಮನ ಎಂದು ಒಡೆದು ಬೆಕ್ಕಿನಂತೆ ಆಗಿದ್ದೇವೆ. ಆದರೆ ದುಡಿಯುವ ಜನರಾದ ನಾವು ಒಗ್ಗಟ್ಟಾದರೆ ಹುಲಿಯ ಬಲವಾಗುತ್ತದೆ ಎಂದರು. ಸಾಲ
ವಿಡಿಯೋ ನೋಡಿ:ಮಹಾಧರಣಿ| ದುಡಿಯುವ ಜನರ ಮಹಾಧರಣಿ: ಮೂರನೇ ದಿನದ ನೇರ ಪ್ರಸಾರ