ಬೆಂಗಳೂರು : ಮಂತ್ಲಿ ಕಮೀಷನ್ ಕೊಡ್ತಿಲ್ಲ ಎಂಬ ಕಾರಣಕ್ಕೆ ಆಹಾರ ಅಧಿಕಾರಿಗಳು ಬೀದಿಬದಿ ವ್ಯಾಪಾರಿಯ ಮೇಲೆ ದಾಳಿ ನಡೆಸಿ, ತಳ್ಳುಬಂಡಿಯನ್ನು ವಶಪಡಿಸಿಕೊಳ್ಳುವ ಪ್ರಯತ್ನ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ.
ರಸ್ತೆ ಬದಿಯಲ್ಲಿ ಮೀನು ವ್ಯಾಪಾರ ಮಾಡ್ತಿದ್ದ ಹರಿ ಎಂಬ ಯುವಕನ ಮೇಲೆ ಪೋಲೀಸರು ದೌರ್ಜನ್ಯ ನಡೆಸಿದ್ದಾರೆ. ಶನಿವಾರ ರಾತ್ರಿ 9.20ರ ಸುಮಾರಿಗೆ ಯಾವುದೇ ನೋಟಿಸ್ ಇಲ್ಲದೇ ದಾಳಿ ನಡೆಸಲಾಗಿದೆ. ವ್ಯಾಪಾರಿ ಹರಿ ಕಾಲಿಗೆ ಬಿದ್ರೂ ಅಧಿಕಾರಿಗಳು ತಳ್ಳೋ ಗಾಡಿ ಎತ್ತೆಸೆದಿದ್ದಾರೆ. ವ್ಯಾಪಾರಕ್ಕೆ ತಂದಿದ್ದ ಆಹಾರವನ್ನು ಮಣ್ಣು ಪಾಲು ಮಾಡಿದ್ದಾರೆ. ಟ್ರಾಕ್ಟರ್ ತಂದು ತಳ್ಳೋ ಗಾಡಿ, ಹಾಗೂ ಅಡುಗೆಗೆ ಬಳಸುತ್ತಿದ್ದ ವಸ್ತುಗಳನ್ನು ತುಂಬಿಕೊಂಡಿದ್ದಾರೆ. ಜನರು ಸೇರಿ ತರಾಟೆಗೆ ತಗೆದುಕೊಳ್ತಿದ್ದಂತೆ ಅಧಿಕಾರಿಗಳು ಎಸ್ಕೇಪ್ ಆಗಿದ್ದು, ಅದೇ ಜಾಗದಲ್ಲಿ ಹತ್ತಾರು ಅಂಗಡಿ ಇದ್ರೂ ಹರಿ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಬೀದಿ ಬದಿ ವ್ಯಾಪಾರಿ ಹರಿ 2 ಸಾವಿರ ಬಂಡವಾಳ ಹೂಡಿದ್ದರು. ಅಧಿಕಾರಿಗಳು ದಿನಂಪತ್ರಿ ಬಂದೂ ಕಮೀಷನ್‌ಗೆ ಬೇಡಿಕೆ ಇಟ್ಟಿದ್ದರು. ಅಷ್ಟೊಂದು ಹಣ ಕೊಡಲು ಆಗುವುದಿಲ್ಲ, ವ್ಯಾಪರ ಕಮ್ಮಿ ಇದೆ. ನೂರು ರೂಪಾಯಿ ಕೊಡ್ತಿನಿ ದಿನಕ್ಕೆ ಎಂದು ಹರಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರಂತೆ. ಇನ್ನಷ್ಟೂ ಹಣಕ್ಕೆ ಅಧಿಕಾರಿಗಳು ಬೇಡಿಕೆ ಇಟ್ಟದ್ದರೂ, ನಿರಂತರ ಮಳೆಯಿಂದಾಗಿ ವ್ಯಾಪಾರ ಅಷ್ಟೊಂದು ಚನ್ನಾಗಿ ಆಗುತ್ತಿರಲಿಲ್ಲ, ನೂರು ರೂ ಕೊಡಲು ಹೋದಾಗ ನಿರಾಕರಿಸಿ ಈಗ ಈರೀತಿ ದೌರ್ಜನ್ಯ ನಡೆಸಿದ್ದಾರೆ ಎಂದು ಹರಿ ಆರೋಪಿಸಿದ್ದಾರೆ.
ಇತ್ತೀಚೆಗೆ ಬೀದಿಬದಿ ವ್ಯಾಪಾರಿಗಳಿಂದ ಪೊಲೀಸರು, ಅಧಿಕಾರಿಗಳು ದುಡ್ಡು ಕಿತ್ತು ತಿನ್ನುವ ಚಾಳಿ ಹೆಚ್ಚಾಗುತ್ತಲೇ ಇದೆ. ಹಿರಿಯ ಅಧಿಕಾರಿಗಳು, ಹಾಗೂ ಸರಕಾರ, ಆ ಪ್ರದೇಶದ ಶಾಸಕರು ಗಮನವನ್ನು ಹರಿಸಿ ಬೀದಿಬದಿ ವ್ಯಾಪಾರಿಗಳ ರಕ್ಷಣೆಗೆ ನಿಲ್ಲಬೇಕು, ಸಿಗುವ ಅಲ್ಪ ಹಣದಿಂದ ಕುಟುಂಬದ ನಿರ್ವಹಣೆ ನಡೆಯುತ್ತಿರುತ್ತದೆ. ಈ ರೀತಿ ದೌರ್ಜನ್ಯ ನಡೆಸುವುದು ಸರಿಯಾದ ಕ್ರಮವಲ್ಲ. ಇಂತವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಬೀದಿಬದಿ ವ್ಯಾಪರಸ್ಥರ ಸಂಘಟನೆಯ ಮುಖಂಡರಾದ ಬಸ್ಸಮ್ಮ ಆಗ್ರಹಿಸಿದ್ದಾರೆ.