ಕೋವಿಡ್‌ ನಿರ್ವಹಣೆ : ಮೃತರ ವಿಚಾರದಲ್ಲಿ ಸುಳ್ಳು ಹೇಳಿ, ತನ್ನದೆ ಇಲಾಖೆಯ ಅಂಕಿ ಅಂಶಗಳಿಂದ ಬೆತ್ತಲಾದ ಗುಜರಾತ್‌ ಮಾಡೆಲ್

ಅಹ್ಮದಾಬಾದ್:‌ ಗುಜರಾತ್‌ ರಾಜ್ಯದಲ್ಲಿನ ಕೋವಿಡ್‌ ಸಾಂಕ್ರಾಮಿಕ ದುಸ್ಥಿತಿಗಳ ಕುರಿತಾದಂತೆ ಗುಜರಾನ್‌ ನ ಖ್ಯಾತ ದಿನಪತ್ರಿಕೆ ‘ದಿವ್ಯ ಭಾಸ್ಕರ್‌’ ವಿಮರ್ಶಾತ್ಮಕ ವರದಿ ಪ್ರಕಟಿಸಿದ್ದು,  71 ದಿನಗಳಲ್ಲಿ ಗುಜರಾತ್‌ ನಲ್ಲಿ 1.23 ಲಕ್ಷ ಮರಣ ಪ್ರಮಾಣ ಪತ್ರಗಳನ್ನು ನೀಡಲಾಗಿದೆ. ಆದರೆ ಅಧಿಕೃತವಾಗಿ ಕೇವಲ 4,218 ಸಾವಿನ ವರದಿಯನ್ನು ಸರಕಾರ ಮಾಡಿದೆ ಎಂದು ದಿವ್ಯ ಭಾಸ್ಕರ್‌ ತನ್ನ ಮುಖಪುಟದಲ್ಲಿ ಪ್ರಕಟಿಸಿ,  ಸರಕಾರದ ಅವ್ಯಸವಸ್ಥೆಯ ಕುರಿತಾದಂತೆ ಬೆಳಕು ಚೆಲ್ಲಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ನೀಡಲಾದ 58,000 ಕ್ಕೆ ವ್ಯತಿರಿಕ್ತವಾಗಿ ಈ ವರ್ಷ ಮಾರ್ಚ್ 1 ರಿಂದ ಮೇ 10 ರವರೆಗೆ 1.23 ಲಕ್ಷ ಮರಣ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಸಂಖ್ಯೆಗಳನ್ನು “ಮರೆಮಾಚಿದ” ರಾಜ್ಯ ಸರ್ಕಾರವು ಈಗ ತನ್ನದೇ ಆದ ಇಲಾಖೆಗಳ ಕಾರಣದಿಂದ ಬಹಿರಂಗಗೊಂಡಿದೆ ಎಂದು ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ.

“ಗುಜರಾತ್ ಸರ್ಕಾರವು ಸಾವಿನ ಡೇಟಾವನ್ನು ಮರೆಮಾಡುತ್ತಿದೆ ಎಂದು ಹೇಳುವುದು ಅಸಮರ್ಪಕವಾಗಿದೆ” ಎಂದು ರಾಜ್ಯ ಗೃಹ ಸಚಿವ ಪ್ರದೀಪ್ಸಿಂಗ್ ಜಡೇಜಾ ರವರು ದಿವ್ಯ ಭಾಸ್ಕರ್‌ ವರದಿಯನ್ನು ತಿರಸ್ಕರ ಮಾಡಿದ ನಂತರದಲ್ಲಿ ಇದು ವ್ಯಾಪಕ ಚರ್ಚೆಗೆ ಒಳಗಾಯಿತು. ಬಹಳಷ್ಟುಜನ ಇದನ್ನು ಟ್ವಿಟರ್‌ ಮತ್ತು ಫೆಸ್ಬುಕ್‌ ನಲ್ಲಿ ಹಾಕಲಾರಂಭಿಸಿದರು.  ಗುಜರಾತ್‌ ಸರಕಾರ ಸಾವನ್ನು ಮುಚ್ಚಿಡುತ್ತದೆ ಎಂದು ಟ್ವಿಟರ್‌ ನಲ್ಲಿ ಟ್ರೆಂಡ್‌ ಮಾಡಲಾಯಿತು.

ದಿವ್ಯ ಭಾಸ್ಕರ್‌  ಪತ್ರಿಕೆಯ ಈ ಸುದ್ದಿಯನ್ನು ಪತ್ರಕರ್ತ ದೀಪಕ್ ಪಟೇಲ್ ಅವರು ಗುಜರಾತಿಯಿಂದ ಇಂಗ್ಲಿಷ್‌ಗೆ ಟ್ವಿಟರ್ ಥ್ರೆಡ್‌ನಲ್ಲಿ ಅನುವಾದಿಸಿದ್ದಾರೆ. ಕಳೆದ ವರ್ಷಕ್ಕಿಂತ ಈ ಅಂಕಿ ಅಂಶಗಳು ದ್ವಿಗುಣಗೊಂಡಿದ್ದರೂ, ಮಾರ್ಚ್ 1 ಮತ್ತು ಮೇ 10 ರ ನಡುವೆ ಕೇವಲ 4,218 ಕೋವಿಡ್ ಸಾವುಗಳು ಸಂಭವಿಸಿವೆ ಎಂದು ರಾಜ್ಯ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ಅಹಮದಾಬಾದ್ ನಗರದಲ್ಲಿ, 2020 ರಲ್ಲಿ 71 ದಿನಗಳ ಅವಧಿಯಲ್ಲಿ 7,786 ಮರಣ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಈ ವರ್ಷ ನಗರವು ಇದೇ ಅವಧಿಯಲ್ಲಿ 13,593 ಮರಣ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಅಹಮದಾಬಾದ್‌ನ ಅಧಿಕೃತ ಕೋವಿಡ್ ಸಾವಿನ ಸಂಖ್ಯೆ ಕೇವಲ 2,126 ಆಗಿದೆ. ಗುಜರಾತ್‌ನ ಇತರ ನಗರಗಳಿಗೂ ಇದೇ ರೀತಿಯ ಲೆಕ್ಕಾಚಾರಗಳನ್ನು ರೂಪಿಸಲಾಗಿದೆ ಎಂದು ವರದಿ ತಿಳಿಸಿದೆ.

“ಸೂರತ್ ನಗರವು ಕಳೆದ  71 ದಿನಗಳ ಅವಧಿಯಲ್ಲಿ 2,769 ಮರಣ ಪ್ರಮಾಣಪತ್ರಗಳನ್ನು ನೀಡಿದೆ” ಎಂದು  ದೀಪಕ್‌ ಪಟೇಲ್ ಹೇಳಿದ್ದಾರೆ “ಇದು ಈ ವರ್ಷದ ಇದೇ ಅವಧಿಯಲ್ಲಿ 8,851 ಮರಣ ಪ್ರಮಾಣಪತ್ರಗಳನ್ನು ನೀಡಿದೆ. ಗಮನಿಸಿ: ಈ  71 ದಿನಗಳ ಅವಧಿಯಲ್ಲಿ ಸೂರತ್ ನಗರದಲ್ಲಿ ಕೋವಿಡ್‌ನಿಂದ 1,074 ಜನರು ಸಾವನ್ನಪ್ಪಿದ್ದಾರೆ ಎಂದು ಗುಜರಾತ್ ಸರ್ಕಾರದ ಡೇಟಾ ಹೇಳುತ್ತದೆ. ”

ಇದನ್ನೂ ಓದಿ : ಮರದ ಮೇಲೆ 11 ದಿನ ಐಸೋಲೇಟ್ ಆದ ವಿದ್ಯಾರ್ಥಿ – ಹಳ್ಳಿಗಾಡಿನ ಕರಾಳ ನೋಟ

ರಾಜ್‌ಕೋಟ್, 2021 ರಲ್ಲಿ 71 ದಿನಗಳ ಅವಧಿಯಲ್ಲಿ 10,878 ಮರಣ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಆದಾಗ್ಯೂ, ಆ ಸಮಯದಲ್ಲಿ ಕರೋನವೈರಸ್‌ನಿಂದಾಗಿ ಕೇವಲ 288 ಮಂದಿ ಸಾವನ್ನಪ್ಪಿದ್ದಾರೆ ಎಂದು  ಸರಕಾರ ಸುಳ್ಳು ಲೆಕ್ಕ ತೋರಿಸುತ್ತಿದೆ.

ಒಟ್ಟಾರೆ ಗುಜರಾತ್‌ ನ್ನು ಮಾಡಲ್‌ ಆಗಿ ಬಿಂಬಿಸಲು ಹೋರಟಿದ್ದ ಮೋದಿ & ಅವರ ತಂಡಕ್ಕೆ ಈ ಘಟನೆಗಳು ಸಾಕಷ್ಟು ಮುಜುಗರ ತರುತ್ತಿವೆ.  ಕೋವಿಡ್‌ ನಿರ್ವಹಣೆಯಲ್ಲಿ ಗುಜರಾತ್‌ ಸರಕಾರ ಸಾಕಷ್ಟು ವಿಫಲವಾಗಿದೆ. ಆದರೂ ತನ್ನ ವೈಫಲ್ಯವನ್ನು ಮರೆ ಮಾಚಿಕೊಳ್ಳಲು ಸುಳ್ಳು ಲೆಕ್ಕ ತೋರಿಸಲು ಹೋಗಿ, ತನ್ನದೆ ಇಲಾಖೆಯ ಕೈಯಲ್ಲಿ ಬಿಜೆಪಿ ನೇತೃತ್ವದ ಗುಜರಾತ್‌ ಸರಕಾರ ಬೆತ್ತಲಾಗಿದೆ.

Donate Janashakthi Media

Leave a Reply

Your email address will not be published. Required fields are marked *