ರಾಜ್ಯಮಟ್ಟದ ಕ್ಲಾಸಿಕ್ ಪವರ್ ಲಿಫ್ಟಿಂಗ್ ಸ್ಪರ್ಧೆ :ವಿಜಯನಗರದಿಂದ ಏಳು ಕ್ರೀಡಾಪಟುಗಳು ಭಾಗಿ

ಹೊಸಪೇಟೆ : ರಾಜ್ಯದಲ್ಲಿ ಇದೇ ಮೊಟ್ಟಮೊದಲ ಭಾರಿಗೆ ರಾಜ್ಯಮಟ್ಟದ ಕ್ಲಾಸಿಕ್ ಪವರ್ ಲಿಫ್ಟಿಂಗ್ ಸ್ಪರ್ಧೆಯನ್ನು ಮಾರ್ಚ್ 15 ಮತ್ತು 16 ರಂದು ಎರೆಡು ದಿನಗಳ ಕಾಲ ಮಂಗಳೂರಿನ ಉರ್ವ ಸ್ಟೋರ್ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ.

ಈ ಸ್ಪರ್ಧೆಯಲ್ಲಿ ಹೊಸಪೇಟೆಯ ವಿಕ್ಟರಿ ಜಿಮ್ ನ ಏಳು ಜನ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಜೂನಿಯರ್ ವಿಭಾಗದಲ್ಲಿ ಗೌಸ್ ಪೀರ್, ದೀಪಕ್ ಕೆ ಎಸ್, ಭರತ್ ಜಿ, ಅಬ್ದುಲ್ಲ ಹಾಗೂ ಸೀನಿಯರ್ ವಿಭಾಗದಲ್ಲಿ ಜೈಶರಣ, ಹುಸೇನ್ ಬಾಷಾ ಮತ್ತು ಹಸೇನ್ ಈ ಏಳು ಜನ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಪದಕ ಗಳಿಸಿ ವಿಜಯನಗರ ಜಿಲ್ಲೆಗೆ ಕೀರ್ತಿ ತರಲಿ ಹಾಗೆ ಇದೇ ರೀತಿ ಅವರ ಸಾಧನೆ ಮುನ್ನಡೆಯಲಿ ಎಂದು ವಿಕ್ಟರಿ ಜಿಮ್ ನ ತರಬೇತುದಾರರಾದ ವಲಿಬಾಷಾ, ಹೊಸಪೇಟೆ ನಗರದ ಕ್ರೀಡಾಭಿಮಾನಿಗಳು ಮತ್ತು ಕ್ರೀಡಾ ಪ್ರೋತ್ಸಾಹಕರು ಶುಭಕೋರಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *