ಬೆಂಗಳೂರು| ಜಾತಿ ಗಣತಿ ವರದಿ ವಿರೋಧಿಸಿ ಒಕ್ಕಲಿಗರ ಸಮುದಾಯ ಪ್ರತಿಭಟನೆ

ಬೆಂಗಳೂರು: ಜಾತಿ ಗಣತಿ ವರದಿಯು ಭಾರೀ ಸಂಚಲನ ಮೂಡಿಸಿದ್ದು, ಇದೀಗ ಒಕ್ಕಲಿಗರ ಸಮುದಾಯವು ರಾಜ್ಯ ಸರ್ಕಾರದ ಈ ವರದಿ ವಿರೋಧಿಸಿ ಹೋರಾಟಕ್ಕೆ ಮುಂದಾಗಿದೆ. ಬೆಂಗಳೂರು

ಏಪ್ರಿಲ್‌ 15 ಮಂಗಳವಾರ ರಾಜ್ಯ ಒಕ್ಕಲಿಗರ ಸಂಘದಿಂದ ಸಭೆ ನಡೆಸಲಾಗಿದ್ದು, ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡಿದ್ದೇವೆ. ಆರೋಗ್ಯಕರವಾಗಿ ವರದಿ ಕೊಟ್ಟಿಲ್ಲ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಆಕ್ರೋಶ ಹೊರಹಾಕಿದ್ದಾರೆ.

10 ವರ್ಷದ ಬಳಿಕ ವರದಿ ತಂದು ಈಗ ಒಪ್ಪಿಕೊಳ್ಳಿ ಎಂದು ಸರ್ಕಾರ ಹೇಳುತ್ತಿದೆ. ಒಕ್ಕಲಿಗರ ಸಂಖ್ಯೆ 61 ಲಕ್ಷ ಎಂದು ವರದಿಯಲ್ಲಿ ತೋರಿಸಿದ್ದಾರೆ. ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಎಲ್ಲರೂ ಒಂದಾಗಿ ಕರ್ನಾಟಕ ಬಂದ್ ಮಾಡಬೇಕು.

ಇದನ್ನೂ ಓದಿ: ಹೈದರಾಬಾದ್| ಮೊದಲ ಬಾರಿಗೆ ಎಸ್‌ಸಿ ಒಳಮೀಸಲಾತಿ ಜಾರಿ

ಅನ್ಯಾಯಕ್ಕೊಳಗಾದವರೆಲ್ಲ ಸೇರಿ ಬಂದ್ ಮಾಡಬೇಕು ಎಂದು ಅವರು ಕರೆ ನೀಡಿದರು. ಅಲ್ಲದೇ ವೀರಶೈವ ಸಮುದಾಯದವರ ಬಳಿಯೂ ಹೋರಾಟದ ಬಗ್ಗೆ ಮಾತನಾಡುತ್ತೇವೆ ಎಂದರು.

ಒಕ್ಕಲಿಗ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪ ರೆಡ್ಡಿ ಮಾತನಾಡಿ, ಸರ್ಕಾರದ ವಿರುದ್ಧ ಪ್ರತಿಭಟನೆಗೆ ಒಕ್ಕಲಿಗರ ಸಂಘದಿಂದ ಸಿದ್ಧತೆ ಮಾಡುತ್ತಿದ್ದೇವೆ. ಏ.17ರ ಬಳಿಕ ಹೋರಾಟದ ಬಗ್ಗೆ ರೂಪುರೇಷೆ ಕುರಿತು ನಿರ್ಧರಿಸುತ್ತೇವೆ. ಸಮುದಾಯದ ಪರ ಇರುವ ಎಲ್ಲ ಸಭೆಗೆ ಹೂಗುತ್ತೇವೆ.

ಒಕ್ಕಲಿಗ ಹಾಗೂ ಲಿಂಗಾಯತರನ್ನು ಮುಗಿಸುವ ಹುನ್ನಾರ ನಡೆದಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ನೋಡಿ: ವಚನಾನುಭವ – 26 |ಅಂಬಿಗರ ಚೌಡಯ್ಯನ ವಚನ ; ಹರಿ ಹರಿಯೆಂದು ಹೊಡವಡುವಿರಿ. ನಿಮ್ಮ ನಡೆಯಲ್ಲಾ ಅನಾಚಾರ Janashakthi Media

Donate Janashakthi Media

Leave a Reply

Your email address will not be published. Required fields are marked *