ಮತಪಟ್ಟಿಯಲ್ಲಿ ವಿ.ಕೆ. ಶಶಿಕಲಾ ಹೆಸರಿಲ್ಲ

ಚೆನ್ನೈ : ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಆವರ ಆಪ್ತೆ ವಿ.ಕೆ. ಶಶಿಕಲಾ ಅವರ ಈ ಬಾರಿ ರಾಜ್ಯ ವಿಧಾನಸಭಾ ಚುಣಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗಿಲ್ಲ.‌ ಅವರ ಹೆಸರು ಮತದಾರರ ಪಟ್ಟಿಯಲ್ಲಿ ದಾಖಲಾಗಿಲ್ಲ.

ಈ ಬಗ್ಗೆ 66 ವರ್ಷದ ಶಶಿಕಲಾ ಬೇಸರ ವ್ಯಕ್ತಪಡಿಸಿದ್ದು, ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಕೆಪರ ವಕೀಲರು ಹೇಳಿದ್ದು,  ಇದು ʻʻಅನ್ಯಾಯʼʼ ಎಂದು ಅವರು ತಮ್ಮ ಕಾನೂನು ಸಲಹೆಗಾರರ ಮೂಲಕ ತಿಳಿಸಿದ್ದಾರೆ.

ಈ ಹಿಂದೆ ಚೆನ್ನೈನ ತೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಶಶಿಕಲಾರ ಹೆಸರಿತ್ತು. ಈ ಹಿಂದೆ ಅವರು ಜಯಲಲಿತಾರ ಐಷಾರಾಮಿ ಪಾಯೆಸ್ ಗಾರ್ಡನ್ ರೆಸಿಡೆನ್ಸಿಯಲ್ಲಿ ವಾಸವಾಗಿದ್ದರು.ಇದನ್ನು ಎಐಎಡಿಎಂಕೆ ಸರಕಾರ ಸ್ಮಾರಕವನ್ನಾಗಿ ಪರಿವರ್ತಿಸಿದೆ.

ಇದನ್ನು ಓದಿ : ಇರುವುದು 90 ಮತಗಳು ಆದರೆ ಚಲಾವಣೆಯಾದದ್ದು 181 ಮತ

2021ರ ಜನವರಿಯಲ್ಲಿ ಜೈಲಿನಿಂದ ಬಿಡುಗಡೆಯಾದ ಶಶಿಕಲಾ ಸ್ವಲ್ಪ ಸಮಯದ ನಂತರ ಅವರು ರಾಜಕೀಯದಿಂದ ದೂರವಿರುವುದಾಗಿ ಹೇಳಿದ್ದರು.

“ಇದರಲ್ಲಿ ಯಾವುದೇ ಪಿತೂರಿ ಇಲ್ಲ. ಅವರ ಹೆಸರನ್ನು ಸೇರಿಸುವುದನ್ನು ಮತ್ತು ಖಚಿತಪಡಿಸಿಕೊಳ್ಳುವುದು ಅವರ ಜವಾಬ್ದಾರಿಯೂ ಆಗಿದೆ” ಎಂದು ಚುನಾವಣಾ ಅಧಿಕಾರಿ ಹೇಳಿದರು.

ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿ ಇತ್ತೀಚಿಗೆ ಅಷ್ಟೇ ಬಿಡುಗಡೆ ಹೊಂದಿದ ಆಕೆಯ ಹೆಸರು ಕಾಣೆಯಾಗಿದೆ ಎಂದು ತಿಳಿದ ನಂತರ, ಪಾಂಡಿಯನ್ ಈ ವಿಷಯದ ಬಗ್ಗೆ ಮುಖ್ಯ ಚುನಾವಣಾ ಅಧಿಕಾರಿ ಸತ್ಯಬ್ರತಾ ಸಾಹೂ ಅವರಿಗೆ ತಿಳಿಸಿದರು. ಸೇರ್ಪಡೆ ಅಥವಾ ತಿದ್ದುಪಡಿಗೊಳಪಡಿಸುವ ಅವಧಿ ಮುಗಿದಿದೆ ಎಂದು ಅಧಿಕಾರಿಗಳು ಅವರಿಗೆ ತಿಳಿಸಿದ್ದರು.

ಮತಪಟ್ಟಿಯಿಂದ ಹೆಸರು ಅಳಿಸಿ ಹಾಕುವ ಪ್ರಕ್ರಿಯೆ ಮುಂಚೆ ಅವರಿಗೆ ನೋಟಿಸ್‌ ಏಕೆ ನೀಡಿರಲಿಲ್ಲ ಎಂಬ ಪ್ರಶ್ನೆ ಚುನಾವಣಾ ಅಧಿಕಾರಿಗಳಾದ ಸತ್ಯಬ್ರತಾ ಸಾಹೂ ಅವರು ಇದಕ್ಕೆ ಕಾರಣ ಯಾರೆಂಬುದು ಇನ್ನು ಸ್ಪಷ್ಟವಾಗಿಲ್ಲ. ಚುನಾವಣಾ ಪ್ರಕ್ರಿಯೆ ಮುಗಿನ ನಂತರವಷ್ಟೇ ಗಮನಿಸಬಹುದಾಗಿ ಎಂದು ಸುದ್ದಿಗಾರರಿಗೆ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *