ವಿಜಯಪುರ: ಜೆಸಿಬಿ ಹೇಳಿಕೆ ವಿಚಾರಕ್ಕೆ ಸಂಬಂಧ, ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ. ನಾನೇನಾದರೂ ಕರ್ನಾಟಕದ ಮುಖ್ಯಮಂತ್ರಿಯಾದರೆ, ಸಾವಿರ ಜೆಸಿಬಿಗಳನ್ನು ಆರ್ಡರ್ ಮಾಡುತ್ತೇನೆ. ಪ್ರತಿ ತಾಲ್ಲೂಕಿಗೂ 35 ಜೆಸಿಬಿಗಳನ್ನು ಇರಿಸುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದರು.
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬುಲ್ಡೋಜರ್ ಮಾದರಿಯನ್ನು ಕರ್ನಾಟಕದಲ್ಲೂ ಜಾರಿ ಮಾಡುವ ಬಗ್ಗೆ ಯತ್ನಾಳ್ ಅವರು ಮಾತನಾಡಿದ್ದರು.
ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಪರ ಹೋರಾಟಗಾರ ಶಿವಾನಂದ ಗುಂಡನವರ್ ಅವರು, ದೇವ್ರೆ.. ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಮೊದಲ ಆ ನಿಮ್ಮ ಮತ ಕ್ಷೇತ್ರದ ಜುಮನಾಳ to ಸಾರವಾಡ ರಸ್ತಿಯಲ್ಲಿರುವ ರಸ್ತೆ ಗುಂಡಿ ಮುಚ್ಚುವುದಕ್ಕೆ ಒಂದಾದರು JCB ತರ್ಸಿ ರಸ್ತೆ ಸರಿ ಮಾಡಿ. ಆ ನಂತರ ನಿಮ್ಮ ಹೇಳಿಕೆಗೆ ಅರ್ಥ ಬಂದೀತು ಎಂದಿದ್ದಾರೆ.
ಧರ್ಮದ ಕಾವಲ್ಲಿ ಎಷ್ಟು ದಿನವೆಂದು ರಾಜಕೀಯ ಮಾಡಿ ಜನಗಳನ್ನು ಹಿಂದಕ್ಕೆ ತಳ್ಳುವಿರಿ. ಮೊದಲು ರಸ್ತೆ ಸರಿ ಮಾಡಿ ನಿಮ್ಮ ಕ್ಷೇತ್ರದ ಜನಗಳಿಗೆ ನ್ಯಾಯ ಒದಗಿಸಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಯಚೂರು| ಹೆಚ್ಚುತ್ತಿರುವ ಬೆಕ್ಕು ಜ್ವರ: ಜಿಲ್ಲೆಯಲ್ಲಿ 38 ಬೆಕ್ಕು ಸಾವು
ಇದಕ್ಕೆ ಅಶೋಕ್ ಎನ್ನುವವರು ಇದು ಕಾಲು ಎಳೆಯುವ ಕೆಲಸ. ನಿಮ್ಮಂತ ಕನ್ನಡಗರಿಗೆ ನಾನೊಂದು ಓಪನ್ ಚಾಲೆಂಜ್ ಮಾಡ್ತೀನಿ. ಮುಸ್ಲಿಮರು ಜಾಸ್ತಿ ಇರುವ ಏರಿಯಾದಾಗ ಮನೆ ಮಾಡಿ ನೀವು ನಿಮ್ಮ ಫ್ಯಾಮಿಲಿ ಜೊತೆ ಒಂದಿಷ್ಟು ವರ್ಷ ವಾಸ ಮಾಡಿ ಇದಾದ ನಂತರ ನಿಮ್ಮ ಮನಸ್ಥಿತಿ ಹೇಗೆ ಇರುತ್ತೆ ಹೇಳಿ. ಕೇವಲ ಕನ್ನಡ ಮಾತಾಡಿ ಮತ್ತೇ ಎಲ್ಲಾ ಹಿಂದೂ ಆಚರಣೆಗಳನ್ನು ಮಾಡಿ ಎಂದು ಸವಾಲು ಹಾಕಿದ್ದಾರೆ.
ವಿಜಯಪುರದಲ್ಲಿ ರಸ್ತೆ ಅಭಿವೃದ್ಧಿಗೆ 10 ಕೋಟಿ ರೂ.: ಇನ್ನು ವಿಜಯಪುರದಲ್ಲಿ ರಸ್ತೆ ಹಾಗೂ ಚರಂಡಿಗಳ ಅಭಿವೃದ್ಧಿಗೆ ಬರೋಬ್ಬರಿ 10 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಈ ಬಗ್ಗೆ ಈಚೆಗೆ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಈ ಭಾಗದ ಮುಖ್ಯರಸ್ತೆಗಳು ಹಾಗೂ ಒಳಭಾಗದ ರಸ್ತೆಗಳನ್ನು ಅಭಿವೃದ್ಧಿ ಮಾಡುವುದಾಗಿ ಅವರು ಹೇಳಿದ್ದಾರೆ.
ಈ ಕಾಮಗಾರಿಗಳಿಗಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯಿಂದ 10 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಇಷ್ಟರಲ್ಲೇ ಭೂಮಿ ಪೂಜೆಯನ್ನು ಮಾಡಿ ಕಾಮಗಾರಿಗಳನ್ನು ಪ್ರಾರಂಭ ಮಾಡುವುದಾಗಿ ಅವರು ಹೇಳಿದ್ದರು. ಆದರೆ ಅವರು ಜೆಸಿಬಿಯ ಬಗ್ಗೆ ಹೇಳಿಕೆ ಕೊಡುತ್ತಿದ್ದಂತೆಯೇ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಇದನ್ನೂ ನೋಡಿ: ತರಬೇತಿ! ತರಬೇತಿ! ಕಲಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ಶಿಕ್ಷಕ! – ಸಿ.ಆರ್.ಬಾಬುಖಾನ್ ಮತ್ತು ಗುರುರಾಜ ದೇಸಾಯಿ ಮಾತುಕತೆ