ದೆಹಲಿ ವಿಧಾನಸಭಾ ಚುನಾವಣೆ: ಇಂದು ಮತದಾನ; ಫೆಬ್ರವರಿ 8ಕ್ಕೆ ಫಲಿತಾಂಶ

ನವದೆಹಲಿ: ಇಂದು 70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ ಸುಮಾರು 1.55 ಕೋಟಿಗೂ ಹೆಚ್ಚು ನೋಂದಾಯಿತ ಮತದಾರರು ದೆಹಲಿಯ ರಾಜಕೀಯ ಭವಿಷ್ಯ ನಿರ್ಧರಿಸಲು ಸಜ್ಜಾಗಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಪ್ರಾರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ. ವಿಧಾನಸಭಾ

ಶನಿವಾರ, ಫೆಬ್ರವರಿ 8ರಂದು ಫಲಿತಾಂಶ ಪ್ರಕಟಣೆಯಾಗಲಿದೆ.

ಈ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಆಮ್‌ ಆದ್ಮಿ ಪಕ್ಷ (ಆಪ್‌) ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ ಇದೆ. ಆಪ್‌ ಎರಡನೇ ಬಾರಿ ಅಧಿಕಾರಕ್ಕೇರುವ ಉತ್ಸಾಹದಲ್ಲಿದೆ. ಆದರೆ, ಸಿ-ವೋಟರ್ ಸಮೀಕ್ಷೆಯ ಪ್ರಕಾರ ಶೇ 43.9ರಷ್ಟು ಮತದಾರರು ಸರ್ಕಾರ ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ: ಫೆಬ್ರವರಿ 7ಕ್ಕೆ ರೂಪೇಶ್ ಶೆಟ್ಟಿ ಹಾಗೂ ಜಾಹ್ನವಿ ನಟನೆಯ ಅಧಿಪತ್ರ ರಿಲೀಸ್

ದೆಹಲಿಯು ಮುಂದಿನ ಐದು ವರ್ಷಗಳ ಆಡಳಿತವನ್ನು ನಿರ್ಧರಿಸುವ ನಿರ್ಣಾಯಕ ಹಂತದಲ್ಲಿದೆ. ಫೆಬ್ರವರಿ 8ರಂದು ಮತದಾರರು ಭವಿಷ್ಯ ನುಡಿಯಲಿದ್ದು, ಯಾವ ರಾಜಕೀಯ ಪಕ್ಷವು ದೆಹಲಿಯ ಗದ್ದುಗೆಗೆ ಏರಿ, ರಾಷ್ಟ್ರ ರಾಜಧಾನಿಯನ್ನು ಮುನ್ನಡೆಸುತ್ತದೆ ಹಾಗೂ ಯಾವ ಪಕ್ಷ ವಿರೋಧ ಪಕ್ಷವಾಗಲಿದೆ ಎಂದು ಕುತೂಹಲವಿದೆ.

ಕಳೆದ ಚುನಾವಣೆಯಲ್ಲಿ ಗೆದ್ದು ಬೀಗಿರುವ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷಕ್ಕೆ ಇದೊಂದು ಅಗ್ನಿಪರೀಕ್ಷೆಯಾಗಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಹಾಗೂ ಕಾಂಗ್ರೆಸ್ ಪಕ್ಷಗಳು ಕೂಡ ಈ ಬಾರಿ ದೆಹಲಿಯನ್ನು ತೆಕ್ಕೆಗೆ ತೆಗೆದುಕೊಳ್ಳಲು ಭರ್ಜರಿ ತಯಾರಿ ನಡೆಸಿವೆ. ಆಪ್‌ ಎರಡೂ ಪಕ್ಷಗಳ ವಿರುದ್ಧ ತೊಡೆ ತಟ್ಟಿ ರಣರಂಗದಲ್ಲಿದೆ. ಈ ತ್ರಿಕೋನ ಸ್ಪರ್ಧೆಯಲ್ಲಿ ಮತದಾರರು ಯಾರಿಗೆ ಜೈ ಎನ್ನಲಿದ್ದಾರೆ ಎಂಬುದರ ಸುಳಿವು ನೀಡಿದೆ ಸಮೀಕ್ಷೆ.

ಸಿ-ವೋಟರ್ ಸಂಸ್ಥೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಮತದಾರರು ಯಾವ ಪಕ್ಷದ ಪರ ಒಲವು ತೋರುತ್ತಿದ್ದಾರೆ ಎನ್ನುವ ಸುಳಿವು ನೀಡಿದೆ. ಸಮೀಕ್ಷೆಗೆ ಒಳಗಾದ ಹಲವು ಮತದಾರರು ಈ ಸರ್ಕಾರದ ಬದಲಾವಣೆ ಬಯಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಸಮೀಕ್ಷೆಗೆ ಒಳಗಾದ ಶೇ 43.9ರಷ್ಟು ಮಂದಿ ಆಮ್‌ ಆದ್ಮಿ ಪಕ್ಷದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹೊಸ ಸರ್ಕಾರದ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದಾರೆ.

ಶೇ 10.9ರಷ್ಟು ಮತದಾರರು ಆಪ್‌ ಬಗ್ಗೆ ಅತೃಪ್ತಿ ಹೊಂದಿದ್ದರೂ ಸರ್ಕಾರದ ಬದಲಾವಣೆ ಬೇಡ ಎಂದಿದ್ದಾರೆ. ಬಾಕಿ ಶೇ 38.3ರಷ್ಟು ಜನರು ಆಪ್‌ ಆಡಳಿತದ ಬಗ್ಗೆ ತೃಪ್ತಿಯಾಗಿದೆ ಎಂದು ಹೇಳಿದ್ದಾರೆ. ಈ ಮಿಶ್ರ ಭಾವನೆಗಳಿಂದಾಗಿ ಸದ್ಯ ಎರಡನೇ ಬಾರಿ ದೆಹಲಿ ಆಳಲು ಮುಂದಾಗಿರುವ ಆಮ್‌ ಆದ್ಮಿ ಪಕ್ಷಕ್ಕೆ ಅತಂತ್ರ ಸ್ಥಿತಿಯನ್ನು ಸೂಚಿಸುತ್ತಿದೆ.

ಜನವರಿ 6ರಿಂದ ಫೆಬ್ರವರಿ 1ರವರೆಗೆ ಸಿ ವೋಟರ್ ಈ ಅಂಕಿಅಂಶ ವಿಶ್ಲೇಷಿಸಿದೆ. ಕೆಲವರು ಬೇರೆ ಸರ್ಕಾರ ಬೇಕು ಎನ್ನುತ್ತಿದ್ದರೆ, ಇನ್ನೂ ಕೆಲವರು ತೃಪ್ತಿ ಇಲ್ಲದಿದ್ದರೂ ಇದೇ ಸರ್ಕಾರವೇ ಇರಲಿ ಎನ್ನುವ ಮೂಲಕ ಪರೋಕ್ಷವಾಗಿ ಆಪ್‌ ಬೆನ್ನಿಗೆ ನಿಂತಿರುವುದು ಸ್ಪಷ್ಟವಾಗಿದೆ. ಹೀಗಾಗಿ ನಿಖರವಾಗಿ ಆಪ್‌ ಪಕ್ಷವೇ ಗೆಲುವು ಸಾಧಿಸಲಿದೆ ಎಂದೂ ಹೇಳುವ ವಾತಾವರಣ ದೆಹಲಿಯಲ್ಲಿ ಸದ್ಯಕ್ಕಿಲ್ಲ.

ಇದನ್ನೂ ನೋಡಿ: ‘ಉಪ್ಪಿಟ್ಟು ಬೇಡ.. ಬಿರಿಯಾನಿ, ಚಿಕನ್ ಫ್ರೈ ಬೇಕು’ ಅಂಗನವಾಡಿ ಬಾಲಕನ ಬೇಡಿಕೆಗೆ ಸ್ಪಂದಿಸಿದ ಎಡರಂಗ ಸರ್ಕಾರ

Donate Janashakthi Media

Leave a Reply

Your email address will not be published. Required fields are marked *