ಈ ಚಿತ್ರದಲ್ಲಿ ಪತ್ರಿಕೆ ಹಿಡಿದು ನಿಂತಿರುವ ವ್ಯಕ್ತಿ ಓರ್ವ ಪತ್ರಕರ್ತ, ಹೆಸರು ಕನ್ಹಯ್ಯ ಭೆಲಾರಿ, ಆತ ತೋರಿಸುತ್ತಿರುವುದು ಪತ್ರಿಕೆಯಲ್ಲಿ ಬಂದ ಕೇಂದ್ರ ಸರ್ಕಾರದ ಒಂದು ಜಾಹೀರಾತು.
ಈ ಜಾಹೀರಾತು ಫೆಬ್ರುವರಿ 25ರಂದು ಬಂಗಾಳದ ಎಲ್ಲಾ ಪತ್ರಿಕೆಗಳಲ್ಲಿ ಅಚ್ಚಾಗಿ ಬಂದಿತ್ತು. ದೀಜಿಯ ಫೋಟೋದ ಪಕ್ಕದಲ್ಲಿರುವ ಮಹಿಳೆಯೇ ಪತ್ರಕರ್ತನ ಪಕ್ಕದಲ್ಲಿ ನಿಂತಿರುವುದು. ಜಾಹೀರಾತು ಪ್ರಕಾರ ಮೋದೀಜಿಯ ಫೋಟೋದ ಪಕ್ಕದಲ್ಲಿರುವ ಮಹಿಳೆಗೆ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿ ಕೋಲ್ಕತ್ತಾದಲ್ಲಿ 24 ಲಕ್ಷ ರೂಪಾಯಿಯ ಮನೆ ಕಟ್ಟಿಸಿ ಕೊಟ್ಟಿದೆ ಎಂಬುದಾಗಿ ಪತ್ರಿಕೆಗಳಲ್ಲಿ ಆರ್ಧ ಪುಟದಷ್ಟು ಜಾಹೀರಾತುಗಳನ್ನು ಪ್ರಕಟಿಸಿದೆ.
ಇದನ್ನೂ ಓದಿ : ಮೋದಿಯವರ ಬ್ರಿಗೇಡ್ “ಜೋಷ್” ಹರಡಿಸಲು ಎಡರಂಗದ ರ‍್ಯಾಲಿಗೇ ಶರಣು!
ಪತ್ರಿಕೆಯಲ್ಲಿ ಜಾಹೀರಾತಿನಲ್ಲಿರುವ ಫಲಾನುಭವಿ ಮಹಿಳೆಯ ಜಾಡು ಹಿಡಿದು ಹೊರಟ ಪತ್ರಕರ್ತ ಕನ್ನಯ್ಯ ಭೆಲಾರಿ ನಿಜ ಸ್ಥಿತಿ ಗೊತ್ತಾದಾಗ ಈಗ ದೇಶದ ಮುಂದೆ ವಾಸ್ತವವನ್ನು ತೆರೆದಿಟ್ಟಿದ್ದಾರೆ. ಆ ಮಹಿಳೆ ಪಾಪ ಇಂದಿಗೂ ಜೀವಿಸುತ್ತಿರುವುದು ನರಕ ಸಮಾನವಾದ ಸ್ಲಂ ಒಂದರಲ್ಲಿ ಒಂದು ಕೋಣೆಯ ಹುಲ್ಲು ಹಾಸಿದ ಗುಡಿಸಲಿನಲ್ಲಿ!!!
ಫೆಬ್ರವರಿ 26ರಂದು ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳ ರಾಜ್ಯ ಒಳಗೊಂಡು ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಚುನಾವಣೆ ಘೋಷಣೆಯಾಗಿದೆ. ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಹಲವು ದಿನಗಳು ಪುಟಗಟ್ಟಲೆ ಕೇಂದ್ರದ ಜನತೆಯ ದುಡ್ಡಿನಲ್ಲಿ ಚುನಾವಣಾ ಪ್ರಚಾರದಂತೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಸರಕಾರಿ ದುಡ್ಡಿನಲ್ಲಿ ಪ್ರಚಾರಗಿಟ್ಟಿಸಿಕೊಳ್ಳುವ ತಂತ್ರವಾಗಿದೆ.
ಅಧಿಕಾರ ಹಿಡಿಯಲು ಎಂತಹ ತಂತ್ರಬೇಕಾದರೂ ಪ್ರಯೋಗಿಸುವ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷದ ನರೇಂದ್ರಮೋದಿ ಕೇಂದ್ರ ಸರಕಾರ ಯೋಜನೆಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿವೆ ಎನ್ನುತ್ತವೆ. ಆದರೆ ಇವು ಕೇವಲ ಪ್ರಚಾರ ತಂತ್ರವಷ್ಟೆ ನೈಜವಾದ ಕೆಲಸವಲ್ಲ ಎಂದು ಈಗ ವೈರಲ್ ಆಗುತ್ತಿರುವ ಈ ಪೋಟೋ ಸಾಕ್ಷಿಯಾಗಿದೆ.
ಒಟ್ಟಿನಲ್ಲಿ ಸರಕಾರಿ ದುಡ್ಡಿನಲ್ಲಿ ಚುನಾವಣಾ ಪ್ರಚಾರ ಮಾಡುವುದು.!!