ಹಾವೇರಿ,ಫೆ.11: ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ, ಹಾವೇರಿ ಬಸ್ ನಿಲ್ದಾಣದ ಮುಂದೆ ಭಾರತ್ ವಿಧ್ಯಾರ್ಥಿ ಫೆಢರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಹಾವೇರಿಯ ಕೆರಿಮತ್ತಿಹಳ್ಳಿ ಪಿ. ಜಿ. ಸೆಂಟರ್ ಗೆ ಮಧ್ಯಾಹ್ನದ ವೇಳೆಗೆ ವಿದ್ಯಾರ್ಥಿಗಳ ಅನುಕೂಲ ತಕ್ಕಂತೆ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಎಸ್ಎಫ್ಐ ಕಾರ್ಯಕರ್ತರು ಕೆಎಸ್ಆರ್ ಟಿಸಿ ಅಧಿಕಾರಿಗಳಾದ ವಿ.ಎಸ್.ವಗ್ಗಣ್ಣನವರ ಮೂಲಕ ಮನವಿ ಸಲ್ಲಿಸಿದ್ದರು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ ಹಾವೇರಿ ನಗರದಿಂದ 8 ಕಿ.ಮೀ, ಹೊರವಲದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಪಿ.ಜಿ. ಸೆಂಟರ್ ನಲ್ಲಿ ಸರಿಸುಮಾರು ನೂರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಎರಡು ಬಸ್ ಬರುತ್ತಿವೆ. ಆದರೆ ಮಧ್ಯಾಹ್ನ ಮತ್ತು ಸಂಜೆ ವೇಳೆಗೆ ನಗರಕ್ಕೆ ಹೋಗಲು ಬಸ್ಸುಗಳೇ ಇಲ್ಲ. ವಿದ್ಯಾರ್ಥಿಗಳು ಹಾನಗಲ್ ಮುಖ್ಯರಸ್ತೆಯಲ್ಲಿರುವ ಹೊಸಹಳ್ಳಿಯವರೆಗೆ 1.5 ಕಿ.ಮೀ. ಕಾಲ್ನಾಡಿಗೆ ಮೂಲಕ ಬಿಸಿಲಿನಲ್ಲಿ ಹೋಗಿ ಬಸ್ ಹಿಡಿಯಬೇಕು. ಆದಕಾರಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆರಿಮತ್ತಿಹಳ್ಳಿ ಸ್ನಾತಕೋತ್ತರ ಕೇಂದ್ರದಿಂದ ಮಧ್ಯಾಹ್ನ ಮತ್ತು ಸಂಜೆ ವೇಳೆಗೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡರಾದ ಸಿದ್ದು ಅಂಗಡಿ, ಫಕೀರೆಶ್ ಬೆಂಕನಹಳ್ಳಿ, ಪ್ರವೀಣ್ ಎಚ್.ಆರ್, ಸಚ್ಚಿನ್ ದೊಡ್ಡಮನಿ, ಶಿವರಾಜ ಆರ್. ಡಿ, ನಿಯಾಜ್ ಎಸ್.ಕೆ, ಪ್ರದೀಪ್ ನಾಯಕ, ಮೋಹನ ಟಿ.ಎಫ್. ಮಹತೇಶ ಪಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.