ವಿದ್ಯಾರ್ಥಿ ನಿಲಯ ಕಟ್ಟಡ ಮೇಲೆ ಬಿದ್ದ ಬೃಹತ್‌ ಹುಣಸೆ ಮರ

ವರದಿ : ಈಶ್ವರಪ್ಪ ಎಲ್‌.ಎನ್‌

ಗುಡಿಬಂಡೆ: ಮೇಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಪರಿಶಿಷ್ಟ ವರ್ಗದ ಕಟ್ಟಡದ ಮುಂದೆ ಇದ್ದ ದೊಡ್ಡ  ಹುಣಸೆ ಮರ ಜೋರಾಗಿ ಬೀಸಿದ ಗಾಳಿಗೆ ಕಟ್ಟಡದ ಮೇಲೆ ಬಿದ್ದಿದೆ. ಇದರಿಂದ ಯಾರಿಗೂ ಪ್ರಾಣಾಪಾಯವಾಗದೆ ಅಪಾಯದಿಂದ ಪಾರಾಗಿದ್ದಾರೆ.

ಪಟ್ಟಣದಲ್ಲಿ ಇರುವಂತಹ ಮೇಟ್ರಿಕ್ ಪೂರ್ವ ಬಾಲಕರ ವಿಧ್ಯಾರ್ಥಿ ನಿಲಯ ಇದ್ದ ಈ ಕಟ್ಟಡದ ಮುಂಭಾಗದಲ್ಲಿ ಒಂದು ದೊಡ್ಡ ಹುಣಸೆ ಮರವಿದ್ದು. ಇದು ತುಂಬಾ ವರ್ಷಗಳಿಂದ ಇದ್ದಂತಹ ಮರವಾಗಿದೆ. ವಿದ್ಯಾರ್ಥಿಗಳಿಗೆ ಶಾಲೆಗಳು ಮುಗಿದ ಕಾರಣ ವಿದ್ಯಾರ್ಥಿಗಳು ಹಾಸ್ಟಲ್ ನಿಂದ ಮನೆಗಳಿಗೆ ಹೋಗಿರುತ್ತಾರೆ .ಇಂತಹ ಸಮಯದಲ್ಲಿ ಮರ ಬಿದ್ದಿದೆ. ಹಾಸ್ಟಲ್ ನಲ್ಲಿ ವಿದ್ಯಾರ್ಥಿಗಳು ಇದ್ದಂತಹ ಸಮಯದಲ್ಲಿ ನಿಲಯದ ಮುಂಭಾಗದಲ್ಲಿ ಅಟಗಳನ್ನು ಆಡಿಕೊಳ್ಳುವುದು. ಆವರಣದಲ್ಲಿ ಎಲ್ಲರೂ ಕೂತು ಓದಿಕೊಳ್ಳುವುದನ್ನು ಮಾಡುತ್ತಿದ್ದರು.

ಪಕ್ಕದಲ್ಲಿ ಕಾಲೇಜೊಂದರ ಬಾಲಕರ ವಿದ್ಯಾರ್ಥಿ ನಿಲಯವು ಸಹ ಇದೆ. ಇದೇ ಮಾರ್ಗವಾಗಿ ವಿದ್ಯಾರ್ಥಿಗಳು ಹಾಗು ಅಡುಗೆ ಸಿಬ್ಬಂದಿ. ಸಿಬ್ಬಂದಿ ವರ್ಗದವರು ಸಹ ನಿಲಯಕ್ಕೆ ಹೋಗಿಬರುತ್ತಿದ್ದರು. ಆದರೆ ಪ್ರಾಣ ಹಾನಿಯಾಗಿರುವುದಿಲ್ಲ. ನಂತರ ಸಂಬಂದ ಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಮರವನ್ನು ತೆರವು ಮಾಡಲು ಅರಣ್ಯ ಇಲಾಖೆಯವರಿಗೆ ಪತ್ರವನ್ನು ಬರೆದು ತಿಳಿಸಿದ್ದಾರೆ.

ಹಾಸ್ಟಲ್ ಮುಂಭಾಗದಲ್ಲಿ ಇದ್ದ ಮರವು ಕಟ್ಟಡದ ಆವರಣದೊಳಗೆ ಬಿದ್ದಿದೆ ಅದನ್ನು ಗಮನಿಸಿ ಅರಣ್ಯ ಇಲಾಖೆಯವರಿಗೆ ಮರವನ್ನು ತೆರವು ಮಾಡಲು ತಿಳಿಸಲಾಗಿದೆ.
ದಾಸಪ್ಪ ನಿಲಯ ಪಾಲಕರು, ಮೇಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ

Donate Janashakthi Media

Leave a Reply

Your email address will not be published. Required fields are marked *