ವಿಸ್ಟ್ರಾನ್ ಕಾರ್ಮಿಕರಿಗೆ ಉಚಿತ ಕಾನೂನು : ಲಾಯರ್ಸ್ ಯೂನಿಯನ್ ನಿರ್ಧಾರ

ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಘಟನೆಯಿಂದ ಅಮಾಯಕ ಕಾರ್ಮಿಕರನ್ನು ಅನಾವಶ್ಯಕವಾಗಿ ಬಂಧಿಸಿದ್ದಾರೆ. ನೊಂದ ಕಾರ್ಮಿಕರಿಗೆ ಕಾನೂನು ನೆರವು ನೀಡಲು ಅಖಿಲ ಭಾರತ ವಕೀಲ ಸಂಘ ಮುಂದಾಗಿದೆ ಎಂದು ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹರೀಂದ್ರ ತಿಳಿಸಿದರು

ನಗರದ ಪತ್ರಕರ್ತರ ಭವನದಲ್ಲಿ ಅಖಿಲ ಭಾರತ ವಕೀಲರ ಸಂಘದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಸ್ಟ್ರಾನ್ ಕಂಪನಿಯೂ ಕಾರ್ಮಿಕ ಕಾಯಿದೆಗಳನ್ನು ಜಾರಿ ಮಾಡದ ಪರಿಣಾಮದಿಂದ ಈ ಘಟನೆ ನಡೆದಿದ್ದು ಮಾಲೀಕರ ಪರವಾಗಿ ಸಂಸದರ ನಿರ್ದೇಶನದಂತೆ ಜಿಲ್ಲಾಧಿಕಾರಿ ನಡೆದುಕೊಳ್ಳುತ್ತಾ ಇದ್ದು ಘಟನೆಯ ಸತ್ಯಾಂಶ ಹೊರಬರಲು ನಿಷ್ಪಕ್ಷಪಾತ ತನಿಖೆ ನಡೆಸಲು ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಕಂಪನಿಯ ನಡುವಳಿಕೆಗಳ ಪ್ರಕಾರ 6 ಸಾವಿರ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅವಕಾಶ ಇದೆ ಯಾಕೆ 12 ಸಾವಿರ ಕಾರ್ಮಿಕರನ್ನು ನೇಮಿಸಿದ್ದರು ಕಾಯಿದೆ ಪ್ರಕಾರ 8 ಗಂಟೆ ಕೆಲಸ ಮಾಡಬೇಕು 12 ಗಂಟೆ ಯಾಕೆ ದುಡಿಸಿಕೊಂಡರು ಮೂರು ಪಾಳೆಗೆ ಎರಡು ಪಾಳೆಗೆ ದುಡಿಸಿಕೊಂಡರು ಕೆಲಸ ಮಾಡಿದ ಕಾರ್ಮಿಕರಿಗೆ ಜೀವನ ರೂಪಿಸುವುದು ಕಂಪನಿಯ ಜವಾಬ್ದಾರಿ ಯಾಕೆ ಮುಂದಾಗಲಿಲ್ಲ ಇದರ ಬಗ್ಗೆ ನಮ್ಮ ಸಂಘಟನೆ ಸತ್ಯಶೋಧನಾ ಸಮಿತಿ ಮಾಡಿ ವರದಿ ಮಾಡಿದೆ ಕಂಪನಿಯ ತಪ್ಪಿನಿಂದ ಈ ಘಟನೆ ನಡೆದಿದೆ ಎಂದು ರಾಜ್ಯ ಸಮಿತಿಯಿಂದ ಸತ್ಯಾಂಶವಾಗಿದೆ ಎಂದರು

ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಲ್.ಎಂ ಪೇಶ್ವ ಮಾತನಾಡಿ ಕಾರ್ಮಿಕ ಇಲಾಖೆಯ ವರದಿ ಪ್ರಕಾರ 15 ಕಾರ್ಮಿಕ ಕಾಯಿದೆಗಳು ಉಲ್ಲಂಘನೆಯಾಗಿವೆ ವಿಸ್ಟ್ರಾನ್ ಸಂಸ್ಥೆಯೇ ಕಾರ್ಮಿಕರ ಮುಂದೆ ಕ್ಷಮೆ ಕೇಳಿದ ಜೊತೆಗೆ ರಾಷ್ಟ್ರೀಯ ಉಪಾಧ್ಯಕ್ಷನನ್ನು ವಜಾ ಮಾಡಿದೆ ಇಷ್ಟೆಲ್ಲಾ ಆದರೂ ಕಾರ್ಮಿಕರ ಮೇಲೆ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆಹೊರತು ಸಂಬಂಧಿಸಿದ ಕಾರ್ಮಿಕ ಇಲಾಖೆ ಸರಕಾರ ಹಾಗೂ ಸಂಸ್ಥೆಯ ಗುತ್ತಿಗೆದಾರ ಮಾಲೀಕನ ಮೇಲೆ ಕ್ರಮವನ್ನು ಕೈಗೊಂಡಿಲ್ಲ ಕೇವಲ ಶ್ರಮಿಕ ವರ್ಗದ ಮೇಲೆಯೇ ಕ್ರಮ ಯಾಕೆ ಎಂದು ಪ್ರಶ್ನಿಸಿದರು

ಕಂಪನಿಯಲ್ಲಿ ಬಹುತೇಕ ವಿಧ್ಯಾರ್ಥಿ ಮತ್ತು ಯುವಜನರು ಕೆಲಸಕ್ಕೆ ಸೇರಿದ್ದಾರೆ ರಾಷ್ಟ್ರದ ಉದಯೋನ್ಮುಖ ಯುವಕರು ಇವರಿಗೆ ಉದ್ಯೋಗದಲ್ಲಿ ಮೋಸ ಶೋಷಣೆಯಿಂದ ಬಳಲುತ್ತಿದ್ದಾರೆ ಈ ಕಾರ್ಮಿಕರಿಗೆ ರಾಷ್ಟ್ರ ಮತ್ತು ಸಮಾಜದ ಹಿತದೃಷ್ಟಿಯಿಂದ ಸರಿಯಾದ ಕಾನೂನು ನೆರವು ಮತ್ತು ಮಾರ್ಗದರ್ಶನ ನೀಡಬೇಕೇ ಹೊರತು ಅನಾವಶ್ಯಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವಂತೆ ಮಾಡಬಾರದು ಇವರಿಗೆ ಕರ್ನಾಟಕ ರಾಜ್ಯ ಸಂಪೂರ್ಣ ಕಾನೂನು ನೆರವು ನೀಡಲಿದೆ ಯಾರು ಭಯ ಪಡಬಾರದು ನಿಮ್ಮ ಬೆಂಬಲಕ್ಕೆ ಸಂಘಟನೆ ಇದೆ ಎಂದರು

ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ವಕೀಲರ ಸಂಘದ ರಾಜ್ಯ ಉಪಾಧ್ಯಕ್ಷ ಶಿವಶಂಕರ್, ರಾಜ್ಯ ಸಮಿತಿ ಸದಸ್ಯರಾದ ವೆಂಕಟರಮಣಬಾಬು, ಎಸ್ ಸತೀಶ್, ವಾಸುದೇವರೆಡ್ಡಿ, ಕೆ.ನಾಗರಾಜ್, ಭೀಮಸೇನೆ ಪಂಡಿತ್ ಮುನಿವೆಂಕಟಪ್ಪ, ಜೆಎಂಎಸ್ ವಿಜಯಕುಮಾರಿ ಇದ್ದರು

Donate Janashakthi Media

One thought on “ವಿಸ್ಟ್ರಾನ್ ಕಾರ್ಮಿಕರಿಗೆ ಉಚಿತ ಕಾನೂನು : ಲಾಯರ್ಸ್ ಯೂನಿಯನ್ ನಿರ್ಧಾರ

Leave a Reply

Your email address will not be published. Required fields are marked *