ವಿದ್ಯಾರ್ಥಿಗಳಿಂದ ‘ರಾಜ್ಯವ್ಯಾಪಿ ಆಗ್ರಹ ದಿನʼ : ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ಆಕ್ರೋಶ

  • ಪಠ್ಯಪುಸ್ತಕಗಳಿಂದ ಮಹಾನ್ ವ್ಯಕ್ತಿಗಳ ಆಶಯ, ಚಿಂತನೆ, ಮೌಲ್ಯ ಹಾಗೂ ಘನತೆಯನ್ನು ನಾಶಗೊಳಿಸಲು ನಾವು ಬಿಡುವುದಿಲ್ಲ
  • ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರ್ಕಾರವು ಶೈಕ್ಷಣಿಕ ಪಠ್ಯಕ್ರಮ ರಚನೆಯಲ್ಲಿ ಹಸ್ತಕ್ಷೇಪ ನಡೆಸಬಾರದು

ಬೆಂಗಳೂರು : ನಗರದ ಫ್ರೀಡಂ ಪಾರ್ಕಿನಲ್ಲಿ ಎಐಡಿಎಸ್ಒ ಬೆಂಗಳೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ‘ವಿದ್ಯಾರ್ಥಿಗಳ ಆಗ್ರಹ ದಿನ ‘ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಜ್ಯವ್ಯಾಪಿ ನಡೆದ ಪ್ರತಿಭಟನೆಗೆ ಹಲವು ಗಣ್ಯರು ಸಾಹಿತಿಗಳು, ಬರಹಗಾರರು, ಉಪನ್ಯಾಸಕರು ಮತ್ತು ಸಾವಿರಾರು ವಿಧ್ಯಾರ್ಥಿಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಬಾಗವಹಿಸಿದ್ದರು.

ಪಠ್ಯ ಪುಸ್ತಕ ಪರಿಷ್ಕರಣೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುತ್ತಾ ಪ್ರತಿಭಟನೆ ನಡೆಸಿದ ನೂರಾರು ವಿದ್ಯಾರ್ಥಿಗಳು, ಹಾಗೂ ಜನ ಸಾಮಾನ್ಯರು. ‘ ಕಳೆದ ವರ್ಷದ ಪಠ್ಯ ಪುಸ್ತಕಗಳನ್ನೇ ಶಾಲೆಗಳಿಗೆ ಒದಗಿಸಿ ‘, ‘ ಕೋಮು ವೈಷಮ್ಯ ಹರಡುವ ಪುಸ್ತಕಗಳನ್ನು ತಿರಸ್ಕರಿಸಿ ‘, ‘ ಮಹಾನ್ ವ್ಯಕ್ತಿಗಳ ಆಶಯಗಳನ್ನು ನಮ್ಮಿಂದ ದೂರ ಮಾಡಲಾಗದು ‘ ಎಂಬ ಘೋಷಣೆಗ ಮೂಲಕ  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ‘ರಾಜ್ಯವ್ಯಾಪಿ ವಿದ್ಯಾರ್ಥಿಗಳ ಆಗ್ರಹ ದಿನ ‘ ಕ್ಕೆ ಉಪನ್ಯಾಸಕರು ಬೆಂಬಲ ಸೂಚಿಸುತ್ತಾ,  ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

 

ಸಭೆಯ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ‘ ಪಠ್ಯ ಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ಸರ್ಕಾರವು ಮಹಾನ್ ವ್ಯಕ್ತಿಗಳ ಆಶಯ, ಮೌಲ್ಯ, ಘನತೆಯನ್ನು ಗಾಳಿಗೆ ತೂರುವ ಕೆಲಸ ಮಾಡಿದೆ. ತನ್ನ ಸಿದ್ಧಾಂತಕ್ಕೆ ಸರಿ ಹೊಂದುವ ಪಾಠವನ್ನು ಅಥವ ಅಂತಹ ವ್ಯಕ್ತಿಗಳ ಕುರಿತ ಲೇಖನವನ್ನು ಪ್ರಸ್ತುತ ವರ್ಷದ ಪಠ್ಯಕ್ರಮದಲ್ಲಿ ತುರುಕಿಸಿದ್ದಾರೆ. ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರ್ಕಾರವು ಶೈಕ್ಷಣಿಕ ಪಠ್ಯಕ್ರಮ ರಚನೆಯಲ್ಲಿ ಹಸ್ತಕ್ಷೇಪ ನಡೆಸಬಾರದು. ಇದು ನಮ್ಮ ಮೊದಲ ಆಕ್ಷೇಪ!! ಈ ಕೂಡಲೇ ಸರ್ಕಾರ ಪಠ್ಯಕ್ರಮ ರಚನೆಯ ಪ್ರಕ್ರಿಯೆಯಿಂದ ಕೈ ತೆಗೆಯಬೇಕು. ಅದನ್ನು ಸಂಪೂರ್ಣವಾಗಿ ರಾಜ್ಯದ ಶಿಕ್ಷಣ ತಜ್ಞರು, ಉಪನ್ಯಾಸಕರು, ಸಾಹಿತಿಗಳು, ಬರಹಗಾರರು ಇವರ ನಿಯಂತ್ರಣಕ್ಕೆ ಬಿಡಬೇಕು. ಆದರೆ ರಾಜ್ಯ ಬಿಜೆಪಿ ಸರ್ಕಾರವು ತನ್ನ ರಾಜಕೀಯ ಹಿತಾಸಕ್ತಿಗಾಗಿ, ಪರಿಷ್ಕರಣಾ ಸಮಿತಿಯ ಮೂಲಕ ತನ್ನ ಅಜೆಂಡಾವನ್ನು ಪಾಠದಲ್ಲಿ ತುರಿಕಿಸಿದೆ ಎಂದರು.

ಸ್ವಾತಂತ್ಯ ಹೋರಾಟದಲ್ಲಿ ಭಾಗವಹಿಸದೇ ಬೆನ್ನು ತೋರಿಸಿ, ಜನತೆಯ ಐಕ್ಯತೆಗೆ ವಿರುದ್ಧವಾಗಿ ಕೋಮು ಭಾವನೆಗಳನ್ನು ಹರಡಿದ ಕೆ.ಬಿ. ಹೆಡ್ಗೇವಾರ್ ಭಾಷಣದ ತುಣುಕನ್ನು ‘ ಯಾರು ಆದರ್ಶ ಪುರುಷ ‘ ಎಂಬ ಶೀರ್ಷಿಕೆ ಅಡಿಯಲ್ಲಿ ತಂದಿದ್ದಾರೆ. ಆದರೆ, ಸ್ವತಂತ್ರ ಸಂಗ್ರಾಮದ ರಾಜಿರಹಿತ ಹೋರಾಟದ ಪ್ರಶ್ನಾತೀತ ನಾಯಕ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಪಾಠವನ್ನು ತೆಗೆದು ಹಾಕಿದ್ದರು.  ಹಾಗೂ ಇತರ ಪ್ರಗತಿಪರ ಚಿಂತಕರ ಪಾಠಗಳನ್ನು ಕೈ ಬಿಡಲಾಗಿದೆ. ಯಾವ ಕಾರಣಗಳಿಗಾಗಿ ಈ ಪಾಠಗಳನ್ನು ಕೈ ಬಿಡಲಾಗಿದೆ ಎಂಬುದಕ್ಕೆ ಸ್ಪಷ್ಟನೆ ದೊರೆತಿಲ್ಲ ಎಂದರು.

ಈಗ ರಾಜ್ಯಾದದ್ಯಾಂತ  ಹೋರಾಟಗಳು ಭುಗಿಲೆದ್ದ ಹಿನ್ನೆಲೆಯಲ್ಲಿ ಜನತೆಯ ಹೋರಾಟಕ್ಕೆ ಸರ್ಕಾರ ಮಣಿದಿದೆ. ಇತ್ತೀಚೆಗೆ ಮಾನ್ಯ ಮುಖ್ಯಮಂತ್ರಿಗಳು ಬರೆದ ಪತ್ರದಲ್ಲಿ ‘ ಆಕ್ಷೇಪಾರ್ಹ ವಿಷಯಗಳು ಇದ್ದಲ್ಲಿ ಮತ್ತೊಮ್ಮೆ ಪರಿಷ್ಕರಿಸುವ ಮುಕ್ತ ಮನಸ್ಸು ಸರ್ಕಾರ ಹೊಂದಿದೆ ‘ ಎಂದು ಬರೆದಿದ್ದಾರೆ. ಅಂದರೆ, ಪಠ್ಯದಲ್ಲಿ ದೋಷಗಳು ಹಾಗೂ  ಸಮಸ್ಯೆಗಳು ಇದ್ದವು ಎಂದು ಸರ್ಕಾರ ಒಪ್ಪಿಕೊಂಡಿದೆ. ಆದರೆ ಈ ಮರು ಪರಿಷ್ಕೃತ ಪಠ್ಯದಲ್ಲಿ ಮಿತಿಗಳು  ದೋಷಗಳು ಇವೆ. ಹೀಗಿರುವಾಗ, ದೋಷಪೂರಿತ ಮರು ಪರಿಷ್ಕೃತ ಪಠ್ಯವನ್ನು ತರುವುದು ಅತ್ಯಂತ ವಿವಾದಾಸ್ಪದ ಆಗುತ್ತದೆ. ಹಾಗಾಗಿ ದೋಷವುಳ್ಳ ಪಠ್ಯಗಳನ್ನು  ಹೊಂದಾಣಿಕೆ ಮಾಡಿ ಮಕ್ಕಳಿಗೆ ಕೊಡಲು ಸಾಧ್ಯ ಆಗುವುದಿಲ್ಲ. ಹಾಗಾಗಿ, ಮರು ಪರಿಷ್ಕೃರಣೆಯನ್ನು ಕೈಬಿಟ್ಟು, ಮೊದಲು ಇದ್ದ ಪಠ್ಯವನ್ನೆ ಮುಂದುವರೆಸಬೇಕು ಮತ್ತು ಆ ಮೂಲಕ ಪಠ್ಯದಲ್ಲಿ ಮಹಾನ್ ವ್ಯಕ್ತಿಗಳ ಆದರ್ಶ, ಮೌಲ್ಯಗಳು ಹಾಗೂ ಘನತೆಯನ್ನು ಎತ್ತಿ ಹಿಡಿಯಬೇಕು. ‘ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *