ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಬಸ್ ನಿಲ್ದಾಣ ಬಂದ್ ಮಾಡಿ ಎಸ್ಎಫ್ಐ ಪ್ರತಿಭಟನೆ

ರಾಣೇಬೆನ್ನೂರ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯಕ್ಕೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ರಾಣೇಬೆನ್ನೂರ ತಾಲ್ಲೂಕ ಸಮಿತಿ ನೇತೃತ್ವದಲ್ಲಿಂದು ನಗರದ ಕೇಂದ್ರ ಬಸ್ ನಿಲ್ದಾಣ ಬಂದ್ ಮಾಡಿ ಪ್ರತಿಭಟಿಸಿದರು, ಅಲ್ಲದೆ, ತಹಶಿಲ್ದಾರರು ಹಾಗೂ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ಉದ್ದೇಶಿಸಿ ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತಾನಾಡಿ ಪ್ರತೀ ವರ್ಷ ಗ್ರಾಮೀಣ ಪ್ರದೇಶದಿಂದ ರಾಣೇಬೆನ್ನೂರು ನಗರ ಪ್ರದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ಅರಸಿ ಬರುವ ವಿಧ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು ರಾಣೇಬೆನ್ನೂರು ಡಿಪೋಗೆ ಸಂಬಂಧಪಟ್ಟ ಹೊನ್ನತ್ತಿ, ದೇವರಗುಡ್ಡ,ಗುಡ್ಡದ ಆನ್ವೇರಿ ಮಾರ್ಗವಾಗಿ ಚಲಿಸುವ ಬಸ್ಸುಗಳಲ್ಲಿ ಶಾಲಾ ಸಮಯಕ್ಕೆ ಸರಿಯಾಗಿ ಬಸ್‌ಗಳು ಬರದೇ ಹಾಗೂ ಬರುವ ಬಸ್ಸುಗಳು ಸಂಪೂರ್ಣ ಭರ್ತಿಯಾಗಿ ಸ್ಥಳಾವಕಾಶ ಸಿಗದೇ ನೂಕುನೂಗ್ಗಲಿನಿಂದ ಹಲವಾರು ವಿದ್ಯಾರ್ಥಿಗಳು ಖಾಸಗಿ ವಾಹನಗಳನ್ನ ಅವಲಂಬಿಸಿದ್ದು ಶಾಲಾ ವೇಳೆಗೆ ಸರಿಯಾಗಿ ಹಾಜರಾಗದೇ ತರಗತಿಗಳಿಗೆ ಗೈರಾಗುತ್ತಿದ್ದು ವಿದ್ಯಾರ್ಥಿಗಳು ವ್ಯತಿರೀಕ್ತ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಅಲ್ಲದೆ, ಬಸ್ಸುಗಳು ಭರ್ತಿಯಾಗಿ ವಿಧ್ಯಾರ್ಥಿಗಳು ಬಸ್ಸುಗಳ ಬಾಗಿಲುಗಳಲ್ಲಿ ನಿಂತು ಬರುವಾಗ ಕೆಲ ಅಪಘಾತಗಳು ಸಂಭವಿಸಿದ್ದು ಉದಾಹರಣೆಗಳಿವೆ ಇದು ವಿದ್ಯಾರ್ಥಿಗಳ ಜೀವದ ಪ್ರಶ್ನೆಯಾಗಿದ್ದು ಇದುವರೆಗೂ ಸಾರಿಗೆ ಇಲಾಖೆ ಇದರ ಬಗ್ಗೆ ಗಮನ ಹರಿಸದಿರುವುದು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ನಿರ್ಲಕ್ಷ ವಹಿಸಿರುವದು ಮೇಲ್ನೋಟಕ್ಕೆ ಕಂಡು ಬಂದಿದೆ ಹಾಗೂ ಬಹು ಮುಖ್ಯವಾಗಿ ವಿದ್ಯಾರ್ಥಿನಿಯರಿಗೆ ಅತೀ ಹೆಚ್ಚು ಸಮಸ್ಯೆಯಾಗಿದೆ ಇದು ಕೇವಲ ಹೊನ್ನತ್ತಿ ದೇವರಗುಡ್ಡ ಗುಡ್ಡದ ಆನ್ವೇರಿ ಸಮಸ್ಯೆಯಾಗಿರದೇ ಬೇಲೂರು ಅಂಕಸಾಪುರ ಮಾರ್ಗ, ಹರನಗಿರಿ ಕುದರಾಳ ಕುಪ್ಪೇಲೂರು ಹಲಗೇರಿ ಮಾರ್ಗದ ವಿದ್ಯಾರ್ಥಿಗಳದ್ದು ಇದೇ ಸಮಸ್ಯೆಯಾಗಿದೆ.

ಇದು ವಿದ್ಯಾರ್ಥಿಗಳ ಶೈಕ್ಷಣಿಕ ಬೇಳವಣಿಗೆಗೆ ಅಗಾಧ ಪರಿಣಾಮವನ್ನುಂಟು ಮಾಡುತ್ತಿದ್ದು ಹಾಗೂ ವಿದ್ಯಾರ್ಥಿಗಳ ಮಾನಸಿಕ ಖಿನ್ನತೆಗೆ ಕಾರಣವಾಗಿದೆ ಹಾಗೂ ಇದೀಗ ಕೊರೊನಾದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಸಿದಿದ್ದು ಮುಂಬರುವ ದಿನಗಳಲ್ಲಿ ಕರೋನಾ ಹೆಚ್ಚುವ ಆತಂಕವಾಗಿದ್ದು ಬಸ್ಸುಗಳಲ್ಲಿ ಯಾವುದೇ ಸಾಮಾಜಿಕ ಅಂತರ ಹಾಗೂ ಸರಕಾರದ ಯಾವುದೇ ಕೋವಿಡ್ ಅದೇಶಗಳನ್ನ ಪಾಲನೆ ಮಾಡದೇ ಇರುವದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುವ ವಾತಾವರಣ ಸೃಷ್ಟಿಯಾಗಿದ್ದು ದಯವಿಟ್ಟು ಸದರಿ ಸಮಸ್ಯೆಗಳನ್ನ ಗಮನದಲ್ಲಿಟ್ಟುಕೊಂಡು ಸಾರಿಗೆ ಇಲಾಖೆಗೆ ಕಪ್ಪುಚುಕ್ಕೆ ಬಾರದಂತೆ ತಾವುಗಳು ಕ್ರಮ ವಹಿಸಿ ಹೆಚ್ಚುವರಿ ಬಸ್‌ಗಳನ್ನು ನಿಯೊಜಿಸಿ ಹಾಗೂ ಶಾಲಾ ಸಮಯಕ್ಕೆ ಸರಿಯಾಗಿ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಿಕೊಡುವದರ ಮೂಲಕ ವಿಧ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿಸುವುದಕ್ಕೆ ಸಹಕಾರಿಯಾಗಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಆಗ್ರಹಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಛಲಚಾದಿ ಮಹಸಭಾ ಅಧ್ಯಕ್ಷ ಮಲ್ಲೇಶಪ್ಪ ಮದ್ದಲೇರ್ ಮಾತಾನಾಡಿ ವಿದ್ಯಾರ್ಥಿಗಳು ದಿನನಿತ್ಯ ಸಮಸ್ಯೆ ಅನುಭವಿಸುತ್ತಿದ್ದು ಯಾವುದೇ ಅಧಿಕಾರಿಗಳು ಈತ ಗಮನ ಹರಿಸಲು ಮುಂದಾಗುತ್ತಿಲ್ಲ. ವಿದ್ಯಾರ್ಥಿನಿಯರು ಅತೀ ಹೆಚ್ಚು ಬಸ್ಸಿನ ಸಮಸ್ಯೆ ಅನುಭವಿಸುತ್ತಿದ್ದಾರೆ ಅನೇಕ ಬಾರಿ ಮನವಿ ಮಾಡಿಕೊಂಡರು ಸಹ ಯಾವುದೇ ಸ್ಪಂದನೆ ನೀಡದೇ ವಿದ್ಯಾರ್ಥಿಗಳ ಜೀವನದ ಜೊತೆಗೆ ಆಟವಾಡುವ ಅಧಿಕಾರಿಗಳು ಇನ್ನುಮುಂದೆ ಆದರೂ ಹೆಚ್ಚಿತ್ತುಕೊಂಡು ಸಮಸ್ಯೆ ಬಗೆಹರಿಸಲು ಮುಂದಾಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಿ ಮಾತಾನಾಡಿದ ಕೆಎಸ್ಆರ್‌ಟಿಸಿ ಅಧಿಕಾರಿಗಳು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಬಸ್ಸುಗಳ ಜೊತೆಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಡಿಸೆಂಬರ್ 10ನೇ ದಿನಾಂಕದವರೆಗೆ ಕಾಲ ಅವಕಾಶ ತೆಗೆದುಕೊಂಡು ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ತಾಲ್ಲೂಕು ಕಾರ್ಯದರ್ಶಿ ಶ್ರೀಧರ್ ಛಲವಾದಿ, ಮುಖಂಡರಾದ ಹೊನ್ನಪ್ಪ ಕುದರಿಹಾಳ, ಗುಡ್ಡಪ್ಪ ಮಡಿವಾಳರ, ವಿಜಯ ಲಮಾಣಿ, ಗುರು ಮದ್ದಲೇರ್, ಶಿವು ಛಲವಾದಿ, ಪ್ರದೀಪ್, ಅಭಿ ಸವಣೂರ, ಶಾರದ ಎಮ್, ವನಿತಾ ಆನ್ವೇರಿ, ಮಧು ಛಲವಾದಿ, ಮಮತಾ, ರೇಖಾ ಎಚ್, ಭೂಮಿಕಾ ಆರ್, ಸೇರಿದಂತೆ ನೂರಾರು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *