ತ್ರಿಪುರದಲ್ಲಿರುವ ಮತಗಳು 451: ಚಲಾವಣೆಯಾದ ಮತಗಳು 492 !! 

ತ್ರಿಪುರ: ಇಡೀ ದೇಶದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿದೆ ಎಂಬ ಸುದ್ದಿಗಳ ನಡುವೆಯೇ, ತ್ರಿಪುರ ರಾಜ್ಯದ ಕೆಲವು ಮತಗಟ್ಟಗಳಲ್ಲಿ ಶೇಕಡಾ ನೂರಕ್ಕೂ ಹೆಚ್ಚು ಮತದಾನವಾಗಿರುವ ವರದಿ ಬಂದಿವೆ. ತ್ರಿಪುರ ಪಶ್ಚಿಮ ಲೋಕಸಭಾ ಕ್ಷೇತ್ರದ ಮೋಹನ್ ಪುರದ ಮತಗಟ್ಟೆ ಸಂಖ್ಯೆ : 38 ರಲ್ಲಿ ಒಟ್ಟು ಮತದಾರರ ಸಂಖ್ಯೆ 451. ಆದರೆ, ಚಲಾವಣೆಯಾದ ಮತಗಳು 492 !! ಅಂದರೆ ಮತದಾನದ ಪ್ರಮಾಣ ಶೇ. 109!!

ಈಶಾನ್ಯ ರಾಜ್ಯಗಳಲ್ಲಿ ಒಂದಾದ ತ್ರಿಪುರಾದ ಪಶ್ಚಿಮ ಲೋಕಸಭಾ ಕ್ಷೇತ್ರದ ಮಜ್ಲಿಸ್ಪುರ್ – ಮತಗಟ್ಟೆ ಸಂಖ್ಯೆ : 44 ರಲ್ಲಿ ಒಟ್ಟು ಮತದಾರರ ಸಂಖ್ಯೆ 545. ಇಲ್ಲಿ ಚಲಾವಣೆಯಾದ ಮತಗಳು – 574. ಇಲ್ಲಿ 29 ಮತಗಳು ಹೆಚ್ಚಾಗಿ ಚಲಾವಣೆಯಾಗಿವೆ. ಖೈರ್ಪುರ್ – ಮತದಾನ ಕೇಂದ್ರ ಸಂಖ್ಯೆ : 25 ರಲ್ಲಿ ಒಟ್ಟು ಮತದಾರರ ಸಂಖ್ಯೆ 820. ಚಲಾವಣೆಯಾದ ಮತಗಳು 830. ಇಲ್ಲಿ 10 ಮತಗಳು ಹೆಚ್ಚಾಗಿ ಚಲಾವಣೆಯಾಗಿವೆ. ಖೈರ್ಪುರ್ – ಮತದಾನ ಕೇಂದ್ರ ಸಂಖ್ಯೆ : 44 ರಲ್ಲಿ ಒಟ್ಟು ಮತಗಳು – 1290. ಚಲಾವಣೆಯಾದ ಮತಗಳು – 1292. ಈ ಕೇಂದ್ರದಲ್ಲಿ 2 ಮತಗಳು ಹೆಚ್ಚಾಗಿ ಚಲಾವಣೆಯಾಗಿವೆ. ಬಿಜೆಪಿ ಅಧಿಕಾರದಲ್ಲಿರುವ ತ್ರಿಪುರಾದಲ್ಲಿ ಹೇಗೆಲ್ಲಾ ಚುನಾವಣಾ ಅಕ್ರಮ ಎಸಗಿದೆ ಎಂಬುದಕ್ಕೆ ಇದೊಂದು ಉದಾಹರಣೆ.

ಏಪ್ರಿಲ್ 22, 2024 ರಂದು ಬಿಜೆಪಿ ನಾಯಕ ಮತ್ತು ತ್ರಿಪುರ ರಾಜ್ಯ ಸಚಿವ ರತನ್ ಲಾಲ್ ನಾಥ್ ಅವರು ಗೋವಾಯಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, “ಹೆಚ್ಚಿನ ಮತದಾನ ನಡೆಯುವ ಕೇಂದ್ರಕ್ಕೆ ಎರಡು ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು” ಎಂದು ಹೇಳಿದರು. ಮೊದಲ ಹಂತದ ಮತದಾನವನ್ನು ಎದುರಿಸಿದ ತ್ರಿಪುರ ಪಶ್ಚಿಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮೋಹನ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ. 109 ರಷ್ಟು ಮತದಾನವಾಗಿದೆ. ಮೋಹನ್ ಪುರ ರತನ್ ಲಾಲ್ ನಾಥ್ ಅವರ ತವರು ಕ್ಷೇತ್ರವಾಗಿರುವುದರಿಂದ ಆ ಕ್ಷೇತ್ರದಲ್ಲಿ ನಕಲಿ ಮತದಾನದ ಮೂಲಕ ಶೇ.109ರಷ್ಟು ಮತದಾನವಾಗಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರ ಫೋಟೋಕ್ಕೆ ಆಕ್ಷೇಪಾರ್ಹ ಫೋಟೋ: ದೂರು ದಾಖಲು

ತ್ರಿಪುರಾದ 2 ಲೋಕಸಭಾ ಕ್ಷೇತ್ರಗಳಿಗೆ ಮತ್ತು ಖಾಲಿ ಇರುವ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆಯನ್ನು ಘೋಷಿಸಲಾಗಿದೆ. ಈ 3 ಕ್ಷೇತ್ರಗಳಲ್ಲಿ ಎಡ-ಕಾಂಗ್ರೆಸ್ ಮೈತ್ರಿಕೂಟ “ಇಂಡಿಯಾ” ಕಣಕ್ಕಿಳಿದಿದ್ದು, ತ್ರಿಪುರ ಪಶ್ಚಿಮ ಲೋಕಸಭೆ ಕ್ಷೇತ್ರ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ 19 ರಂದು ಮತದಾನ ನಡೆದಿತ್ತು. ಮೊದಲ ಹಾಗೂ ಎರಡನೇ ಹಂತದ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸಿ ನಾನಾ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿದೆ.

ಅದೇ ಅಂಕಿಅಂಶಗಳ ವರದಿಯನ್ನು ಅನುಸರಿಸಿ, ಸಿಪಿಎಂ ತ್ರಿಪುರಾ ರಾಜ್ಯ ಸಮಿತಿಯು ಏಪ್ರಿಲ್ 22 ರಂದು ತ್ರಿಪುರಾ ಪಶ್ಚಿಮ ಲೋಕಸಭೆ ಕ್ಷೇತ್ರದಲ್ಲಿ ಶೇ. 100 ಕ್ಕಿಂತ ಹೆಚ್ಚು ಮತದಾನವಾಗಿರುವುದಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ಕಮ್ಯೂನಿಸ್ಟರ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಾಳಿ ;

ಆಡಳಿತಾರೂಢ ಬಿಜೆಪಿ ಸೋಲಿನ ಭಯದಿಂದ ತಮ್ಮ ಪಕ್ಷದ ಪುಂಡರನ್ನು ಬಳಸಿಕೊಂಡು ಕಮ್ಯೂನಿಸ್ಟರ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಾಗೂ ಅಭ್ಯರ್ಥಿಗಳ ಮನೆಗಳ ಮೇಲೆ ದಾಳಿ ನಡೆಸಿದೆ. ತಮಗೆ ಮತ ಹಾಕುವುದಿಲ್ಲ ಎಂದು ಮೊದಲೇ ಮತದಾರರನ್ನು ಗುರುತಿಸಿ, ಅವರ ಮನೆಗೆ ತೆರಳಿ ಬೆದರಿಸಿ, ಮನೆಗೆ ಬೀಗ ಹಾಕಿ, ದೈಹಿಕ ಹಿಂಸೆ ನೀಡಿದ್ದಾರೆ. ಬೆದರಿಕೆಗೆ ಹೆದರದೆ ಮತಗಟ್ಟೆಗೆ ಬಂದ ಮತದಾರರ ಮೇಲೆ ಪೊಲೀಸರ ಸಮ್ಮುಖದಲ್ಲೇ ಬಿಜೆಪಿ ಪುಂಡರು ಹಲ್ಲೆ ನಡೆಸಿದ್ದಾರೆ. ಮತ ಹಾಕದ ಮತದಾರರ ಹೆಸರಲ್ಲಿ ಬಿಜೆಪಿ ಪುಂಡರ ಮೂಲಕ ನಕಲಿ ಮತದಾನ ಮಾಡಿಸಿದ್ದಾರೆ. ತ್ರಿಪುರ ಪಶ್ಚಿಮ ಲೋಕಸಭೆ ಕ್ಷೇತ್ರ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಮೇ 7ರಂದು ನಡೆಯಲಿರುವ ಮೂರನೇ ಹಂತದ ಚುನಾವಣೆ ಸಮಯದಲ್ಲಿ ಮರು ಮತದಾನ ನಡೆಸುವಂತೆ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿಯು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಆದರೆ ಈ ಪತ್ರಕ್ಕೆ ರಾಜ್ಯ ಚುನಾವಣಾ ಆಯೋಗ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಈ ಸಂಬಂಧ ಭಾರತದ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು, ತ್ರಿಪುರಾದಲ್ಲಿ ಚುನಾವಣಾ ಅಕ್ರಮಗಳ ಕುರಿತು ಸಿಪಿಎಂ ತ್ರಿಪುರಾ ರಾಜ್ಯ ಸಮಿತಿ ಸಲ್ಲಿಸಿರುವ ದೂರುಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ಇದನ್ನೂ ನೋಡಿ: ಶಿವಮೊಗ್ಗ ಲೋಕಸಭಾ ಕ್ಷೇತ್ರ : ಬಿಜೆಪಿ ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ, ಯಾರ ಮತಬುಟ್ಟಿಗೆ ಕೈ ಹಾಕ್ತಾರೆ ಈಶ್ವರಪ್ಪ?

Donate Janashakthi Media

Leave a Reply

Your email address will not be published. Required fields are marked *