‘ವಿಜಯಯಾತ್ರೆ’: ಗುಜರಾತದ ನಂತರ ಜಿ20 ಅಧ್ಯಕ್ಷಗಿರಿ

ವೇದರಾಜ ಎನ್ ಕೆ

ಮತಗಟ್ಟೆ ಸಮೀಕ್ಷೆಗಳ ಭವಿಷ್ಯವಾಣಿಗಳನ್ನೂ ಮೀರಿ ಗುಜರಾತಿನಲ್ಲಿ ಹೊಸ ಚುನಾವಣಾ ದಾಖಲೆ ನಿರ್ಮಾಣಗೊಂಡಿದೆ. ಹಿಮಾಚಲ ಪ್ರದೇಶ ಮತ್ತು ದಿಲ್ಲಿ ಮಹಾನಗರಪಾಲಿಕೆಗಳನ್ನು ಕಳೆದು ಕೊಂಡರೇನಂತೆ, ಮಾಧ್ಯಮಗಳ ನೆರವಿನಿಂದ ಅದನ್ನು ‘ನಿಭಾಯಿಸಿ’ಯೂ ಆಗಿದೆ.  ಈಗ ಮುಂದಿನ ಗುರಿ ಜಿ-20ರ ಅಧ್ಯಕ್ಷತೆಯ ಭರಾಟೆ. ಅದೂ ಸರದಿಯಿಂದ ಸಿಕ್ಕಿದ ಪಟ್ಟವಾದರೇನಂತೆ! ಕಾರ್ಪೊರೇಟ್‍ ಮಾಧ್ಯಮಗಳ ನೆರವು ಇನ್ನೂ ಗಟ್ಟಿಯಾಗುತ್ತಿದೆ. ಕಾರ್ಟೂನಿಸ್ಟರ ರೇಖೆಗಳಲ್ಲಿ ಈ ‘ವಿಜಯಯಾತ್ರೆ’ಯ ಒಂದು  ಅವಲೋಕನ

“ವಾಹ್‍ ಮೋದೀಜೀ ವಾಹ್!”
(ಸತೀಶ ಆಚಾರ್ಯ, ಫೇಸ್‌ಬುಕ್)

ಹೌದು, ಮಾಧ್ಯಮಗಳಲ್ಲಂತೂ ಪ್ರತಿಪಕ್ಷಗಳ ಎರಡು ವಿಜಯಗಳಿಗಿಂತ ಹೆಚ್ಚಾಗಿ ಗುಜರಾತಿನ ಒಂದು ಭಾರೀ ವಿಜಯದ ಸುದ್ದಿಯೇ,

(ಪಂಜು ಗಂಗೊಳ್ಳಿ, ಕನ್ನಡ ಒನ್‍ ನ್ಯೂಸ್)

ನಿಜ, ಮಾಧ್ಯಮಕ್ಕೆ  ‘ಕಾರ್ಪೊರೇಟ್‍’ ಎಂದು ಸೇರಿಸಬೇಕು- ಅವರಿಗೆ ಮ್ಯಾಜಿಕ್‍ ಮಾತ್ರ ಕಂಡಿದೆ.

(ಪಿ.ಮಹಮ್ಮದ್, ವಾರ್ತಾಭಾರತಿ)

ಅದೇನೇ ಇರಲಿ, ಗುಜರಾತ್‍ ಈ ಬಾರಿಯ ಭಾರೀ ವಿಜಯವನ್ನು ಸಂಭ್ರಮದಿಂದ ಆಚರಿಸಿದೆ. ನಿರುದ್ಯೋಗ, ಬೆಲೆಯೇರಿಕೆ,  ಕೋಮುವಾದ, ಅಷ್ಟೇ ಏಕೆ ಮೊರ್ಬಿ ಸೇತುವೆ ದುರಂತ ಇವುಗಳಲ್ಲಿ ಮತದಾರರು ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ.

(ಇರ್ಫಾನ್ ನ್ಯೂಸ್ ಕ್ಲಿಕ್)

***

ಆದರೆ, ಗುಜರಾತಿನಲ್ಲಿ ಭಾರೀ ಸೋಲುಂಡವರಿಗೆ  ಈ ಬಾರಿ ಒಂದು ಸಮಾಧಾನವಂತೂ ಇದೆ.

ಸಮಾಧಾನದ ಸಂಗತಿಯೆಂದರೆ ನಮಗೆ
ರೆಸಾರ್ಟ್ ಬಿಲ್‍ನಲ್ಲಿ ಭಾರೀ ಉಳಿತಾಯವಾಗಿದೆ

(ಸಜಿತ್ ಕುಮಾರ್, ಡೆಕ್ಕನ್‍ ಹೆರಾಲ್ಡ್)

ಆದರೆ..ಹಿಮಾಚಲ ಮತ್ತು ದಿಲ್ಲಿಯಲ್ಲಿ ..ಈ ವಿಷಯದಲ್ಲಿ ಸಮಾಧಾನ ಪಡಬಹುದೇ? ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಮಾದರಿ ಮರೆತು ಹೋಯಿತೇ? ಈ ವ್ಯಂಗ್ಯಚಿತ್ರಕಾರರು ನೆನಪಿಸುತ್ತಾರೆ.

ಮೋದೀಜೀ ಗುಜರಾತ ಗೆದ್ದಿದ್ದಾರೆ!
ನಡ್ಡಾಜೀ ಹಿಮಾಚಲ ಮತ್ತು ದಿಲ್ಲಿ ಸೋತಿದ್ದಾರೆ!!
ಅಮಿತ್‍ಭಾಯ್, ಇವೆರಡನ್ನೂ ಮತ್ತೆ ಗೆಲ್ಲಬಹುದು!!!

(ಮಂಜುಲ್‍, ಫೇಸ್‌ಬುಕ್)

***

ಅಲ್ಲದೆ ಹಿಮಾಚಲದಲ್ಲಿ ಗೆದ್ದವರಿಗೆ ಇನ್ನೂ ಒಂದು ಸಮಸ್ಯೆ -ಮುಖ್ಯಮಂತ್ರಿ ಹುದ್ದೆಗೆ ದಾವೇದಾರರ ಸಂಖ್ಯೆ- ಅದೂ ಈ ಅಮೃತ ಕಾಲದಲ್ಲಿ!

ಕಾಂಗ್ರೆಸ್‍ ಸಿಎಂ ಹುದ್ದೆ ಬಹಳ ಅಪರೂಪದಲ್ಲಿ ಅಪರೂಪ.
ಅದಕ್ಕೆ ಬೇರೆ ರಾಜ್ಯಗಳಿಂದ ದಾವೆಗಳು ಬರದಂತೆ ಖಚಿತಪಡಿಸಿಕೊಳ್ಳಿ!

(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

ಸದ್ಯಕ್ಕೆ ಆ ಸಮಸ್ಯೆಯನ್ನು ನಿಭಾಯಿಸಿದಂತೆ  ಕಾಣುತ್ತದೆ.

***

ಅತ್ತ, ಗುಜರಾತಿನಲ್ಲಂತೂ ಬೇರೆಯೇ ಕತೆ -ಅಲ್ಲಿ ಹಾಲಿ ಸಿಎಂ ಗಿಂತ, ಅಷ್ಟೇ ಏಕೆ ಹಾಲಿ ಪಿಎಂಗಿಂತಲೂ ಮಾಜಿ ಸಿಎಂದ್ದೇ ನಡೆಯುವುದು!

(ಪಿ.ಮಹಮ್ಮದ್, ವಾರ್ತಾಭಾರತಿ)

ಆದರೆ ಈ ಬಾರಿಯ ಅವರ ವಿಜಯದಲ್ಲಿ ಪ್ರತಿಸ್ಪರ್ಧಿ ಎಎಪಿ ಯ ಕೊಡುಗೆಯೂ ಗಮನಾರ್ಹವಾಗಿದೆ ಎಂಬುದು ಚುನಾವಣಾ ಫಲಿತಾಂಶಗಳ ವಿಶ್ಲೇಷಣೆಯಿಂದ ಕಂಡು ಬಂದಿದೆಯಂತೆ. ಸುಮಾರು 50 ಸೀಟುಗಳಲ್ಲಿ, ವಿಶೇಷವಾಗಿ ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‍ ಉತ್ತಮ ಪ್ರದರ್ಶನ ನೀಡಿದ್ದ ಸೌರಾಷ್ಟ್ರ ಪ್ರದೇಶದಲ್ಲಿ, ಎಎಪಿ ಯ ಸ್ಪರ್ಧೆಯಿಂದ ಆಳುವ ಪಕ್ಷಕ್ಕೆ ಪ್ರಯೋಜನವಾಗಿದೆಯಂತೆ-

ಕ್ಷಮಿಸಿ, ನಾನು ಕಾಂಗ್ರೆಸ್‍ ಮತದಾರ             ಪರವಾಗಿಲ್ಲ, ಎಎಪಿ ಗೆ ಬೆಂಬಲ ಕೊಡಿ

“ಫ್ರೀ ಪವರ್”ಗೆ?!                               ಹೌದು! 2024 ರಲ್ಲಿ “ಫ್ರೀ ಪವರ್”ಗೆ

(ಪುಕ್ಕಟೆ ವಿದ್ಯುತ್ತಿಗೆ?)                                      (ಪುಕ್ಕಟೆ ಅಧಿಕಾರಕ್ಕೆ)

(ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

***

ಪ್ರಚಾರದ ವೇಳೆ “2002ರಲ್ಲಿ ತಕ್ಕ ಪಾಟ ಕಲಿಸಿದ್ದೇವೆ”  ಎಂದು ಮಾನ್ಯ ಗೃಹಮಂತ್ರಿಗಳು  ಹೇಳಿದ್ದರು. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಪ್ರತಿಪಕ್ಷಗಳು ಮಾತ್ರವಲ್ಲ, ಹಲವು ಗಣ್ಯರೂ ದೂರಿದ್ದರು, ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಕೇಳಿದ್ದರು. ಅದೀಗ, ಪ್ರಚಾರ ಮುಗಿದು, ಮತದಾನ  ಮುಗಿದು, ಫಲಿತಾಂಶಗಳ ಸಂಭ್ರಮವೂ ಮುಗಿದು ಹೋದ ಮೇಲೆ  ಉಲ್ಲಂಘನೆಯೇನೂ ಆಗಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ-ಅದೂ ಅಧಿಕೃತವಾಗಿ ಅಲ್ಲ, ಆಯೋಗದ  ಒಬ್ಬ ಅಧಿಕಾರಿ ಮಾಧ್ಯಮಗಳಿಗೆ ಹಾಗೆಂದು ಹೇಳಿದ್ದಾರಂತೆ!

ಆಚಾರ ಸಂಹಿತೆ         ಮತ್ತು          ಚುನಾವಣಾ ಆಯೋಗ

ಇಗೋ ನಿಮ್ಮ ಆಸ್ತಿ-ಇಟ್ಟುಕೊಳ್ಳಿ. ಮುಂದೆ ಸ್ವಲ್ಪ ಗಟ್ಟಿಯಾದ ಆಚಾರ ಸಂಹಿತೆ ಮಾಡಿ,
ಇಲ್ಲವಾದರೆ ಪ್ರತಿ ಚುನಾವಣೆಯ ನಂತರ ಚಿಂದಿ-ಚಿಂದಿಯಾಗುತ್ತದೆ
(ರಾಜೇಂದ್ರ ಧೋಡಪ್‍ಕರ್, ಫೇಸ್‌ಬುಕ್)

***

ಆದರೂ, ಪ್ರತಿಪಕ್ಷಗಳು ಚುನಾವಣೆ ಗೆಲ್ಲಲು, ಶಾರ್ಟ್‍ಕಟ್‍ ರಾಜಕೀಯ, ಅಂದರೆ ಅಧಿಕಾರಕ್ಕೆ ಅಡ್ಡದಾರಿ ಹಿಡಿಯುವ ರಾಜಕೀಯ ಮಾಡುತ್ತವೆ -ಇದಕ್ಕೆ ದೇಶದ ತೆರಿಗೆದಾರರು ಬೆಲೆ ತೆರಬೇಕಾಗಿದೆ ಎಂದು ಪ್ರಧಾನ ಮಂತ್ರಿಗಳೇ ಖೇದ ವ್ಯಕ್ತಪಡಿಸಿದ್ದಾರಂತೆ.

“ಮತದಾರರು ಶಾರ್ಟ್‌ಕಟ್‌ ರಾಜಕೀಯವನ್ನು ಸೋಲಿಸಿದ್ದಾರೆ!”
(ಸತೀಶ ಆಚಾರ್ಯ , ಫೇಸ್‌ಬುಕ್‌)

ಗುಜರಾತಿನಲ್ಲಿ ಮಾತ್ರವೇ?  ಅಥವ ಹಿಮಾಚಲ ಪ್ರದೇಶ ಮತ್ತು ದಿಲ್ಲಿಯಲೂ ಕೂಡ ಸೋಲಿಸಿದ್ದಾರೆಯೇ? ಸ್ಪಷ್ಟಪಡಿಸಿಲ್ಲ!

ಈ ನಡುವೆ ಚಳಿಗಾಲದ ಅಧಿವೇಶನದಲ್ಲಿರುವ ಸಂಸತ್ತಿನಲ್ಲಿ ಹಲವು ವಿಚಾರಗಳು ಹೊರಬಂದಿವೆ.

ಕಳೆದ 8 ವರ್ಷಗಳಲ್ಲಿ ಸುಮಾರು 10 ಲಕ್ಷ ಕೋಟಿ ರೂ.ಗೂ ಮೀರಿ ಬ್ಯಾಂಕ್‍ ಸುಸ್ತಿ ಸಾಲಗಳನ್ನು ರೈಟ್‍ ಆಫ್ , ಅಂದರೆ, ಬ್ಯಾಂಕ್‍ ಲೆಕ್ಕ ಪತ್ರಗಳಿಂದ ಹೊರಗಿಡಲಾಗಿದೆ, ಅದರಲ್ಲಿ ಬಹಳ ಪ್ರಯತ್ನಗಳ ನಂತರ ಸುಮಾರು 1.3 ಲಕ್ಷ ಕೋಟಿ ರೂ. ವಸೂಲಿಯಾಗಿದೆ ಎಂದು  ಸಂಸತ್ತಿನಲ್ಲಿ ಹೇಳಲಾಗಿದೆ, ಅಂದರೆ ಸುಮಾರು 8.7ಲಕ್ಷ ಕೋಟಿ ರೂ. ‘ಕಾರ್ಪೊರೇಟ್‍ ಸಾಲಮನ್ನಾ’ ಆಗಿದೆ ಎಂದು ಸರಕಾರವೇ ಒಪ್ಪಿಕೊಂಡಂತಾಗಿದೆ.

ಇನ್ನೊಂದೆಡೆಯಲ್ಲಿ, ಅಲ್ಪಸಂಖ್ಯಾತ ಸಮುದಾಯಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಸಾಚಾರ್ ಸಮಿತಿಯ ಶಿಫಾರಸಿನಂತೆ ದೇಶದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಆಝಾದ್‍ರವರ ಸ್ಮರಣೆಯಲ್ಲಿ ಕೊಡುತ್ತಿದ್ದ ಫೆಲೋಷಿಪ್‍ಗಳನ್ನು ರದ್ದು ಮಾಡಿರುವುದಾಗಿಯೂ ಸಂಸತ್ತಿನಲ್ಲಿ ಪ್ರಕಟಿಸಲಾಗಿದೆ. ಜತೆಗೆ, ಕೇಂದ್ರ ಸರಕಾರದ ಇಲಾಖೆಗಳಲ್ಲಿ ಸುಮಾರು 10 ಲಕ್ಷ,  ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 33% ದಷ್ಟು ಹುದ್ದೆಗಳನ್ನು ಭರ್ತಿ ಮಾಡಿಲ್ಲ ಎಂದೂ ತಿಳಿಸಲಾಗಿದೆ. ಇದಕ್ಕೆ ಮೊದಲು ಶಾಲಾಶಿಕ್ಷಣದಲ್ಲಿನ ಸ್ಕಾಲರ್ಶಿಪ್‍ಗಳನ್ನೂ ಕಡಿತ ಮಾಡುವ ಸುದ್ದಿ ಬಂದಿತ್ತು.

(ಪಿ.ಮಹಮ್ಮದ್, ಫೇಸ್‍ಬುಕ್)

ಜತೆಗೆ, ಕಳೆದ 8 ವರ್ಷಗಳಲ್ಲಿ ಸರಕಾರದ ಜಾಹೀರಾತುಗಳಿಗೆ 6491 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದೂ ಸಂಸತ್ತಿನಲ್ಲಿ ಸರಕಾರ ಮಾಹಿತಿ ನೀಡಿದೆ.

“ಜಾಹೀರಾತು ಮುದ್ರಿಸಲು ಹಣ ಕೊಡುತ್ತೀರೆಂದು ಕೇಳಿದ್ದೇನೆ.
ನನ್ನ ಬನಿಯಾನ್ ‍ಮೇಲೆ ಒಂದು ಮುದ್ರಿಸಿ ಬಿಡಿ”
(ಕೀರ್ತೀಶ್‍, ಬಿಬಿಸಿ ನ್ಯೂಸ್‍ ಹಿಂದಿ)

ಇಲ್ಲ, ಮಾರಾಯ್ರೆ, ಇವು ಕಾರ್ಪೊರೇಟ್‍ ಮಾಧ್ಯಮಗಳಿಗೆ ಮಾತ್ರ, ನಿಮಗೆಲ್ಲ ತಿಳಿಸಲಿಕ್ಕೆಂದು!

ಅಲ್ಲದೆ, ಇವೆಲ್ಲ ಪ್ರಧಾನಿಗಳ ಶಾರ್ಟ್‍ಕಟ್‍  ರಾಜಕೀಯದ ಪಟ್ಟಿಯಲ್ಲಿ ಇದ್ದಂತಿಲ್ಲ.

***

ಪ್ರಧಾನಿಗಳನ್ನು ಪ್ರಚಾರ ಕಾರ್ಯದಲ್ಲಿ ಮಗ್ನರಾಗುವಂತೆ ಮಾಡಿದ  ಚುನಾವಣೆಗಳ ಫಲಿತಾಂಶ ಬರುತ್ತಿದ್ದಂತೆಯೇ , ಈಗ ಜಿ-20ರ ಅಧ್ಯಕ್ಷತೆಯ ಪ್ರಚಾರ ಕಾರ್ಯ ಆರಂಭವಾಗಿದೆ. ಜಿ-20ರ ಅಧ್ಯಕ್ಷ ಪೀಠ  ಸರದಿಯ ಪ್ರಕಾರ ಭಾರತದ ಪಾಲಿಗೆ ಬಂದಿದ್ದರೂ, ಇದು ನಮ್ಮ ಪ್ರಧಾನಿಗಳು ಗಳಿಸಿರುವ ಅಂತರ್ರಾಷ್ಟ್ರೀಯ ಖ್ಯಾತಿಯ ಫಲಿತ ಎನ್ನುವಂತೆ ಬಿಂಬಿಸಲಾಗುತ್ತಿದೆ.

ಭಾರತದ ಜಿ-20 ಅಧ್ಯಕ್ಷಗಿರಿಯ ಆಚರಣೆಯ ಭಾಗವಾಗಿ ಜಿ-20ರ ಕೆಲವು ದೇಶಗಳ ಗಣ್ಯರ ಮುಂಬೈ ಭೇಟಿಗೆ ಏರ್ಪಾಟು ಮಾಡಲಾಗಿದೆ. ಇದಕ್ಕಾಗಿ ಅವರ ಭೇಟಿಯ ಸಮಯದಲ್ಲಿ ಅವರು ಹೋಗುವ ದಾರಿಯಲ್ಲಿ ಕೊಳೆಗೇರಿಗಳನ್ನು ಮರೆಮಾಡಲು ದೊಡ್ಡ-ದೊಡ್ಡ ಪರದೆಗಳನ್ನು ಕಟ್ಟಲಾಗಿದೆ, ಇವುಗಳನ್ನು ಜಾಹೀರಾತು ಫಲಕಗಳಾಗಿಯೂ ಬಳಸಲಾಗಿದೆ ಎಂದೂ ವರದಿಯಾಗಿದೆ- ಈ ಹಿಂದೆ ಅಮೆರಿಕಾದ  ಅಧ್ಯಕ್ಷ ಟ್ರಂಪ್ ರವರ ಅಹಮದಾಬಾದ್‍ ಭೇಟಿ ಕಾಲದಲ್ಲಿ ಹೀಗೇ ಮಾಡಲಾಗಿತ್ತು ಎಂಬ ನೆನಪು. ತುರ್ತು ಪರಿಸ್ಥಿತಿಯ  ಗರೀಬಿ ಹಟಾವೋದ ಅಚ್ಛೇ ದಿನ್‍ಗಳ/ಅಮೃತ ಕಾಲದ ಆವೃತ್ತಿ!?

ಗರೀಬಿ ಛುಪಾವೋ       –       ಸುಸ್ವಾಗತ ಜಿ 20

“ಸಕಾರಾತ್ಮಕವಾಗಿ ಯೋಚಿಸು!  ಅವರು ನಮ್ಮನ್ನು
ಈಗ ಪ್ಯಾ಼ಷನ್ ಆಗಿರುವ ವೇಷ-ಭೂಷಣದಲ್ಲಿ ಅಡಗಿಸುತ್ತಿದ್ದಾರೆ!
(ಸತೀಶ ಆಚಾರ್ಯ, ಫೇಸ್‌ಬುಕ್)

***

ಅದೇ ಮುಂಬೈಯಿಂದ  ಇದಕ್ಕೆ ಮೊದಲೇ ಒಂದು ಸುದ್ದಿ ಬಂದಿತ್ತು. ಮಹಿಳೆಯರ ಸುರಕ್ಷಿತತೆಗೆಂದು ‘ನಿರ್ಭಯಾ ನಿಧಿ’ಯಿಂದ ಖರೀದಿಸಿದ 47 ಬೊಲೆರೊ ಕಾರುಗಳನ್ನು ಕೇಂದ್ರದ  ಪ್ರಧಾನಿಗಳ  ಪ್ರಕಾರ ‘ಶಾರ್ಟ್‍ಕಟ್‍ ರಾಜಕೀಯ’ ಎನಿಸಿಕೊಳ್ಳದ ವಿಧಾನದಿಂದ ಮಹಾರಾಷ್ಟ್ರದಲ್ಲಿ ರಚನೆಗೊಂಡ ಸರಕಾರದ ಮುಖ್ಯಮಂತ್ರಿ ಶಿಂಧೆ ಬಣದ ಮಂತ್ರಿಗಳಿಗೆ, ಶಾಸಕರಿಗೆ, ಸಂಸದರಿಗೆ ಭದ್ರತೆ ಒದಗಿಸಲು ಬಳಸಲಾಗಿದೆ ಎಂಬುದೇ ಆ ಸುದ್ದಿ.

ಸಹಾಯ ಮಾಡಿ”                 “ನಾನು ಚೆನ್ನಾಗಿದ್ದೇನೆ, ಥ್ಯಾಂಕ್ಸ್!’

(ಸಂದೀಪ ಅಧ್ವರ್ಯು,ಫೇಸ್‍ಬುಕ್)

ಮಹಿಳೆಯರ ಸುರಕ್ಷಿತತೆಗೆ ಕ್ರಮಗಳನ್ನು ಕೈಗೊಳ್ಳಲೆಂದು ಈ ನಿಧಿ ನಿರ್ಮಾಣವಾಗಲು ಕಾರಣವಾದ, ದಿಲ್ಲಿಯ ಸಮೀಪದಲ್ಲಿ ನಡೆದ ‘ನಿರ್ಭಯಾ’ ಘಟನೆ ಮತ್ತು ಅದಕ್ಕೆ ದೇಶವ್ಯಾಪಿ ಆಕ್ರೋಶಕ್ಕೆ ಈ ಡಿಸೆಂಬರ್ 16ರಂದು ಹತ್ತು ವರ್ಷಗಳಾಗಿವೆ.

***

ಪ್ರಧಾನಿಗಳ  ‘ಶಾರ್ಟ್‌ ಕಟ್‍ ರಾಜಕೀಯ’ ದ ಪಟ್ಟಿಯಲ್ಲಿರದ ವಿಧಾನದಿಂದ ರಚನೆಗೊಂಡ ಮತ್ತೊಂದು, ಅಂದರೆ  ಮಧ್ಯಪ್ರದೇಶದ ಸರಕಾರದ ಗೃಹಮಂತ್ರಿಗಳು ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ಕಳೆದ ಜುಲೈನಲ್ಲಿ ಅವರು ಒಬ್ಬ ಚಲನಚಿತ್ರಕಾರ್ತಿಯ ‘ಕಾಳಿ’ ಕುರಿತ ಟ್ವಿಟರನ್ನು ನಿಷೇಧಿಸಬೇಕೆಂದು ಗದರಿದರು, ಅಕ್ಟೋಬರಿನಲ್ಲಿ ‘ಆದಿಪುರುಷ್‍’ ಎಂಬ ಚಿತ್ರ ತಮ್ಮಂತವರ ‘ಭಾವನೆಗಳನ್ನು ಘಾಸಿಗೊಳಿಸಿದೆ’ ಎಂದು ಮರುಗಿದರು, ಈಗ ‘ಪಠಾಣ್’ ಚಿತ್ರದ ಹಾಡೊಂದು ‘ಹೊಲಸು ಮನೋಭಾವ’ದ್ದೆಂದು ಕೂಗಾಡಿದ್ದಾರೆ. ಬೆಂಬಲಿಗರು ಈ ಬಗ್ಗೆ ಎಂದಿನಂತೆ ಟ್ರೋಲ್ ದಂಡಯಾತ್ರೆ ನಡೆಸುತ್ತಿದ್ದಾರೆ.

ಆದರೆ ಇವರ ರಾಜ್ಯ ಸತತ ಎರಡನೇ ವರ್ಷವೂ ಮಕ್ಕಳ ವಿರುದ್ಧ ಅಪರಾಧಗಳಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ದಾಖಲಾಗಿದೆ. ಈ ಮಕ್ಕಳ ಕಳ್ಳರ/ಕ್ರಿಮಿನಲ್‍ಗಳ ಬಗ್ಗೆ ಏನಾದರೂ ಮಾಡಬೇಕು, ಅಥವ ಏನಾದರೂ ಹೇಳಬೇಕು ಎಂದೂ  ಈ ಗೃಹಮಂತ್ರಿಗಳಿಗೆ  ಅನಿಸಿಲ್ಲ  ಎಂಬ ಸಂಗತಿಯತ್ತ ಇದೇ ವ್ಯಂಗ್ಯಚಿತ್ರಕಾರರು ಗಮನ ಸೆಳೆಯುತ್ತಾರೆ.

“ದೇವರ ದಯೆ, ನಾವು ಫಿಲಂ ಸ್ಟಾರುಗಳಲ್ಲ”
(ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

***

ಕೊನೆಯದಾಗಿ, ಮಾನ್ಯ ಪ್ರಧಾನಿಗಳಿಗೆ , ಅಮೃತ ಕಾಲಕ್ಕೆಂದು ಹೊಸ 56 ಇಂಚುಗಳ ಟಿವಿ ಕೊನೆಗೂ ದಕ್ಕುತ್ತಿದೆ..

(ಸುರೇಂದ್ರನ್, ಫೇಸ್‍ಬುಕ್)

Donate Janashakthi Media

Leave a Reply

Your email address will not be published. Required fields are marked *